
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರುಶೇಖರ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅದಕ್ಕೂ ಮೊದಲು ಅವರನ್ನು ಅಮಾನತು ಮಾಡಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರವರಿಗೆ ಬಾನುಪ್ರಕಾಶ್ ಎಂಬುವರು ದೂರು ನೀಡಿದ್ದಾರೆ.
ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರುಶೇಖರ್ ವಿರುದ್ಧ ಬಾನುಪ್ರಕಾಶ್ (C/o ರಾಜಶೇಖರ್, ನಂ:93. ಮಾರುತಿ ಫಾರಂ, ದೂಂದರಹಳ್ಳಿ, ಅಪೊಲೋ ಅಂಗ್ಲ ಪೌಢಶಾಲೆ ಹತ್ತಿರ, ಲಕ್ಷ್ಮೀಪುರ ಅಂಚೆ. ಬೆಂಗಳೂರು ಉತ್ತರ-562152) ಅವರು ಬೆಂಗಳೂರಿನ ಶಾಂತಿನಗರದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಗೆ ಇದೇ ಫೆ.13ರಂದು ತೆರಳಿ ದೂರು ನೀಡಿದ್ದಾರೆ.
ಈ ವಿಷಯಕ್ಕೆ ಸಂಭಂದಪಟ್ಟಂತೆ ಈ ಅಧಿಕಾರಿಯ ಮೇಲೆ ಹಲವಾರು ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದರು ಸಹ ಇವರ ವಿರುದ್ಧ ಈವರೆಗೂ ಯಾವುದೆ ಕ್ರಮ ಜರುಗಿಸಿಲ್ಲ. ವಿಜಯಪಥ ಸಮಗ್ರ ಸುದ್ದಿಯಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದರೆ ಸಂಸ್ಥೆಯ ಮಾನ ಮರ್ಯಾದೆಯನ್ನು ಹಾಳು ಮಾಡಿ ಸಂಸ್ಥೆಗೆ ಕೆಟ್ಟ ಹೆಸರನ್ನು ತಂದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಜತೆಗೆ ಬೆಂಗಳೂರು ಮಹನಗರ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈತ 7-04-2021ರಲ್ಲಿ ಎಲ್ಲ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿ ಗೈರು ಹಾಜರಾಗಿದ್ದರೂ ಸಹ ಕೆಲವೊಂದು ನೌಕರರನ್ನು ಯಾವುದೇ ತನಿಖೆ ನಡೆಸದೆ ವಜಾಗೊಳಿಸಿದ್ದಾರೆ.
ಇನ್ನು ಈ ಪ್ರಕರಣಗಳಿಗೆ ಸಂಭಂದಪಟ್ಟ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದೆ ದಿಕ್ಕು ತಪ್ಪಿಸುವ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇವರು ಶಿಸ್ತುಪಾಲನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ನೌಕರರಿಗೆ ತಾರತಮ್ಯತೆ ಮಾಡಿ ವೈಯಕ್ತಿಕವಾಗಿ ಕರ್ತವ್ಯ ನಿರ್ವಹಿಸಿ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಈ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿ ತಾವು ಇವರನ್ನು ಅಮಾನತು ಮಾಡಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಿ ಎಂದು ಬಾನುಪ್ರಕಾಶ್ ವ್ಯವಸ್ಥಾಪಕ ನಿರ್ದೇಶಕರಿಗೆ ಒತ್ತಾಯಿಸಿದ್ದಾರೆ.