NEWSನಮ್ಮರಾಜ್ಯ

ಸ್ವಪ್ರತಿಷ್ಠೆ ಬಿಟ್ಟು ಸಾರಿಗೆ ನೌಕರರಿಗೆ ನ್ಯಾಯಕೊಡಿಸಲು ಒಗ್ಗಟ್ಟಾಗೋಣ ಬನ್ನಿ: ರುದ್ರೇಶ್ ಎಸ್.ನಾಯಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮದ ಹಿರಿಯ, ಕಿರಿಯ ಪ್ರಭಾವಿ ಕಾರ್ಮಿಕ ಮುಖಂಡರೇ ನಿಮ್ಮ ನಿಮ್ಮ ಸ್ವಾರ್ಥಗಳು ಮತ್ತು ನಿಮ್ಮ ನಿಮ್ಮ ಸ್ವಪ್ರತಿಷ್ಠೆ ಬಿಟ್ಟು ಮಾ.27ರ ಸಂಜೆ 3ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದರು ಸಭೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ ನೌಕರರಿಗೆ ಸಿಹಿ ಸುದ್ದಿಕೊಡುವ ನಿರ್ಧಾರ ತೆಗೆದುಕೊಳ್ಳಿ ಎಂದು ರುದ್ದೇಶ್ಎಸ್.ನಾಯಕ್ ಒತ್ತಾಯಿಸಿದ್ದಾರೆ.

ನಾವು ಕಾರ್ಮಿಕ ಮುಖಂಡರು ಒಂದಾಗೋಣ ಎಂಬ ಐಕ್ಯತೆ ಸಭೆಯಲ್ಲಿ ಭಾಗವಹಿಸಿ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಜಂಜಾಟಗಳಿಗೆ ವಿರಾಮ ಹೇಳುವ ಮೂಲಕ ಸಾರಿಗೆ ಸಂಸ್ಥೆಯ ಎಲ್ಲ ನೌಕರರ ಪರ ನಾವಿದ್ದೇವೆ ಎಂಬ ಸಂದೇಶ ಸಾರೋಣ ಬನ್ನಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ವಲಯ ಅಧ್ಯಕ್ಷ ರುದ್ರೇಶ್ ಎಸ್ ನಾಯಕ್ಮನವಿ ಮಾಡಿದ್ದಾರೆ.

ಸಾರಿಗೆ ಸಂಸ್ಥೆಯ ಪ್ರಭಾವಿ ಸಾರಿಗೆ ಮುಖಂಡರೇ ಸಂಸ್ಥೆಯ ಹಿರಿಯ, ನಿವೃತ್ತ ಅಧಿಕಾರಿಗಳೇ ಹಲವಾರು ತಿಂಗಳುಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ನೋಡಿದರೇ ಬಹಳ ಅಸಹ್ಯ ಅನ್ನಿಸುತ್ತಿದೆ. ಏಕೆಂದರೆ ಎಂಟು ತಿಂಗಳುಗಳ ಹಿಂದೆ ವಿಜಯಪಥದಲ್ಲಿ ಒಂದು ಹೇಳಿಕೆ ನೀಡಿದ್ದೆ ಸ್ವಾರ್ಥ ಸಂಘಟನೆಯಗಳಿಗಾಗಿ ನೌಕರರ ಬಲಿ ಎಂಬ ಶೀರ್ಷಿಕೆಯಡಿ ಹೇಳಿಕೆ ನೀಡಿದ್ದೆ.

ಆ ಹೇಳಿಕೆಯ ವಿರುದ್ಧವಾಗಿ ಕೆಲ ಕಾರ್ಮಿಕ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಆ ರೀತಿ ವ್ಯಕ್ತಪಡಿಸಿದ ಕಾರ್ಮಿಕ ಮುಖಂಡರು ಪ್ರಸ್ತುತ ನಡೆದು ಕೊಳ್ಳತ್ತಿರುವುದನ್ನು ನೋಡಿದರೆ ಕಾರ್ಮಿಕರಿಗೆ ಬಹಳ ಅಸಹ್ಯ ಎನಿಸುತ್ತಿದೆ. ದಿನೇದಿನೆ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೆ ಏರುತ್ತಿರುವ ಈ ದಿನಮಾನದಲ್ಲಿ ನೀವುಗಳು ಸಾರಿಗೆ ನೌಕರರಿಗೆ ಕೊಡಿಸಿದ್ದಾದರು ಏನು ಎಂದು ಪ್ರಶ್ನಿಸಿದ್ದಾರೆ.

ಇನ್ನು ಈ ಈ ತಿಂಗಳಲ್ಲಿ ಸರಿ ಸಮಾನ ವೇತನ ಮಾಡಿಸುತ್ತಾರೆ, ಮುಂದಿನ ತಿಂಗಳಲ್ಲಿ ಅಗ್ರಿಮೆಂಟ್ ಮಾಡಿಸುತ್ತಾರೆ ಎಂದು ಚಾತಕಪಕ್ಷೀಯಂತೆ ಕಾದು ಕುಳಿತಿರುವ ನೌಕರರಿಗೆ ನೀವು ಮಾಡುತ್ತಿರುವುದು ಏನು.  ಹಿಂದಿನ 38 ತಿಂಗಳ ವೇತನ ಹಿಂಬಾಕಿ  ಹಾಗೂ 2024 ಹೊಸ ವೇತನ ಪರಿಷ್ಕರಣೆಯ 15 ತಿಂಗಳುಗಳ ಒಟ್ಟಾರೆಯಾಗಿ 53 ತಿಂಗಳು ಹಿಂಬಾಕಿ ಕೊಡಿಸುವುದು ಯಾವಾಗ?

ಈ 53 ತಿಂಗಳುಗಳು ಕಳೆದು ಹೋದವು. ಆದರೆ, ಸಂಘಟನೆಯಗಳು ಕೊಡಿಸಿದ್ದು ಬರೀ ಶೂನ್ಯ. ನೌಕರರು ಯಾರ ಮೇಲೆ ಭರವಸೆ ಇಡಬೇಕು? ಯಾರ ಮೇಲೆ ಒಲವು ತೋರಬೇಕು ಹೇಳಿ? ಕಾರ್ಮಿಕ ಸಂಘಟನೆಯ ಮುಖಂಡರೇ ನೌಕರರ ನಂಬಿಕೆಗೆ ನಾವುಗಳು ಮಾಡಿರುವ ದ್ರೋಹ ಅಷ್ಟಿಷ್ಟಲ್ಲ. ಮಹಾ ಮೋಸ.

ಹೀಗಾಗಿ ಸಮಸ್ತ ಕಾರ್ಮಿಕ ಮುಖಂಡರೇ ಇನ್ನೊಬ್ಬರ ಮೇಲೆ ಮತ್ತೊಬ್ಬರು… ಮಗದೊಬ್ಬರ ಮೇಲೆ ಹೀಗೊಬ್ಬರು ಹೀಗೆ ನೀವು ನಾವುಗಳೇ ಪರ ವಿರೋಧದಲ್ಲಿ ಬಡಿದಾಡಿಕೊಳ್ಳುತ್ತಿದ್ದರೆ ಇಲ್ಲಿ ನೌಕರರು ಬಲಿಪಶುಗಳಾಗಿದ್ದಾರೆ. ಆದ್ದರಿಂದ ದಯವಿಟ್ಟು ಬದಲಾಗಿ, ಬದಲಾವಣೆ ತರುವುದಕ್ಕೆ ಮುಂದಾಗಿ ಎಂದು ಒತ್ತಾಯಿಸಿದ್ದಾರೆ.

ಇನ್ನು ಇದೇ ಮಾ.27ರಂದು ಎಲ್ಲ ಸಂಘಟನೆಯ ಮುಖಂಡರು ಒಂದೇ ವೇದಿಕೆಯಲ್ಲಿ ಸೇರಿ. ನೌಕರರಿಗೆ ಕಿಂಚಿತ್ತಾದರು ಸಹಾಯ ಮಾಡುವ ಔದಾರ್ಯ ತೋರೋಣ. ಏಕೆಂದರೆ ಈ ಮಾರ್ಚ್ಕಳೆಯಿತು ಇನ್ನೂ ಎರಡು ತಿಂಗಳಲ್ಲಿ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ  ದಾಖಲು ಮಾಡಬೇಕು. ಬೆಲೆ ಏರಿಕೆ ದಿನದಿಂದ ದಿನವೂ ಗಗನ ಮುಟ್ಟುತ್ತಿದೆ ಇಂತಹ ದಿನಗಳಲ್ಲಿ ನೌಕರರಿಗೆ ಹಿಂಬಾಕಿ ವೇತನ 2024ರ ವೇತನ ಪರಿಷ್ಕರಣೆ ಕೊಡಿಸಲು ಮುಂದಾಗೋಣ ಎಂದು ಆಗ್ರಹಿಸಿದ್ದಾರೆ.

ನಾವು ಒಬ್ಬರ ಕಾಲು ಮತ್ತೊಬ್ಬರು ಎಳೆದುಕೊಂಡು ಕೂರುವ ಬದಲಿಗೆ ಒಂದಾಗಿ ಮುನ್ನುಗಿದ್ದೇ ಆದರೆ ಸಂಘಟನೆ ಎಂಬ ಪದಕ್ಕೆ ಅರ್ಥ ಬರುತ್ತದೆ. ಇಲ್ಲ ಇದೆ ರೀತಿಯಲ್ಲಿ ನಮ್ಮ ದೊಂಬರಾಟ ಮುಂದುವರಿದರೆ ಡಿಪೋ ಡಿಪೋ ಬಳಿ ಕಾರ್ಮಿಕ ಮುಖಂಡರ ಅಂತಾ ಹೋದರೆ ಅಟ್ಟಾಡಿಸಿಕೊಂಡು ಹೊಡೆಯುವ ಕಾಲ ಬಹಳ ದೂರವೇನಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.

ಕಾರ್ಮಿಕ ಮುಖಂಡರೇ ಈ ಒಂದು ಐತಿಹಾಸಿಕ ದಿನದಂದು ನಾವೆಲ್ಲರೂ ಒಂದಾಗಿದ್ದೀವಿ ನಮ್ಮ ನೌಕರರಿಗೆ ಒಳಿತು ಮಾಡಲು ಶಕ್ತಿ ಮೀರಿ ಶ್ರಮವಹಿಸಿ ಕೆಲಸ ಮಾಡಲು ಸಿದ್ಧ ಎಂಬ ಘೋಷಣೆ ಹಾಕಿ ಸರ್ಕಾರ ಮತ್ತು ಆಡಳಿತ ಮಂಡಳಿ ಮಾರನೇ ದಿನವೇ ಹಿಂಬಾಕಿ ವೇತನದ ವಿಚಾರ ಮತ್ತು ಇನ್ನಿತರೆ ವಿಷಯಗಳ ಬಗ್ಗೆ ಕರೆದು ಮಾತನಾಡುವ ಔದಾರ್ಯ ತೋರುತ್ತದೆ.

ಬನ್ನಿ ನಮ್ಮ ಸಂಘಟನೆಯಿಂದ ನಾನು ಬರುತ್ತಿದ್ದೇನೆ ನೀವು ಬನ್ನಿ ನಿಮ್ಮ ಸ್ನೇಹಿತ ಯುವ ಮುಖಂಡರನ್ನು ಕರೆತನ್ನಿ ಸಂಸ್ಥೆಗೆ ಮತ್ತು ಸರ್ಕಾರಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸೋಣ ನೌಕರರ ಹಿತ ಕಾಪಾಡೋಣ. ಎಲ್ಲ ಕಾರ್ಮಿಕ ಮುಖಂಡರು ಒಂದಾಗೋಣ ಬನ್ನಿ ಎಂಬ ತತ್ವದಲ್ಲಿ ಮುನ್ನುಗ್ಗಲು ಪ್ರಾಮಾಣಿಕವಾಗಿ ಎಲ್ಲರೂ ಒಂದಾಗೋಣ ಬನ್ನಿ ಎಂದು ರುದ್ದೇಶ್ಎಸ್.ನಾಯಕ ಮನವಿ ಮಾಡಿದ್ದಾರೆ.

Deva
the authorDeva

Leave a Reply

error: Content is protected !!