ಹುಬ್ಬಳ್ಳಿ: ಬೆಳಗಾವಿಯ ಸುವರ್ಣಸೌಧದ ಮುಂದೆ ಕಳೆದ 7ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾರಿಗೆ ನೌಕರರನ್ನು ಸಂಜೆ 7ಗಂಟೆ ಸುಮಾರಿಗೆ ಪೊಲೀಸರು ಬಂಧಿಸಿ ಧಾರವಾಡ ಮಾರ್ಗವಾಗಿ ಕರೆದುಕೊಂಡು ಹೋಗುತ್ತಿದ್ದ ಪೊಲೀಸರು ಈಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದಾರೆ.
ಆರೋಗ್ಯ ತಪಾಸಣೆ ಮಾಡಿದ ನಂತರ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂಬುವುದು ತಿಳಿಯುತ್ತಿಲ್ಲ ಎಂದು ಬಂಧನಕ್ಕೆ ಒಳಗಾಗಿರುವ ನೌಕರರು ಮಾಹಿತಿ ನೀಡಿದ್ದಾರೆ.
14 ಮಂದಿ ಉಪವಾಸ ಮಾಡುತ್ತಿದ್ದ ನೌಕರರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ಆರೋಗ್ಯ ತಪಾಸಣೆ ಮಾಡಿಸಿದ ಬಳಿಕ ವಾಪಸ್ ಇಲ್ಲಿಗೆ ಕರೆದುಕೊಂಡು ಬರುತ್ತೇವೆ ಎಂದು ಸ್ಥಳದಲ್ಲಿದ್ದ ನೌಕರರಿಗೆ ಹೇಳಿ ಬಲವಂತದಿಂದ ಪೊಲೀಸ್ ವಾಹನದಲ್ಲೇ ಕರೆದುಕೊಂಡು ಹೋಗಿದ್ದಾರೆ.
ನಾವು ಆರೋಗ್ಯವಾಗಿದ್ದೇವೆ ಹೀಗಾಗಿ ನಮಗೆ ಆರೋಗ್ಯ ತಪಾಸಣೆಯ ಆಗತ್ಯವಿಲ್ಲ ನಮ್ಮನ್ನು ಸತ್ಯಾಗ್ರಹ ನಿರತ ಬೆಳಗಾವಿಯ ಸುವರ್ಣಸೌಧ ಬಳಿಗೆ ಕರೆದುಕೊಂಡು ಹೋಗಿ ನಾವೇನು ಶಾಂತಿ ಭಂಗ ಉಂಟುಮಾಡುವ ರೀತಿ ನಡೆದುಕೊಂಡಿಲ್ಲ. ನಾವು ಶಾಂತಿಯುತವಾಗಿಯೇ ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ.
ಆದರೆ ನಮ್ಮನ್ನು ನೀವು ಏಕಾಏಕಿ ಯಾವ ಕಾರಣಕ್ಕೆ ಬಂಧಿಸಿದ್ದೀರಿ ಎಂಬುದನ್ನು ತಿಳಿಸಬೇಕು ಎಂದು ಪೊಲೀಸ್ ಅಧಿಕಾರಿಗಳನ್ನು ಕೇಳುತ್ತಿದ್ದಾರೆ. ಆದರೆ ಉಪವಾಸ ಸತ್ಯಾಗ್ರಹ ನಿರತ ನೌಕರರ ಬಂಧಿಸಿರುವ ಪೊಲೀಸ್ ಅಧಿಕಾರಿಗಳು ಏನನ್ನು ಹೇಳುತ್ತಿಲ್ಲ ಎಂದು ನೌಕರರು ತಿಳಿಸಿದ್ದಾರೆ.
ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಈಗ (ರಾತ್ರಿ 9.20) ಕರೆದುಕೊಂಡು ಬಂದಿದ್ದು ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸರಿ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕಳೆದ ಇದೇ ಡಿ.19ರಿಂದ ಸಾರಿಗೆ ನೌಕರರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೀಗಾಗಿ ರಣಹೇಡಿ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವ ಬದಲಿಗೆ ಉಪವಾಸ ಕುಳಿತ ನೌಕರರನ್ನೇ ಬಂಧಿಸಿದೆ.