NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನಾಲ್ಕೂ ನಿಗಮಗಳ ಎಲ್ಲ ತರಬೇತಿ ನೌಕರರಿಗೂ ಪ್ರತಿ ತಿಂಗಳು ತರಬೇತಿ ಭತ್ಯೆ 14 ಸಾವಿರ ರೂ. ನಿಗದಿಪಡಿಸಿ ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ತರಬೇತಿ ನೌಕರರ ತರಬೇತಿ ಭತ್ಯೆಯನ್ನು 14 ಸಾವಿರ ರೂಪಾಯಿಗೆ ಪರಷ್ಕರಿಸಿ ಇದೇ ಆ.1ರಿಂದ ಜಾರಿಗೆ ಬರುವಂತೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ನಿನ್ನೆ ಅಂದರೆ ಸೋಮವಾರ ಆ.19ರಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಅವರು ಆದೇಶ ಹೊರಡಿಸಿದ್ದು, ಹುದ್ದೆವಾರು ಇದ್ದ ವೇತನ ತಾರತಮ್ಯತೆ ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತಿ ನೌಕರರಿಗೆ ಉಲ್ಲೇಖ-01 ರನ್ವಯ (ಸುತ್ತೋಲೆ ಸಂಖ್ಯೆ- 1558/2015, ದಿನಾಂಕ: 14-09-2015) ನಿಗದಿಪಡಿಸಲಾಗಿದ್ದ ತರಬೇತಿ ಭತ್ಯೆಯನ್ನು ಉಲ್ಲೇಖ-02 ರನ್ವಯ ( ಸುತ್ತೋಲೆ ಸಂಖ್ಯೆ – 1720/2024, ದಿನಾಂ: 30-01-2024) ತಾಂತ್ರಿಕ ಸಹಾಯಕ ಹುದ್ದೆಗೆ ಮಾತ್ರ ಪರಿಷ್ಕರಿಸಲಾಗಿತ್ತು.

ಆದರೆ ಪ್ರಸ್ತುತ ತರಬೇತಿ ಭತ್ಯೆ ನೀಡುವಲ್ಲಿ ಏಕರೂಪತೆ ಕಾಯ್ದುಕೊಳ್ಳುವ ಉದ್ದೇಶದಿಂದ ಇದೇ ಆಗಸ್ಟ್‌ 1-2024 ರಿಂದ ಜಾರಿಗೆ ಬರುವಂತೆ ಉಳಿದ ವೃಂದಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ತರಬೇತಿ ನೌಕರರಿಗೂ ಪ್ರತಿ ತಿಂಗಳೂ ಸಹ 14,000 ರೂ.ಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ.

ಇನ್ನು ಈ ಸಂಬಂಧ ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ನ.ಸಾ.ಸಂಸ್ಥೆ/ವಾ.ಕ.ರ.ಸಾ.ಸಂಸ್ಥೆ/ಈ.ಕ.ರ.ಸಾ.ಸಂಸ್ಥೆ ಅವರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಆದೇಶ ಪ್ರತಿಯನ್ನು ಕಳುಹಿಸಿದ್ದಾರೆ.

ಅಲ್ಲದೆ ನಿರ್ದೇಶಕರು (ಸಿಬ್ಬಂದಿ:ಜಾಗೃತ) ಕ.ರಾ.ರ.ಸಾ.ನಿಗಮ, ಕೇಂದ್ರ ಕಚೇರಿ, ಬೆಂಗಳೂರು ಅವರ ಮಾಹಿತಿಗಾಗಿ. ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು. ಕ.ರಾ.ರ.ಸಾ.ನಿಗಮ / ಬೆಂ.ಮ.ನ.ಸಾ.ಸಂಸ್ಥೆ/ ವಾ.ಕ.ರ.ಸಾ.ಸಂಸ್ಥೆ ಕ.ಕ.ರಾ.ನಿಗಮ ಅವರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಕಳುಹಿಸಿದ್ದಾರೆ.

ಇದರ ಜತೆಗೆ ಎಲ್ಲ ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು ಕೇಂದ್ರೀಯ/ಪ್ರಾದೇಶಿಕ ಕಾರ್ಯಗಾರ ಬೆಂಗಳೂರು /ಹಾಸನ, ಪ್ರಾಂಶುಪಾಲರು ಕೇಂದ್ರೀಯ/ಪ್ರಾದೇಶಿಕ ತರಬೇತಿ ಕೇಂದ್ರ ಬೆಂಗಳೂರು /ಹಾಸನ/ ಮಳವಳ್ಳಿ, ಹೊಳಲ್ಲೆರೆ ಮತ್ತು ಮಾಲೂರು ಅವರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಆದೇಶ ಪ್ರತಿಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ