NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಯಜಮಾನನಿಲ್ಲದ ಮನೆಯಂತಾದ ನಾಲ್ಕೂ ನಿಗಮಗಳ ಅಧಿಕಾರಿಗಳು- ಸಿಬ್ಬಂದಿಗಳ ಪಾಡು, ತಲೆ ಒಡೇಲು ಸುತ್ತಿಗೆ..!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮತ್ತು ವೇತನ ಪರಿಷ್ಕರಣೆ ಮುಂತಾದ ದೀರ್ಘಾವಧಿಯ ಬೇಡಿಕೆಗಳನ್ನು ಕಳೆದ ಜೂನ್ 15 ರೊಳಗೆ ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ವರ್ಕರ್ಸ್‌ ಫೆಡರೇಶನ್ ಎಚ್ಚರಿಕೆ ನೀಡಿತ್ತು.

ಆದರೆ, ಈವರೆಗೂ ಅಂತಹ ಯಾವುದೇ ಉಗ್ರ ಪ್ರತಿಭಟನೆ ಹೋರಾಟವನ್ನೇ ಹಮ್ಮಿಕೊಂಡಿಲ್ಲ. ಅಂದರೆ ಬರಿ ಕಾಗದದ ಹುಲಿಯಾಗಿದ್ದಾರೆಯೇ ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ವರ್ಕರ್ಸ್‌ ಫೆಡರೇಶನ್ ಪದಾಧಿಕಾರಿಗಳು.

ಈ ಸಂಬಂಧ ಮೇ ಕೊನೆಯ ವಾರದಲ್ಲಿ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಾ, 2020ರ ಜನವರಿ 1ರಿಂದ ಶೇ.15 ರಷ್ಟು ವೇತನವನ್ನು ಸರ್ಕಾರ ಹೆಚ್ಚಳ ಮಾಡಿದೆ. ಆದರೆ ಇಲ್ಲಿಯವರೆವಿಗೂ ಪರಿಷ್ಕೃತ ವೇತನದ ಹಿಂಬಾಕಿಯನ್ನು 4 ನಿಗಮಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನೀಡಿಲ್ಲ.

ಇನ್ನು KSRTC, NWKRTC, KKRTC ಮತ್ತು BMTC ಈ ನಾಲ್ಕೂ ನಿಗಮಗಳ ನೌಕರರಿಗೆ 38 ತಿಂಗಳ ಬಾಕಿಗೆ ಬೇಕಾಗುವ ಮೊತ್ತ ಸುಮಾರು 1,600 ಕೋಟಿ ರೂ. ರಾಜ್ಯ ಸಾರಿಗೆ ನಿಗಮಗಳು ಈ ಹೊರೆಯನ್ನು ಹೊರಲು ಸಾಧ್ಯವಿಲ್ಲದ ಕಾರಣ ಸರ್ಕಾರವು ಕೂಡಲೇ ಅನುದಾನ ನೀಡಬೇಕು. ಆ ಮೂಲಕ ನೌಕರರಿಗೆ ಸೇರಬೇಕಿರುವ ನ್ಯಾಯಯುತ ಹಣವನ್ನು ಪಾವತಿಸಬೇಕು ಎಂದು ಎಂದು ಭಾಸ್ಕ‌ರ್ ಆಗ್ರಹಿಸಿದ್ದರು.

ಅಲ್ಲದೆ ‘ಶಕ್ತಿ’ ಯೋಜನೆ ಜಾರಿಯಾದ ನಂತರ ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ಕೆಲಸದ ಹೊರೆ ಹೆಚ್ಚಿದೆ. 50-60 ಸಾಮರ್ಥ್ಯದ ಬಸ್‌ನಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಾಹನಗಳು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿವೆ ಮತ್ತು ವರ್ಕ್‌ಶಾಪ್‌ಗಳಲ್ಲಿ ಕೆಲಸ ಮಾಡುವ ತಂತ್ರಜ್ಞರು ಹೆಚ್ಚಿನ ಹೊರೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತಾಂತ್ರಿಕ ಸಿಬ್ಬಂದಿಗಳಿಗೂ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದ್ದರು.

ಇನ್ನು ಬಸ್‌ ಹೊರಡುವ ಮತ್ತು ತಲುಪುವ ಈ ಎರಡು ಸ್ಥಳಗಳ ನಡುವಿನ ಅಂತರ ಮತ್ತು ಪ್ರಯಾಣದ ಸಮಯವನ್ನು ಅವೈಜ್ಞಾನಿಕವಾಗಿ ಲೆಕ್ಕಹಾಕಲಾಗಿದೆ. ನಿಗಮಗಳು ಗಮ್ಯಸ್ಥಾನವನ್ನು ವೈಜ್ಞಾನಿಕವಾಗಿ ತಲುಪಲು ದೂರ ಮತ್ತು ಅಗತ್ಯವಿರುವ ಸಮಯವನ್ನು ಲೆಕ್ಕ ಹಾಕಬೇಕು ಈ ಮೂಲಕ ಚಾಲಕರು ಮತ್ತು ನಿರ್ವಾಹಕರ ಮೇಲೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ್ದರು.

ಈ ವೇಳೆ ಸರ್ಕಾರ ಮತ್ತು ಸಾriಗೆ ಆಡಳಿತ ಮಂಡಳಿಗಳಿಗೂ ಗಡುವು ನೀಡಿದ್ದರು ಅದುಕೂಡ ಈ ಎಲ್ಲವನ್ನು ಜೂನ್‌ 15ರೊಳಗೆ ಪರಿಹರಿಸದಿದ್ದರೆ ಸಮಸ್ತ ಅಧಿಕಾರಿಗಳು ಮತ್ತು ನೌಕರರನ್ನು ಒಗ್ಗೂಡಿಸಿಕೊಂಡು ಸರ್ಕಾರದ ವಿರುದ್ಧ ತೀವ್ರತರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಆದರೆ ಈವರೆಗೂ ಅಂಥ ಯಾವುದೇ ಹೋರಾಟ ಮಾಡಲೇ ಇಲ್ಲ.

ಬದಲಿಗೆ ಜಂಟಿ ಕ್ರಿಯಾ ಸಮಿತಿ ಹೆಸರಲ್ಲಿ 4-5 ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಸಭೆ ಸಮಾರಂಭ ಮಾಡುವ ಮೂಲಕ ಮತ್ತೊಮ್ಮೆ ಮೊಗದೊಮ್ಮೆ ಎಂಬಂತೆ ಎಚ್ಚರಿಕೆ.. ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಹೇಳಿಕೊಂಡೆ ಕಾಲ ಕಳೆಯುತ್ತಿದ್ದಾರೆ ಈ ಕೆಎಸ್‌ಆರ್‌ಟಿಸಿ ಸ್ಟಾಫ್‌ ಮತ್ತು ವರ್ಕರ್ಸ್‌ ಫೆಡರೇಶನ್ ಪದಾಧಿಕಾರಿಗಳು. ಏಕೆ ಹೀಗೆ ಎಂದು ಕೇಳಿದರು ಅದಕ್ಕೆ ಸಮಂಜಸವಾದ ಉತ್ತರ ಕೊಡಲು ಯಾವೊಬ್ಬ ಫೆಡರೇಶನ್ ಪದಾಧಿಕಾರಿಯೂ ಮುಂದಾಗುತ್ತಿಲ್ಲ.

ಇತ್ತ ನೌಕರರ ಕೂಟದ ಪದಾಧಿಕಾರಿಗಳು ಕೂಡ ಸಮಾನ ವೇತನ ಮಾಡಿಸುತ್ತೇವೆ ಎಂದು ಹೇಳಿಕೊಂಡು ಈಗ ಯಾವ ಮೂಲೆಯಲ್ಲಿ ಕುಳಿತಿದ್ದಾರೋ ಗೊತ್ತಿಲ್ಲ. ಆದರೆ, ನೌಕರರಿಗೆ ಸಮಾನ ವೇತನ ಕೊಡಿಸಿಯೇ ತೀರುತ್ತೇವೆ ಎಂದು ಹೇಳಿಕೊಂಡು ಇವರು ಕೂಡ ಕಾಲಹರಣ ಮಾಡುತ್ತಿದ್ದಾರೆ.

ಇನ್ನು ಸಾರಿಗೆ ನಿಗಮಗಳ ಅಧಿಕಾರಿಗಳು ಹೋರಾಟಕ್ಕೆ ಇಳಿಯುವುದಿಲ್ಲ. ಇತ್ತ ನೌಕರರು ಧರಣಿ ಅಥವಾ ಮುಷ್ಕರಕ್ಕೆ ಮುಂದಾದರೆ ಅಂಥ ನೌಕರರನ್ನು ವಜಾ, ಅಮಾನತು, ವರ್ಗಾವಣೆ ಜತೆಗೆ ಪೊಲೀಸ್‌ ಕೇಸ್‌ ಜಡಿದು ಅವರು ಸೇರಿದಂತೆ ಅವರ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದರಿಂದ ಸರ್ಕಾರ ಮತ್ತು ಆಡಳಿತ ಮಂಡಳಿಗಳ ಕೈಯಿಗೆ ಈ ಅಧಿಕಾರಿಗಳೇ ಸುತ್ತಿಗೆಕೊಟ್ಟು ತಲೆ ಒಡೆಸಿಕೊಳ್ಳುತ್ತಿದ್ದಾರೆ.

ಇದನ್ನು ಗಮನಿಸಿದರೆ ಇಲ್ಲಿ ಸಂಘಟನೆಗಳ ಪದಾಧಿಕಾರಿಗಳಿಗೆ ವೇತನ ಹೆಚ್ಚಳದ ಲಾಭ ಕಿಂಚಿತ್ತು ಆಗುವುದಿಲ್ಲ. ಇತ್ತ ಹೆಚ್ಚು ಲಾಭ ಪಡೆಯುವ ಅಧಿಕಾರಿಗಳಿಗೆ ಈ ಹೋರಾಟ ಬೇಕಿಲ್ಲ. ಇನ್ನು ಸಾಮಾನ್ಯ ನೌಕರರಿಗೆ ಇದರ ಲಾಭ ಹೆಚ್ಚಾಗಿ ಇಲ್ಲದಿದ್ದರೂ ಹೋರಾಟಬೇಕು. ಕಾರಣ ಸಂಘಟನೆಗಳ ಪದಾಧಿಕಾರಿಗಳು ಇವರನ್ನು ಮಾತ್ರ ಹೋರಾಟಕ್ಕೆ ಕರೆಯುತ್ತಾರೆ! ಅಧಿಕಾರಿಗಳನ್ನು ದೂರವಿಡುತ್ತಾರೆ. ಸಂಘಟನೆಗಳ ಮತ್ತು ಅಧಿಕಾರಿಗಳ ಈ ನಡೆಯಿಂದ ಇರುವ ಕೆಲಸವನ್ನು ಕಳೆದುಕೊಂಡು ಹೋರಾಟಕ್ಕೆ ಮುಂದಾದ ನೌಕರರು ಮನೆಯಲ್ಲಿ ಕೂರುವ ಸ್ಥಿತಿ ನಿರ್ಮಾಣವಾಗಿದೆ.

ಈ ರೀತಿಯಜಮಾನನಿಲ್ಲದ ಅತಂತ್ರ ಮನೆಯಂತಾಗಿದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಸೇರಿದಂತೆ ನೌಕರರ ಪಾಡು. ದಕ್ಷತೆಯಿಂದ ನ್ಯಾಯಯುತವಾಗಿ ಬರಬೇಕಿರುವ ಸೌಲಭ್ಯಗಳನ್ನು ಸರ್ಕಾರದಿಂದ ಕೊಡಿಸುವ ಯಾವುದೇ ಸಂಘಟನೆ ಅಥವಾ ಪ್ರಬಲ ನಾಯಕನಿಲ್ಲದೆ ಸೊರಗುತ್ತಿದ್ದಾರೆ ಸಾರಿಗೆ ಸಿಬ್ಬಂದಿ…!?

1 Comment

  • “KSRTC ನ ಉದ್ಯೋಗಿಗಳು ಕುರಿಗಳು ಮತ್ತು ಎಮ್ಮೆಗಳು”

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು