CrimeNEWSನಮ್ಮಜಿಲ್ಲೆ

KSRTC ತುಮಕೂರು: ಡಿಸಿ ಚಂದ್ರಶೇಖರ್ ಅಮಾನತಿಗೆ ದೂರುಕೊಟ್ಟು ಎಂಡಿಗೆ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅದಕ್ಕೂ ಮೊದಲು ಅವರನ್ನು ಅಮಾನತು ಮಾಡಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರವರಿಗೆ ಬಾನುಪ್ರಕಾಶ್ ಎಂಬುವರು ದೂರು ನೀಡಿದ್ದಾರೆ.

ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರುಶೇಖರ್ ವಿರುದ್ಧ ಬಾನುಪ್ರಕಾಶ್ (C/o ರಾಜಶೇಖರ್, ನಂ:93. ಮಾರುತಿ ಫಾರಂ, ದೂಂದರಹಳ್ಳಿ, ಅಪೊಲೋ ಅಂಗ್ಲ ಪೌಢಶಾಲೆ ಹತ್ತಿರ, ಲಕ್ಷ್ಮೀಪುರ ಅಂಚೆ. ಬೆಂಗಳೂರು ಉತ್ತರ-562152) ಅವರು ಬೆಂಗಳೂರಿನ ಶಾಂತಿನಗರದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಗೆ ಇದೇ ಫೆ.13ರಂದು ತೆರಳಿ ದೂರು ನೀಡಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಈ ಅಧಿಕಾರಿಯ ಮೇಲೆ ಹಲವಾರು ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದರು ಸಹ ಇವರ ವಿರುದ್ಧ ಈವರೆಗೂ ಯಾವುದೆ ಕ್ರಮ ಜರುಗಿಸಿಲ್ಲ. ವಿಜಯಪಥ ಸಮಗ್ರ ಸುದ್ದಿಯಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದರೆ ಸಂಸ್ಥೆಯ ಮಾನ ಮರ್ಯಾದೆಯನ್ನು ಹಾಳು ಮಾಡಿ ಸಂಸ್ಥೆಗೆ ಕೆಟ್ಟ ಹೆಸರನ್ನು ತಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಜತೆಗೆ ಬೆಂಗಳೂರು ಮಹನಗರ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈತ 7-04-2021ರಲ್ಲಿ ಎಲ್ಲ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿ ಗೈರು ಹಾಜರಾಗಿದ್ದರೂ ಸಹ ಕೆಲವೊಂದು ನೌಕರರನ್ನು ಯಾವುದೇ ತನಿಖೆ ನಡೆಸದೆ ವಜಾಗೊಳಿಸಿದ್ದಾರೆ.

ಇನ್ನು ಈ ಪ್ರಕರಣಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದೆ ದಿಕ್ಕು ತಪ್ಪಿಸುವ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇವರು ಶಿಸ್ತುಪಾಲನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ನೌಕರರಿಗೆ ತಾರತಮ್ಯತೆ ಮಾಡಿ ವೈಯಕ್ತಿಕವಾಗಿ ಕರ್ತವ್ಯ ನಿರ್ವಹಿಸಿ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಈ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿ ತಾವು ಇವರನ್ನು ಅಮಾನತು ಮಾಡಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಿ ಎಂದು ಬಾನುಪ್ರಕಾಶ್ ವ್ಯವಸ್ಥಾಪಕ ನಿರ್ದೇಶಕರಿಗೆ ಒತ್ತಾಯಿಸಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಭವಿಷ್ಯದಲ್ಲೂ ಬೆಂಗಳೂರು ಉತ್ತಮವಾಗಿರುವಂತೆ ಯೋಜನೆ ರೂಪಿಸಬೇಕು; ಇಲ್ಲದಿದ್ದರೇ ಬೆಂಗಳೂರಿಗೆ ನಾವು ಮೋಸ ಮಾಡಿದಂತೆ: ಡಿಸಿ... ಬಿಬಿಎಂಪಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ “ಸಂಚಾರಿ ಪ್ರಯೋಗಾಲಯ”: ಡಿಸಿಎಂ ವೀಕ್ಷಣೆ "ನಮ್ಮ ರಸ್ತೆ 2025" ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಸ್ಪೈನಲ್ ಕಾರ್ಡ್ ಶಸ್ತ್ರ ಚಿಕಿತ್ಸೆ ಬಳಿಕ ಕುರುಬೂರು ಶಾಂತಕುಮಾರ್ ಆರೋಗ್ಯದಲ್ಲಿ ಚೇತರಿಕೆ ಸರ್ಕಾರ ನಿಮ್ಮಗಳ ದ್ವಂದ ನಿಲುವನ್ನು ಉಪಯೋಗಿಸಿಕೊಂಡು ಸಾರಿಗೆ ನೌಕರರ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ತಾ ಇದೆ ದೇಹಲಿ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇಖಾ ಗುಪ್ತಾ KSRTC ತುಮಕೂರು: ಡಿಸಿ ಚಂದ್ರಶೇಖರ್ ಅಮಾನತಿಗೆ ದೂರುಕೊಟ್ಟು ಎಂಡಿಗೆ ಒತ್ತಾಯ KSRTC ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್‌: HRMS ತಂತ್ರಾಂಶದ ಮೂಲಕವೇ ರಜೆ ಅರ್ಜಿ ಸಲ್ಲಿಸಬೇಕು- ಮುಖ್ಯ ಸಿಬ್ಬಂದಿ ವ್ಯವಸ... KSRTC ಉತ್ತಮ ಸಾಧನೆ ತೋರಿದ ಡಿಸಿಗಳು, ಉಸ್ತುವಾರಿ ಅಧಿಕಾರಿಗಳು, ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ- ನಿಲ್ದಾಣಕ್ಕೂ ಮೊದಲೆ ಇಳಿದ ಮಹಿಳೆ ಪರ ನಿಂತು ನಾನು ಪೊಲೀಸ್‌ ಎಂದಳು!!