KSRTC: ಸರ್ಕಾರ ತೋರುತ್ತಿರುವ ಅಸಡ್ಡೆಗೆ 5ವರ್ಷಗಳಿಂದಲೂ ಸಾರಿಗೆ ಅಧಿಕಾರಿಗಳು- ನೌಕರರಿಗೆ ಲಕ್ಷಾಂತರ ರೂ. ಆರ್ಥಿಕ ನಷ್ಟ


ಬೆಂಗಳೂರು: ಯಾವ ಸರ್ಕಾರಿ ಇಲಾಖೆ, ನಿಗಮ ಮಂಡಳಿಗಳಿಗೂ ತೋರದ ತಾತ್ಸಾರವನ್ನು ಸರ್ಕಾರ ಈ ಸಾರಿಗೆಯ ನಾಲ್ಕೂ ನಿಗಮಗ ಮಂಡಳಿಗಳ ನೌಕರರ ಬಗ್ಗೆ ತೋರುತ್ತಿರುವುದರಿಂದ ಕಳೆದ 5 ವರ್ಷಗಳಿಂದಲೂ ಅಧಿಕಾರಿಗಳು/ ನೌಕರರು ಆರ್ಥಿಕವಾಗಿ ಕಾಲಕಾಲಕ್ಕೆ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಹೌದು! 2020 ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿ ಅಂದಿನ ಬಿಜೆಪಿ ಸರ್ಕಾರ 2023ರಲ್ಲಿ ಘೋಷಣೆ ಮಾಡಿತ್ತು. ಅದರ ಹಿಂಬಾಕಿಯನ್ನು ನಿವೃತ್ತ ನೌಕರರಿಗೆ ಕೊಡಲಾಗಿದೆ. ಆದರೆ, ಹಾಲಿ ಡ್ಯೂಟಿ ಮಾಡುತ್ತಿರುವ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಕೊಡಬೇಕಿದ್ದು ಈವರೆಗೂ ಸಬೂಬು ಹೇಳಿಕೊಂಡೆ ಇಂದಿನ ಸರ್ಕಾರ ಕಳೆದ ಎರಡೂವರೆ ವರ್ಷಗಳಿಂದಲೂ ಮುಂದೂಡಿಕೊಂಡೆ ಬರುತ್ತಿದೆ.
ಜತೆಗೆ 2024 ಜನವರಿ 1ರಿಂದ ಮತ್ತೆ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅದಕ್ಕೆ ಬೇರೆಯೆ ಕತೆಕಟ್ಟಿ ಸಾರಿಗೆ ನೌಕರರ ಸಂಘಟನೆಗಳ ದಾರಿ ತಪ್ಪಿಸುತ್ತಿದೆ. ಇದರಿಂದ ನೌಕರರಿಗೆ ಆರ್ಥಿಕವಾಗಿ ಭಾರಿ ಲಾಸ್ ಆಗುತ್ತಿದೆ.
ಕಳೆದ 2024 ಜನವರಿ 1ರಿಂದ ವೇತನ ಹೆಚ್ಚಳವಾದರೆ ತುಟ್ಟಿ ಭತ್ಯೆ (ಡಿಎ)ಯಲ್ಲಿ ಪ್ರತಿ 6ತಿಂಗಳಿಗೊಮ್ಮೆ ಹೆಚ್ಚಳವಾಗಬೇಕು. ಆದರೆ 2024 ಜನವರಿ 1ರಿಂದ ವೇತನ ಹೆಚ್ಚಳವಾಗದೆ ಇರುವುದರಿಂದ ಹೆಚ್ಚಳವಾಗುತ್ತಿರುವ ಡಿಎಯಿಂದ ಸಿಗಬೇಕಿರುವ ಹೆಚ್ಚಿನ ಆರ್ಥಿಕ ಸೌಲಭ್ಯದಿಂದ ನೌಕರರು ಪ್ರಸ್ತುತ ವಂಚಿತರಾಗುತ್ತಿದ್ದಾರೆ.
ಈಗಾಗಲೇ 4 ಬಾರಿ ಡಿಎ ಹೆಚ್ಚಳವಾಗಿದ್ದು, ಅದರಿಂದ ಸಿಗಬೇಕಿರಯವ ಹೆಚ್ಚಿನ ಆರ್ಥಿಕ ಸೌಲಭ್ಯ ಸಿಗದೆ ( ವೇತನ ಹೆಚ್ಚಳವಾದ ಮೇಲೆ ಅದನ್ನು ಕೊಡಬಹದು ಆದರೆ ಕಾಲಕಾಲಕ್ಕೆ ಸರಿಯಾಗಿ ಕೊಡದೆ ಆರ್ಥಿ ನಷ್ಟ ಅನುಭವಿಸುತ್ತಿದ್ದಾರೆ ನೌಕರರು) ವಂಚಿತರಾಗಿದ್ದಾರೆ.
ಈ ಬಗ್ಗೆ ಸರ್ಕಾರವೂ ಕೂಡ ಯಾವ ಸರ್ಕಾರಿ ಇಲಾಖೆ, ನಿಗಮ ಮಂಡಳಿಗಳಿಗೂ ತೋರದ ತಾತ್ಸಾರವನ್ನು ಸಾರಿಗೆಯ ನಾಲ್ಕೂ ನಿಗಮಗ ಮಂಡಳಿಗಳ ನೌಕರರ ಬಗ್ಗೆ ತೋರಿಸುತ್ತಿರುವುದರಿಂದ ಕಳೆದ 5 ವರ್ಷಗಳಿಂದಲೂ ನೌಕರರು ಆರ್ಥಿಕವಾಗಿ ಕಾಲಕಾಲಕ್ಕೆ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಹೀಗೆ ನೌಕರರು ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ ಅದನ್ನು ಖಡಕ್‌ಆಗಿ ಯಾವುದೇ ಮುಲಾಜಿಗೂ ಒಳಗಾಗದೆ ಕೇಳಬೇಕಿರುವ ಸಾರಿಗೆ ನೌಕರರ ಪರ ಸಂಘಟನೆಗಳು ಹಲ್ಲುಕಿತ್ತ ಹಾವಿನಂತೆ, ಬಾಲಮುದುರಿಕೊಂಡ ಪ್ರಾಣಿಯಂತೆ ನಡೆದುಕೊಳ್ಳುತ್ತಿವೆ.
ಕಳೆದ ಐದು ವರ್ಗಳಿಂದಲೂ ಈ ಸಂಘಟನೆಗಳು ವೇತನ ಸಂಬಂಧ ಏನನ್ನು ಮಾಡಿಸಿಲ್ಲ ಕಾರಣ ಇವರಲ್ಲೇ ಒಗ್ಗಟ್ಟಿಲ್ಲ. ಇನ್ನು ನೌಕರರ ಒಳಿತು ಕೆಟ್ಟದರ ಬಗ್ಗೆ ಇವರಿಗೆಲ್ಲಿದೆ ಕಾಳಜಿ. ಇನ್ನಾದರೂ ಸರ್ಕಾರಕ್ಕೆ ಕಿವಿ ಹಿಂಡಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸುವಂತ್ತ ಮುಂದಾಗಬೇಕಿದೆ.
ಇದರ ಜತೆಗೆ ಇನ್ನಾದರೂ ಸರ್ಕಾರ ಕೂಡ ಜವಾಬ್ದಾರಿತದಿಂದ ನಡೆದುಕೊಂಡು ನೌಕರರಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಸರಿಪಡಿಸಬೇಕು. ಜತೆಗೆ ತಾವೇ ಕೊಟ್ಟ ಭರವಸೆಯಂತೆ ನಡೆದುಕೊಂಡು ನುಡಿದಂತೆ ನಡೆಯುತ್ತಿದ್ದೇವೆ ಎಂಬುವುದನ್ನು ತೋರಿಸಬೇಕಿದೆ.
Related
