NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬೂದಿ ಬಾಬಾಗಳು ಕಮ್ಯೂನಿಸ್ಟ್‌ ಸಿದ್ಧಾಂತ ಅಂದರೆ ತುಂಬಾ ಭೀತಿಗೆ ಒಳಗಾಗುತ್ತಿದ್ದಾರೆ….!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೂದಿ ಬಾಬಾಗಳು ಕಮ್ಯೂನಿಸ್ಟ್‌ ಸಿದ್ಧಾಂತ ಅಂದರೆ ತುಂಬಾ ಭೀತಿಗೆ ಒಳಗಾಗುತ್ತಿದ್ದಾರೆ. ಇವರ ಸಿದ್ಧಾಂತ ಒಂದೇ ಬೂದಿ ಬಾಬಾಗಳ ರೀತಿಯ ಗುಂಪು ಕಟ್ಟಿಕೊಂಡು ಕಾರ್ಮಿಕರಲ್ಲಿ ಗೊಂದಲ ಮೂಡಿಸಿ ಆಳುವ ಸರ್ಕಾರಕ್ಕೆ ಅನುಕೂಲ ಮಾಡುವ ಹುನ್ನಾರ ಹೊಂದಿರುತ್ತಾರೆ.

ಅದರಿಂದ ಸರ್ಕಾರ ಕಾರ್ಮಿಕರಿಗೆ ವೇತನವನ್ನು ಹೆಚ್ಚಳ ಮಾಡದೇ ಕಾರ್ಮಿಕರನ್ನು ತೀವ್ರ ಆರ್ಥಿಕ ಸಂಕಷ್ಟಗಳಿಗೆ ಗುರಿಪಡಿಸುತ್ತಾರೆ. ನಂತರ ಖಾಸಗೀಕರಣ- ಗುತ್ತಿಗೆ ಆಧಾರಿತ ಕೆಲಸಕ್ಕೆ ನೇಮಕಾತಿ- ಕಿರುಕುಳ ಮತ್ತು ದಬ್ಬಾಳಿಕೆ ಮೂಲಕ ಆಡಳಿತ ನಡೆಸುತ್ತಾರೆ.

ಇದಕ್ಕೆ ಉದಾ: 2020 ಡಿಸೆಂಬರ್, ಏಪ್ರಿಲ್- 2021 ರ ಮುಷ್ಕರ. ಈ ವೇಳೆಯಲ್ಲಿ ಒಂದು ಬಿಡಿಗಾಸು ಕಾರ್ಮಿಕರಿಗೆ ಅನುಕೂಲ ಇಲ್ಲ. ಖಾಸಹಿ ವಾಹಿನಿಯ ಸ್ಟಿಂಗ್ ಆಪರೇಶನ್ ಕೂಡ ಒಂದು. ಸಾವಿರಾರು ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿ ಕಾರ್ಮಿಕರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸೋದು- ಸಂಘಟನೆಗಳನ್ನು ದೂಷಿಸೋದು ಅವರ ಕಾಯಕವಾಗುತ್ತೆ.

ಅದಕ್ಕೆ ಬೂದಿ ಬಾಬಾಗಳು ಸಹಕಾರಿಯಾಗಿ ಇರುತ್ತಾರೆ. ಕಾರ್ಮಿಕರು, ಕಾರ್ಮಿಕ ವರ್ಗಕ್ಕೆ ಒಂದು ಚಾರಿತ್ರಿಕ ಇತಿಹಾಸವಿದೆ. ದೇಶದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಲಕ್ಷಾಂತರ ಕಾರ್ಮಿಕ ಮುಖಂಡರ ತ್ಯಾಗ ಬಲಿದಾನಗಳಿಂದ ಹತ್ತಾರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ನಮಗೆ ತೃಪ್ತಿಯಾಗುವಷ್ಟು ಸೌಲಭ್ಯಗಳು ದೊರಕಿಲ್ಲ. ಅದಕ್ಕೆ ಕಾರಣ ನಮ್ಮನ್ನು ಆಳುತ್ತಿರುವ ಬಂಡವಾಳಶಾಹಿ ಸರ್ಕಾರದ ನೀತಿಗಳು. ದೇಶದ ಕಾರ್ಮಿಕ ವರ್ಗ ಹಾಗೂ ರಾಜ್ಯದ ಕಾರ್ಮಿಕ ವರ್ಗ ನ್ಯಾಯಯುತ ವೇತನಕ್ಕಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಲೇ ಇದೆ. ಅದರ ಭಾಗವಾಗಿ ಸಾರಿಗೆ ನೌಕರರು ಸಹ ಕಾಲ- ಕಾಲಕ್ಕೆ ಚಳವಳಿಗಳ ಮೂಲಕ ಸೌಲಭ್ಯಗಳನ್ನು ಪಡೆಯುತ್ತಾ ಬಂದಿದ್ದಾರೆ.

ಆದರೆ ಇತ್ತ ಬೂದಿಬಾಬಾಗಳಿಗೆ ಕಾರ್ಮಿಕ ವರ್ಗದ ಇತಿಹಾಸವೇ ಗೊತ್ತಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ಆದ್ದರಿಂದ ಸಾರಿಗೆ ನಿಗಮಗಳ ಕಾರ್ಮಿಕರು ಕೂಟವೇ ಒಂದು ಅಕ್ರಮವಾಗಿ ಹುಟ್ಟಿದ್ದು, ಸುಳ್ಳನ್ನೆ ಸತ್ಯ ಅಂತ ನಂಬಿಸಿಲು ಹೊರಿಟಿರುವುದು ಎಂದು ಈಗಾಗಲೆ ಕೂಟದ ಹೋರಾಟದಲ್ಲಿ ಇದ್ದ ನೂರಾರು ಮುಖಂಡರು ಕೂಟದಿಂದ ಹೊರ ಹೋಗಿದ್ದಾರೆ.

ಅದಕ್ಕೆ ಕಾರಣ ನಾನು ಹೇಳಬೇಕಿಲ್ಲ. ಏಕೆಂದು ಈಗಾಗಲೆ ಅದು ಜಗಜ್ಜಾಹೀರಾಗಿದೆ. ಕಮ್ಯೂನಿಸ್ಟ್‌ ಚಳವಳಿಗಳ ಬಗ್ಗೆ ಗಂಧ ಗಾಳಿ ಇಲ್ಲದವರು- ಕಾರ್ಮಿಕ ವರ್ಗ ಚಳವಳಿಯ ಇತಿಹಾಸ ಗೊತ್ತಿಲ್ಲದವರು ಸಾರಿಗೆ ಕಾರ್ಮಿಕರಿಗೆ ಶಾಶ್ವತ ಪರಿಹಾರ ಕೊಡಿಸಲು ಹೊರಟಿದ್ದಾರೆ.

ಈ ಜಗತ್ತಿನಲ್ಲಿ ಇಲ್ಲಿಯವರೆಗೂ ಶಾಶ್ವತ ಪರಿಹಾರ ಸಿಕ್ಕಿರುವ ದಾಖಲೆಗಳು ಎಲ್ಲಿಯೂ ಇಲ್ಲ. ಭ್ರಮೆಗಳ ಮೂಲಕ ಕಾರ್ಮಿಕ ವರ್ಗಕ್ಕೆ ನ್ಯಾಯ ಸಿಗೋದಿಲ್ಲ. ಆಳುವ ವರ್ಗದ ವಿರುದ್ಧ ಸಮರಶೀಲ ಹೋರಾಟಗಳಿಂದ ಮಾತ್ರ ಉತ್ತಮ ವ್ಯವಸ್ಥೆಯತ್ತ ಹೋಗಲು ಸಾಧ್ಯ. ಈ ಬಗ್ಗೆ ಸಾರಿಗೆ ಕಾರ್ಮಿಕರು ಚಿಂತಿಸಬೇಕು.

l ಮಂಜುನಾಥ್ H.S. ಪ್ರಧಾನ ಕಾರ್ಯದರ್ಶಿ, ಕರಾರಸಾನಿಗಮಗಳ ಫೆಡರೇಷನ್ ( CITU)

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ