KSRTC ತುಮಕೂರು: ಡ್ಯೂಟಿರೋಟದಡಿ ಲಾಂಗ್‌ರೂಟ್- ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಲು ಚಾಲಕ ಕಂ ನಿರ್ವಾಹಕರ ನೇಮಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತುಮಕೂರು ವಿಭಾಗದ ಡ್ಯೂಟಿ ರೋಟ ಪದ್ಧತಿಯಲ್ಲಿ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸುವಾಗ ಚಾಲಕ ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ನೌಕರರು ಮನವಿ ಮಾಡಿದ್ದಾರೆ.
ಈ ಸಂಬಂಧ ಇತ್ತೀಚೆಗಷ್ಟೆ KSRTC: ಡ್ಯೂಟಿರೋಟ ಜೇಷ್ಠತೆ ಆಧಾರದ ಮೇಲಾಗುತ್ತಿಲ್ಲ- ಎಂಡಿಗೆ ಲಿಖಿತ ದೂರು ಕೊಟ್ಟ ಲೋಕೇಶ್ ಎಂಬ ಶೀರ್ಷಿಕೆಯಡಿ ವಿಜಯಪೈದಲ್ಲಿ ವರದಿಯಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತುಮಕೂರು ವಿಭಾಗದಲ್ಲಿ ಇತ್ತೀಚಿಗೆ ಡ್ಯೂಟಿರೋಟ ಪದ್ಧತಿ ಪಟ್ಟಿ ಪ್ರಕಟಿಸಿದ್ದು, ಪ್ರಕ್ರಿಯೆ ನಡೆಸುವ ಬಗ್ಗೆ ಚಾಲನಾ ಸಿಬ್ಬಂದಿಗೆ ತಿಳಿಸಿದ್ದಾರೆ.
ಹೀಗಾಗಿ ಡ್ಯೂಟಿ ರೋಟ ಪದ್ಧತಿಯಲ್ಲಿ ರಾತ್ರಿ ಪಾಳೆಯ ಕರ್ತವ್ಯ ನಿರ್ವಹಿಸುವಾಗ ಚಾಲಕ ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕು ಎಂದು ನೌಕರರು ಮನವಿ ಮಾಡಿದ್ದು ಈ ಸಂಬಂಧ ಲೋಕೇಶ್ ಅವರು ಎಂಡಿಗೆ ಲಿಖಿತವಾಗಿ ಕೋರಿಕೊಂಡಿದ್ದಾರೆ.
ಇತ್ತೀಚಿಗೆ ಶಿರಾ ಘಟಕದ ಬಸ್ ಹುಬ್ಬಳ್ಳಿ ಮಾರ್ಗಾಚರಣೆ ಮಾಡುತ್ತಿದ್ದ ವೇಳೆ ಚಾಲಕ ಹಾಗೂ ನಿರ್ವಾಹಕರು ಮಾರ್ಗಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಾಲಕರು ವಾಹನ ಓಡಿಸಲು ನಿರ್ವಾಹಕರಿಗೆ ಕೊಟ್ಟಿದ್ದಾರೆ. ಈ ವೇಳೆ ವಾಹನವು ಅಪಘಾತವಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು.
ಚಾಲಕರು ಆ ಸಂದರ್ಭದಲ್ಲಿ ಮಲಗಿದ್ದು ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಕಾರಣಕ್ಕಾಗಿ ಅವರಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಪ್ರಸ್ತುತ ತುಮಕೂರು ವಿಭಾಗದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂತಹ ಎಲ್ಲ ಮಾರ್ಗಗಳಿಗೂ ಚಾಲಕರು ಹಾಗೂ ಚಾಲಕ ಕಂ ನಿರ್ವಾಹಕರನ್ನು ನಿಯೋಜಿಸಬೇಕಿದೆ.
500ಕ್ಕೂ ಹೆಚ್ಚು ಕಿಮೀ ಒಂದು ಸುತ್ತುಗಳಿ ಮಾರ್ಗಗಳಿರುವುದರಿಂದ ಬರೀ ಚಾಲಕರಿಗೆ ತುಂಬಾ ಪ್ರಯಾಸದಾಯಕವಾಗುತ್ತಿದೆ. ಆ ಕಾರಣಕ್ಕಾಗಿ ಅಂಥ ಮಾರ್ಗಗಳಲ್ಲಿ ನಿರ್ವಾಹಕರಿಗೆ ವಾಹನ ನೀಡಿದರೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಅದು ತಪ್ಪಾಗುತ್ತದೆ ಮತ್ತು ಕೆಲವು ಘಟಕಗಳಲ್ಲಿ ಬರಿ ನಿರ್ವಾಹಕರೇ ರಾತ್ರಿ ಪಾಳಿಯಲ್ಲಿ ಡ್ಯೂಟಿ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ವಾಹನವನ್ನು ಚಲಾವಣೆ ಮಾಡುವುದು ಕಂಡು ಬರುತ್ತಿದೆ. ಇದು ಪೂರ್ತಿ ಕಾನೂನಿಗೆ ವಿರೋಧವಾಗಿದ್ದು ಕೆಲವು ನಿರ್ವಾಹಕರಿಗೆ ಯಾವುದೇ ರೀತಿಯ ಭಾರಿ ವಾಹನಗಳ ಚಾಲನೆ ಪರವಾನಿಗೆ ಇರುವುದಿಲ್ಲ. ನಿರ್ವಾಹಕರು ವಾಹನ ಓಡಿಸಿದರೆ ಅದು ಸಂಸ್ಥೆಗೂ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ.
ಈ ಬಾರಿ ರಾತ್ರಿ ಪಾಳಿಯ ಮಾರ್ಗಗಳನ್ನು ನಿಯೋಜನೆ ಮಾಡುವಾಗ ಚಾಲಕ ಕಂ ನಿರ್ವಾಹಕರ ಹೆಸರು ಹಾಗೂ ಬಿಲ್ಲೆ ಸಂಖ್ಯೆಗಳು ಲಾಲ್‌ಸೀಟ್‌ನಲ್ಲಿ ನಮೂದಿಸುವುದು ಒಳ್ಳೆಯದು ಹಾಗೂ ಫಾರಂ 4 ಗಳಲ್ಲಿ ಚಾಲಕ ಕಂ. ನಿರ್ವಾಹಕರು ಇಂತಿಷ್ಟು ಕಿಲೋಮೀಟರ್ಗಳ ವಾಹನ ಚಲಾವಣೆ ಮಾಡುವುದನ್ನು ನಿಗದಿಪಡಿಸಿ ಆದೇಶ ಹೊರಡಿಸುವುದು ಚಾಲನಾ ಸಿಬ್ಬಂದಿಗಳು ಹಾಗೂ ಸಂಸ್ಥೆಯ ಹಿತ ದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಅಲ್ಲದೆ ಅನಾವಶ್ಯಕವಾಗಿ ವಾಹನ ನೀಡಿದ ಚಾಲಕರನ್ನು ಹೊಣೆಗಾರಿಕೆ ಮಾಡುವುದು ತಪ್ಪುತ್ತದೆ.
ಇತ್ತೀಚಿನ ದಿನಗಳಲ್ಲಿ ತುಮಕೂರು ವಿಭಾಗದ ಸಂಚಲನಾಧಿಕಾರಿ ಮನಸೋ ಇಚ್ಛೆ ಬೇಕಾಬಿಟ್ಟಿಯಾಗಿ ಮಾರ್ಗದ ಫಾರಂ 4 ಬದಲಿಸುತ್ತಿದ್ದಾರೆ. ಕೆಲವು ಮಾರ್ಗದ ಫಾರಂ 4 ಗಳನ್ನು ಒಂದು ತಿಂಗಳಿಗೆ ನಾಲ್ಕರಿಂದ ಐದು ಬಾರಿ ಬದಲಾಯಿಸಿರುವಂತಹ ಉದಾಹರಣೆಗಳು ಸಹ ಇವೆ. ಚಾಲನಾ ಸಿಬ್ಬಂದಿಗಳು ಈ ಬಗ್ಗೆ ವಿಚಾರಿಸಿದರೆ ಆರಿಕೆ ಉತ್ತರ ನೀಡುತ್ತಾರೆ ಹಾಗೂ ಸಾರ್ವಜನಿಕರಿಂದ ಮನವಿ ಬಂದಿದೆ ಎಂದು ತಿಳಿಸುತ್ತಾರೆ.
ಮುಖ್ಯವಾಗಿ ಫಾರಂ ಫೋರ್ ಬದಲಾಯಿಸಲು ವಿಭಾಗಿಯ ಸಂಚಲನ ಅಧಿಕಾರಿಗಳು ಖಾಸಗಿ ವಾಹನಗಳ ಮಾಲೀಕರ ನಡುವಿನ ಹೊಂದಾಣಿಕೆ ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಶಾಖೆಯವರು ಹೊಂದಾಣಿಕೆ ಇಲ್ಲದ ಚಾಲನಾ ಸಿಬ್ಬಂದಿಗಳ ಮಾರ್ಗಗಳ ಫಾರಂ ಬೋರ್ಡ್ ಗಳನ್ನು ಬದಲಿಸಿ ಕೊಡುವಂತೆ ವಿಭಾಗೀ ಸಂಚಲನಾಧಿಕಾರಿಗಳಿಗೆ ಕೇಳಿಕೊಳ್ಳುತ್ತಾರೆ ಹಾಗೂ ಕೆಲವು ಸ್ವಯಂಘೋಷಿತ ಯೂನಿಯನ್ ಲೀಡರ್‌ಗಳು ಓಡಾಡುವ ಮಾರ್ಗಗಳನ್ನು ಸಾಮಾನ್ಯ ಪಾಳಿ ಇದ್ದರೂ ವೇಗದೂತ ಮಾಡಿಸಿಕೊಳ್ಳುತ್ತಾರೆ.
ವೇಗದೂತ ವಿದ್ದರೆ ಸಾಮಾನ್ಯ ಪಾಳಿ ಮಾಡಿಸಿಕೊಳ್ಳುತ್ತಾರೆ. ಇವೆಲ್ಲದಕ್ಕೂ ಪರೋಕ್ಷವಾಗಿ ಸಂಚಲನಾಧಿಕಾರಿ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಮಾರ್ಗಗಳ ಫಾರಂ 4 ಬದಲಾಯಿಸುವುದು ಮುಖ್ಯವಾಗಿ ಚಾಲನಾ ಸಿಬ್ಬಂದಿಗಳಿಗೆ ಕಿರುಕುಳ ನೀಡುವುದೇ ಆಗಿದೆ. ಫಾರಂ 4 ಗಳನ್ನು ಬದಲಾಯಿಸುವ ಸಂದರ್ಭದಲ್ಲಿ. ಆ ಮಾರ್ಗಗಳ ರೂಟ್ ಸರ್ವೆ ಮಾಡುವ ಪದ್ದತಿಯೇ ಕಾಣುತ್ತಿಲ್ಲ. ಇನ್ನೂ ಮುಖ್ಯವಾಗಿ ಕೆಲವು ಮಾರ್ಗಗಳಲ್ಲಿ ಕೆಲವು ಪಕ್ಷದ ಮುಖಂಡರು ಹೇಳಿರುವ ಕಾರಣಕ್ಕೆ ಆದಾಯ ಬರದಿದ್ದರೂ ಸಹ ಅವರ ಊರುಗಳ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಈ ಎಲ್ಲ ಅಂಶಗಳನ್ನು ಹಾಗೂ ವಿಚಾರಗಳನ್ನು ಪರಿಶೀಲಿಸಿ ಸೂಕ್ತ ರೀತಿಯ ಕ್ರಮ ಕೈಗೊಳ್ಳ ಬೇಕೆಂದು ಲೋಕೇಶ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...