
ಕಲಬುರಗಿ: ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ಲಂಚವತಾರಕ್ಕೆ ಬೆಸತ್ತು ಸ್ವಯಂ ನಿವೃತ್ತಿ ಪಡೆದ ಸಿಬ್ಬಂದಿ ಎಂಬ ಶೀರ್ಷಿಕೆಯಡಿ ಇದೇ ಮಾ. 20ರಂದು ವಿಜಯಪಥ ಮೀಡಿಯಾದಲ್ಲಿ ವರದಿ ಪ್ರಕಟಿಸಲಾಗಿತ್ತು.
ಈ ಸಂಬಂಧ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಗಂಗಾಧರ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಸ್ಥೆಯ ಸ್ವಯಂ ನಿವೃತ್ತ ಸಹಾಯಕ ರೇಹಮಾನ್ ಮಸ್ಕಿ ಅವರು ಸ್ವಯಂ ನಿವೃತ್ತಿ ಹೊಂದಲು ಕಾರಣಗಳೇನು ಹಾಗೂ ನಾನು ಹಣ ಕೆಳದೇ ಇದ್ದರು ನನ್ನ ಮೇಲೆ ಹಣ ಕೇಳಿರುವುದಾಗಿ ಸುಳ್ಳು ಆರೋಪ ಮಾಡಿದ್ದು ಏಕೆ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಡಿಸಿ ಸಿದ್ದಪ್ಪ ಗಂಗಾಧರ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲೇನಿದೆ?: ರೇಹಮಾನ್ ಮಸ್ಕಿ, ಸಹಾಯಕ ವಿಭಾಗೀಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಅವರಿಗೆ ಅನಾರೋಗ್ಯ ಸಮಸ್ಯೆ ಇದ್ದುದ್ದರಿಂದ 29.05.2023 ರಿಂದ 05.08.2023ರ ವರೆಗೆ ರಜೆ ಮಂಜೂರು ಮಾಡಲಾಗಿತ್ತು.
ಮುಂದುವರಿದು ರಜೆ ಅವಧಿ ಮುಗಿದರೂ ಸಹ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೆ 04.11.2023 ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ಎಂದು 16.11.2023ರಂದು ಘಟಕ ವ್ಯವಸ್ಥಾಪಕರು ಕಲಬುರಗಿ ಘಟಕ-2ರವರು ವರದಿ ಸಲ್ಲಿಸಿದ ಆಧಾರದ ಮೇಲೆ ಮಸ್ಕಿ ಅವರ ಮೇಲೆ ಗೈರು ಹಾಜರಿ ಪ್ರಕಣ ದಾಖಲಿಸಲಾಗಿತ್ತು.
ಈ ನಡುವೆ ಸುಮಾರು 350 ದಿನಗಳ ಕಾಲ ಗೈರು ಹಾಜರಾಗಿದ್ದರು. ಹೀಗಾಗಿ ಮಸ್ಕಿ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ನಿಯಮಾವಳಿಯಂತೆ ಈ ಸಿಬ್ಬಂದಿಯ ಮನೆ ವಿಳಾಸಕ್ಕೆ ಕರ್ತವ್ಯಕ್ಕೆ ಹಾಜರಾಗಲು ಕರೆ ಪತ್ರ ಮತ್ತು ಆಪಾದನಾ ಪತ್ರ 2-3 ಭಾರಿ ಭದ್ರತಾ ಸಿಬ್ಬಂದಿಗಳ ಮುಖಾಂತರ ಕಳುಹಿಸಿದರು ಸಹ ಕರೆ ಪತ್ರ ಮಾತ್ರ ಪಡೆದು ಆಪಾದನಾ ಪತ್ರ ಪಡಿಯದೇ ನಿರಾಕರಿಸಿದ್ದರು ಮತ್ತು ಭದ್ರತಾ ಸಿಬ್ಬಂದಿಗಳಿಗೆ ಮನೆ ಬರದಂತೆ ಸೂಚಿಸಿದ್ದರು.
ನಿಗಮ ನಿಯಮಾವಳಿಯಂತೆ ಸದರಿಯವರ ಮನೆ ವಿಳಾಸಕ್ಕೆ ಕಳುಹಿಸಿದ ಆಪಾದನಾ ಪತ್ರ ನಿರಾಕರಿಸಿದಕ್ಕೆ ಭದ್ರತಾ ವರದಿಯ ಆಧಾರದ ಮೇಲೆ ಇವರ ಮೇಲೆ ಶಿಸ್ತು ಪ್ರಕರಣ ದಾಖಲಾಗಿರುತ್ತದೆ. ಹೀಗೆ ಇವರಿಗೆ ಮತೊಂದು ಭಾರಿ ಭದ್ರತಾ ಸಿಬ್ಬಂದಿಯನ್ನು ಮನೆ ವಿಳಾಸಕ್ಕೆ ಆಪಾದನಾ ಪತ್ರ ಜಾರಿ ಮಾಡಲು ಕಳುಹಿಸಿದಾಗ ಸ್ವೀಕರಿಸದೇ ನಿರಾಕರಿಸಿರುತ್ತಾರೆಂದು ವರದಿಯಾಗಿದೆ.
ಮುಂದುವರಿದು ಮಸ್ಕಿ ಅವರು ಕರ್ತವ್ಯಕ್ಕೆ ಹಾಜರಗದೇ ವೈದ್ಯಕೀಯ ಆಧಾರ ಮೇಲೆ ಸ್ವಯಂ ನಿವೃತ್ತಿ ನೀಡಲು ಅರ್ಜಿ ಸಲ್ಲಿಸಿದ್ದರು, ಅದರಂತೆ ನಿಯಮಾವಳಿ ಪ್ರಕಾರ ಸ್ವಯಂ ನಿವೃತ್ತಿ ಅಂಗಿಕರಿಸುವ ಮುನ್ನ ಇವರ ಮೇಲಿರುವ ಎಲ್ಲ ಪ್ರಕಣಗಳನ್ನು ಇತ್ಯಾರ್ಥಗೊಳಿಸಬೇಕೆಂಬ ನಿಯಮವಿರುದರಿಂದ, ಇವವ ಮೇಲಿರುವ ಶಿಸ್ತು ಪ್ರಕರಣಗಳಿಗೆ ಅವರು ವಿಚಾರಣೆ ಪತ್ರಗಳು ಸ್ವೀಕರಿಸದೆ ಮತ್ತು ವಿಚಾರಣೆಗೆ ಸಹಕರಿಸದೇ ಇರುವುದರಿಂದ ನಾನು ಶಿಸ್ತುಪಾಲನಾಧಿಕಾರಿಯಾಗಿ 4500 ರೂ.ಗಳ ದಂಡವಿಧಿಸಿ ಪ್ರಕರಣಗಳ ಇತ್ಯಾರ್ಥ ಪಡಿದ್ದೇವೆ.
ಅದೇ ರೀತಿ 350 ದಿನಗಳ ಕಾಲ ಗೈರು ಹಾಜರಾಗಿರುವ ಪ್ರಕರಣದಲ್ಲಿ ನಿಯಮಾವಳಿಯಂತೆ ಒಂದು ತಿಂಗಳ ವೇತನ ಕಡಿತಗೊಳಿಸಿದ್ದು, ಪ್ರಕರಣ ಇತ್ಯಾರ್ಥ ಪಡೆಸಲಾಗಿದೆ. ಈ ಶಿಸ್ತು ಮತ್ತು ಗೈರು ಹಾಜರಿ ಪ್ರಕರಣಗಳ ಇತ್ಯಾರ್ಥಗೊಂಡ ನಂತರ ಸ್ವಯಂ ನಿವೃತ್ತಿ ಅರ್ಜಿ ನಿಯಮಾವಳಿಯಂತೆ ಅಂಗಿಕರಿಸಲಾಗಿದೆ.
ಮುಂದುವರಿದು ಮಸ್ಕಿ ಅವರಿಗೆ ಗೈರು ಹಾಜರಿ ಪ್ರಕರಣದಲ್ಲಿ ಶಿಸ್ತುಕ್ರಮವಾಗಿ ತಮಗೆ ಒಂದು ತಿಂಗಳ ವೇತನ ಕಡಿತಗೊಳಿಸಿರುತ್ತಾರೆಂದು ವಿಭಾಗೀಯ ಕಚೇರಿ, ಕೆಲವು ಶಾಖೆಗಳಿಗೆ ಹೋಗಿ ಅಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ಮುಂದೆ ಚಿರಾಡುತ್ತಾ ಕಿರಿಚಾಡುತ್ತಾ ಕಚೇರಿಯ ವಾತಾವಣ ಹಾಳು ಮಾಡಿದ್ದಾರೆ.
ಅದು ಅಲ್ಲದೇ ಇವರು ನಿವೃತ್ತಿ ಹೊಂದಿರುವ ಹಣ ನೀಡಲು ಪಿಡಿಸುತ್ತಿದಾರೆಂದು ದೂರಿದ್ದಾರೆ. ಆದರೆ ಇವರು ಅನಾರೋಗ್ಯದಿಂದ ನಿವೃತ್ತಿ ಪಡೆದಿರುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇಂದ್ರ ಕಚೇರಿಗೆ ವಿನಂತಿಸಿ ಹಣ ತರಿಸಿ ವಿಭಾಗದಲ್ಲಿ ಇವರಿಗಿಂತ ಮುಂಚೆ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಹಣ ನೀಡದೇ ಇವರಿಗೆ ಮೊದಲ ಆದ್ಯತೆ ನೀಡಿ ಗ್ರಾಚ್ಯುಟಿ, ರಜೆ ನಗದೀಕರಣ, ವಿ.ಆರ್.ಎಸ್ ಹಣಗಳನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ.
ಇದೆಲ್ಲವನ್ನು ಮಾಡಿದ್ದು, ನಾನು ಇವರಿಗೆ ಯಾವುದೇ ರೀತಿ ಹಣ ನೀಡಲು ಕಿರುಕುಳ ನೀಡಿಲ್ಲ. ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನನ್ನ ಮೇಲೆ ಈ ರೀತಿ ಇಲ್ಲಸಲ್ಲದ ಆರೋಪ ಮಾಡಿ ನನ್ನ ಮತ್ತು ನಿಗಮದ ಘನತೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ ರಹಿಮಾನ್ ಮಸ್ಕಿ ಎಂದು ತಮ್ಮ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಡಿಸಿ ಸಿದ್ದಪ್ಪ ಗಂಗಾಧರ್ ತಿಳಿಸಿದ್ದಾರೆ.
ಇನ್ನು ಮಸ್ಕಿ ಅವರಿಗೆ ನಾನು ಹಣ ಕೇಳಿದಲ್ಲಿ ಪೂರಕ ದಾಖಲಾತಿಗಳೊಂದಿಗೆ ನನ್ನ ಮೇಲೆ ನಿಗಮದ/ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳಿಗೆ ಮನವಿ ಸಲ್ಲಿಸಬಹುದು. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡುವುದನ್ನು ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.