ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗವು ದಾಖಲೆಯ ಆದಾಯ 2 ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯವನ್ನು ಒಂದೇದಿನ (ಮಾ.27) ಗಳಿಸಿದೆ ಎಂದು ವಿಭಾಗದ ಸಮಸ್ತ ಅಧಿಕಾರಿಗಳು, ನೌಕರ ವರ್ಗದ ಸಿಬ್ಬಂದಿಗೆ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್. ಗಜೇಂದ್ರ ಕುಮಾರ್ ಅಭಿನಂದಿಸಿದ್ದಾರೆ.
ತುಮಕೂರು ವಿಭಾಗವು ಕಳೆದ ಅಕ್ಟೋಬರ್‌ನಿಂದ ಪ್ರತಿ ಸೋಮವಾರ 1 ಕೋಟಿ ರೂ.ಗಳಿಗಿಂತ ಅಧಿಕ ದೈನಂದಿನ ಆದಾಯ ಗಳಿಸುತ್ತಾ ದಾಖಲೆ ಮಾಡಿದ್ದು, ವಿಭಾಗವು 27,03,2023 ರಂದು ವಿಭಾಗದ ಇತಿಹಾಸದಲ್ಲೇ ಅತ್ಯಧಿಕ ದೈನಂದಿನ ಆದಾಯ 2 ಕೋಟಿಗಿಂತಲೂ ಹೆಚ್ಚಿನ ಸಾಧನೆ ಮಾಡಿದೆ.
ವಿಭಾಗದ ಪ್ರಗತಿಗೆ ಅವಿರತವಾಗಿ ಶ್ರಮಿಸಿರುವ ವಿಭಾಗದ ಸಮಸ್ತ ಚಾಲನಾ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳು, ಆಡಳಿತ ಸಿಬ್ಬಂದಿಗಳು, ಎಲ್ಲ ಮೇಲ್ವಿಚಾರಕರು, ಅಧಿಕಾರಿಗಳು ಮತ್ತು ಅವರ ಕುಟುಂಬ ವರ್ಗದವರಿಗೆ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಸತತ ಸಾಧನೆಗೆ ಕಾರಣೀಭೂತರಾದ ಎಲ್ಲರಿಗೂ ವೈಯಕ್ತಿಕವಾಗಿ ಹಾಗೂ ವಿಭಾಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ರಾಜ್ಯದ ಸಾರಿಗೆಯ ನಾಲ್ಕೂ ನಿಗಮಳಲ್ಲೂ ನೌಕರರು ಇದೇ ರೀತಿ ಕರ್ತತ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಆದಾಯ ಮಾತ್ರ ನಿಗಮದ ಒಂದೇ ಒಂದು ವಿಭಾಗದಲ್ಲಿ ಹೆಚ್ಚಾಗಿದೆ ಎಂದರೆ, ಅಲ್ಲಿನ ನೌಕರರನ್ನು ವಿಭಾಗೀಯ ನಿಯಂತ್ರಣಾಧಿಕಾರಿಗಳು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಅಂದರೆ, ತುಮಕೂರು ವಿಭಾಗಕ್ಕೆ ಬಂದ ಹಿರಿಯ ವಿಭಾಗೀಯ ನಿಯಂತ್ರನಾಧಿಕಾರಿಯಾಗಿ ಬಂದ ಎ.ಎನ್.ಗಜೇಂದ್ರ ಕುಮಾರ್ ಅವರು ನೌಕರರ ಬಗ್ಗೆ ತೋರುತ್ತಿರುವ ಕಾಳಜಿ ನಡೆಸಿಕೊಳ್ಳುವ ರೀತಿಯಿಂದ ಈ ಸಾಧನೆ ಸಾದ್ಯವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಹೀಗಾಗಿ ವಿಭಾಗದಲ್ಲಿ ಆಗಿರುವ ಸಾಧನೆ ಇತರ ನಿಗಮಗಳಿಗೆ ಮಾದರಿಯಾಗಿದೆ ಎಂದು ನೌಕರರೇ ಸಂತಸದಿಂದ ಹೇಳಿಕೊಳ್ಳುತ್ತಿದ್ದಾರೆ.
ಹೀಗೆ ಎಲ್ಲ ನಿಗಮಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ನೌಕರರಿಗೆ ತೊಂದರೆ ಕೊಡದೆ ಅವರ ಬಗ್ಗೆ ಕಾಳಜಿ ವಹಿಸಿ ಲಂಚಕ್ಕೆ ಆಸೆ ಪಡೆದೆ ಹೋದರೆ, ಈ ರೀತಿಯ ಸಾಧನೆ ಅಸಾದ್ಯವಾಗದು. ಹೀಗಾಗಿ ನೌಕರರಿ ಅಧಿಕಾರಿಗಳು ಎಂಬ ಬೇಧಭಾವ ಬಿಟ್ಟು ಎಲ್ಲರೂ ಸಂಸ್ಥೆಯ ಒಂದೊಂದು ಭಾಗ ಎಂದುಕೊಂಡರೆ ಸಂಸ್ಥೆಯೂ ಉಳಿಯುತ್ತದೆ, ಸಮಸ್ತ ನೌಕರರು ಅಧಿಕಾರಿಗಳ ಬದುಕು ಹಸನಾಗುತ್ತದೆ.