NEWSನಮ್ಮಜಿಲ್ಲೆನಮ್ಮರಾಜ್ಯ

ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿಗೆ ಅಧಿಕಾರಿಗಳ ಅಸೋಶಿಯೇಶನ್ ಆಗ್ರಹ

NWKRTCಅಧಿಕಾರಿಗಳು & ನೌಕರರ ಬೇಡಿಕೆಗಳ ಈಡೇರಿಸಲು ಅಸೋಶಿಯೇಶನ್ ಅಧ್ಯಕ್ಷ ಅಶೋಕ ರು. ಪಾಟೀಲ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ
  • NWKRTC ಸಂಸ್ಥೆಯಲ್ಲಿ 2024-25 & 2025-26 ರ ಅವಧಿಯ ಗಳಿಕೆ ರಜೆ ನಗಧೀಕರಣವನ್ನು ಈವರೆಗೂ ಪಾವತಿಲ್ಲ. ಈ ಬಾಕಿಯಿರುವ  ಗಳಿಕೆ ರಜೆ ನಗಧೀಕರಣವನ್ನು 15 ದಿನಗಳಲ್ಲಿ ಪಾವತಿಸಬೇಕು
  • ಘಟಕ ವ್ಯವಸ್ಥಾಪಕರಿಗೆ ಕೆಲಸದ ಅವಧಿ ನಿಗದಿಪಡಿಸುವುದು ಹಾಗೂ ಅವರಿಗೆ ಮನೋಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕು 
  • ಬಿ.ಎಂ.ಟಿ.ಸಿ ಮಾದರಿಯಲ್ಲಿ ಘಟಕ ವ್ಯವಸ್ಥಾಪಕರಿಗೆ ಇಲಾಖಾ ವಾಹನಗಳ ಒದಗಿಸಲು ಕ್ರಮಕೈಗೊಳ್ಳಬೇಕು

ಹಾವೇರಿ: ಕರ್ನಾಟಕದ ಜನರ ಜೀವನಾಡಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ 1.30 ಲಕ್ಷ ನೌಕರರನ್ನು ಹೊಂದಿದ್ದು, ಅದರಲ್ಲಿ ಅಧಿಕಾರಿಗಳ ಸಂಖ್ಯೆಯು 799 ಇದ್ದು, ಅಧಿಕಾರಿಗಳ ಸಂಖ್ಯೆಯು ಸಿಬ್ಬಂದಿಗಳಿಗೆ ಹೋಲಿಸಿದಲ್ಲಿ ಪ್ರತಿಶತ 1 ಕ್ಕಿಂತ ಕಡಿಮೆ ಇದೆ. ಇದು ಅತೀ ಕಡಿಮೆ ಪ್ರಮಾಣದಲ್ಲಿದೆ ಹಾಗೂ ಅಕ್ಕಪಕ್ಕ ರಾಜ್ಯದ ಅಧಿಕಾರಿಗಳ ಅನುಪಾತಕ್ಕೆ ಹೋಲಿಸಿದಾಗ ಇದು ಅತೀ ಕಡಿಮೆ ಅನುಪಾತವಾಗಿದೆ. ಕಾರಣ ಕೊರತೆ ಇರುವ ಅಧಿಕಾರಿಗಳ ನೇಮಕಾತಿಯಾಗುವುದು ಅವಶ್ಯಕವಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ಆಫೀರ್ಸ್‌ ವೆಲ್ಫೇರ್ ಅಸೋಶಿಯೇಶನ್ ಅಧ್ಯಕ್ಷ ಅಶೋಕ ರು. ಪಾಟೀಲ.

ಇನ್ನು ರಾಜ್ಯದ ಜನತೆಗೆ ಉತ್ತಮವಾದ ಸೇವೆ ನೀಡುವ ದೃಷ್ಟಿಯಿಂದ ಅಸ್ತಿತ್ವಗೊಂಡಿರುವ ಈ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ, ಇದು ಒಂದು ವಾಣಿಜ್ಯ ಸಂಸ್ಥೆಯಾಗಿರದೇ, ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ನೀಡುವುದು ಮೊದಲ ಆದ್ಯತೆಯಾಗಿದೆ.

ದೇಶದಲ್ಲಿ ಯಾವುದೇ ಸಾರಿಗೆ ಸಂಸ್ಥೆ ಲಾಭದಾಯಕವಾಗಿಲ್ಲ. ಸಂಸ್ಥೆಯ ಆಡಳಿತದಲ್ಲಿ ನಿಯಂತ್ರಣ ಸಾಧಿಸಲು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ನಾಲ್ಕೂ ಸಂಸ್ಥೆಗಳು ಸ್ವತಂತ್ರವಾಗಿ ಹಾಗೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಸರಕಾರದ ಶಕ್ತಿಯೋಜನೆಯಿಂದ ಸಂಸ್ಥೆಗೆ ಸ್ವಲ್ಪ ಶಕ್ತಿ ಬಂದಂತಾಗಿ ಚೇತರಿಸಿಕೊಳ್ಳುತ್ತಿದೆ.

ಆದರೇ ಸಂಸ್ಥೆಗಳನ್ನು ಇನ್ನೂ ಉತ್ತಮವಾಗಿ, ಆರ್ಥಿಕವಾಗಿ, ಸ್ವಾವಲಂಬಿಯಾಗಿ ಹಾಗೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಹಾಗೂ ಸರಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಅನುಭವಿ ಹಾಗೂ ಹಿರಿಯ ಅಧಿಕಾರಿಗಳಿಂದ ಸಮಾಲೋಚನೆ ಮಾಡಿ ಸಂಸ್ಥೆಯ ಪುನರುಜ್ಜೀವನಕ್ಕೆ ಹಾಗೂ ಅವರ ಪ್ರಸ್ತುತ ಬೇಡಿಕೆಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇವೆ.

1) 2 ವರ್ಷದ Block Period ನ ಗಳಿಕೆ ರಜೆ ನಗಧೀಕರಣ ಪಾವತಿಸಬೇಕು: ವಾಯವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಹಾಗೂ ನೌಕರರಿಗೆ 2024-25 & 2025-26 ರ ಅವಧಿಯ ಗಳಿಕೆ ರಜೆ ನಗಧೀಕರಣವನ್ನು ಸಂಸ್ಥೆಯಲ್ಲಿ ಪಾವತಿಸಿಲ್ಲಾ. ಈಗಾಗಲೇ ಹಬ್ಬಹರಿದಿನಗಳು ಪ್ರಾರಂಭವಾಗಿರುವುದರಿಂದ ಹಾಗೂ ಹಾಗೂ ಇಲ್ಲಿನ ಅಧಿಕಾರಿಗಳ ಹಾಗೂ ನೌಕರರ ಮಕ್ಕಳ ಶಾಲಾ ಕಾಲೇಜುಗಳ ಪ್ರವೇಶಗಳು ಪ್ರಾರಂಭವಾಗುದರಿಂದ ಶುಲ್ಕ ಹಾಗೂ ಇನ್ನಿತರೆ ಖರ್ಚು ಭರಿಸಲು ಅನುಕೂಲವಾಗುತ್ತದೆ. ಕಾರಣ ಬಾಕಿಯಿರುವ 2024-25 & 2025-26 ರ ಅವಧಿಯ ಗಳಿಕೆ ರಜೆ ನಗಧೀಕರಣ 15 ದಿನಗಳಲ್ಲಿ ಪಾವತಿಸುವಂತೆ ಆಗ್ರಹಿಸಿದ್ದಾರೆ.

2) ಸಂಸ್ಥೆಯ ಆಧಾರ ಸ್ತಂಭಗಳಾದ ಘಟಕ ವ್ಯವಸ್ಥಾಪಕರ ಹುದ್ದೆಯನ್ನು ಪರಿಣಾಮಕಾರಿಯಾಗಿಸುವುದು ಮತ್ತು ಕೆಲಸದ ಅವಧಿಯನ್ನು ನಿಗದಿಪಡಿಸಬೇಕಿದೆ: ಅ) ಸಂಸ್ಥೆಯಲ್ಲಿ ಆದಾಯಗಳಿಸುವ ಪ್ರಮುಖ ಕೇಂದ್ರ ಘಟಕಗಳು. ಆದರೆ, ಇತ್ತೀಚಿನ ದಿನಗಳಲ್ಲಿ ಘಟಕ ವ್ಯವಸ್ಥಾಪಕರ ಹುದ್ದೆ ಅತೀ ನಿರ್ಲಕ್ಷತನಕ್ಕೆ ಒಳಗಾಗಿದ್ದು, ಇದರಿಂದಾಗಿ ಘಟಕ ವ್ಯವಸ್ಥಾಪಕರ ಸಾಧನೆ ಕಳಪೆಯಾಗುತ್ತಿದೆ. ಆದ ಕಾರಣ ಈ ಹಿಂದೆ ಘಟಕಗಳನ್ನು ಎ ಬಿ ಸಿ ಎಂದು ವರ್ಗಿಕರಣ ಮಾಡಿ ಉತ್ತಮ/ ಅತ್ಯುತ್ತಮ ಘಟಕ ವ್ಯವಸ್ಥಾಪಕರನ್ನು ಗುರುತಿಸಿ ಎ ಮತ್ತು ಬಿ ಘಟಕ ವ್ಯವಸ್ಥಾಪಕರನ್ನು ನಿಯೋಜಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಇದರಿಂದ ಸಂಸ್ಥೆಯ ಪ್ರಗತಿ ಕುಂಠಿತವಾಗಲು ಕಾರಣವಾಗಿದೆ. ಇದನ್ನು ಸರಿಪಡಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ. ಘಟಕ ವ್ಯವಸ್ಥಾಪಕರು ಘಟಕದ ಮೊದಲ ಅನುಸೂಚಿ ನಿರ್ಗಮನ ಹಾಗೂ ಘಟಕದ ಕೊನೆಯ ಅನುಸೂಚಿ ನಿರ್ಗಮನದ ವರೆಗೂ ಘಟಕದಲ್ಲಿಯೇ ಇರಲು ನಿರ್ದೇಶನವಿರುವುದರಿಂದ ಕೆಲಸ ಅವಧಿಯು 14 ರಿಂದ 15 ತಾಸು ಮೀರುತ್ತದೆ.

ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅಗುತ್ತದೆ. ಇದರಿಂದಾಗಿ ಅವರಿಗೆ ಮಾನಸಿಕವಾಗಿ ಕುಂದುವಂತಾಗಿ ಮನೋಸ್ಥೈರ್ಯ ಕಳೆದುಕೊಳ್ಳುವಂತಾಗಿರುವುದಲ್ಲದೇ ಹತಾಶೆ ಹಂತವನ್ನು ತಲುಪಿದ್ದಾರೆ. ಅಲ್ಲದೇ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಬಿಪಿ ಹಾಗೂ ಶುಗರ್ ಕಾಯಿಲೆಗೆ ತುತ್ತಾಗಿ ಹೃದಯಾಘಾತವಾಗಿ ಹಾಗೂ ಪಾಶ್ವವಾಯುಗೆ ತುತ್ತಾಗುವ ಸಾಧ್ಯತೆಯಿದೆ. ಆದ ಕಾರಣ ಸಂಸ್ಥೆಯಲ್ಲಿ ಘಟಕ ವ್ಯವಸ್ಥಾಪಕರಿಗೆ ಕೆಲಸದ ಅವಧಿಯನ್ನು ನಿಗದಿಪಡಿಸುವುದು ಹಾಗೂ ಅವರಲ್ಲಿ ಮನೋಸ್ಥೈರ್ಯ ಹೆಚ್ಚಿಸುವ ಕೆಲಸವಾಗಬೇಕಾಗಿದೆ.

ಆ) ಪ್ರಸ್ತುತ ಘಟಕ ವ್ಯವಸ್ಥಾಪಕರಿಗೆ ಮೊಬೈಲ್ ಖರೀದಿಗೆ ರೂ.8000/- ಮೊತ್ತವಿದ್ದು, ಅದರ ಜತೆಗೆ ಈಗಾಗಲೇ ಹಲವು ಬಾರಿ ಒಪ್ಪಿಕೊಂಡಂತೆ ಘಟಕ ವ್ಯವಸ್ಥಾಪಕರಿಗೆ ಟ್ಯಾಬ್ ಅಥವಾ ಸ್ಮಾರ್ಟ್‌ ಪೋನ್ ನೀಡಬೇಕು.

ಇ) ಘಟಕ ವ್ಯವಸ್ಥಾಪಕರಿಗೆ ಅಪಘಾತ ಸ್ಥಳ ಪರಿಶೀಲನೆಗೆ, ಮಾರ್ಗ ಸಮೀಕ್ಷೆ, ಬಸ್ ನಿಲ್ದಾಣ ಪರಿಶೀಲನೆ, ತಾಲೂಕು ಮಟ್ಟದ ಸಭೆಗಳಿಗೆ ಹಾಜರಾಗಲು ಬಿ.ಎಂ.ಟಿ.ಸಿ ಮಾದರಿಯಲ್ಲಿ ಘಟಕ ವ್ಯವಸ್ಥಾಪಕರಿಗೆ ಇಲಾಖಾ ವಾಹನಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು.

3) KSRTC CADRE AND REGULATIONS 1982ರ ಪರಿಚ್ಚೇದ 17/1 ರ ಮೇಲೆ ಸಾಕಷ್ಟು ಅಧಿಕಾರಿಗಳನ್ನು ಮೂಲ ಹುದ್ದೆಯಿಂದ ಬೇರೆ ಹುದ್ದೆಗೆ ನಿಯೋಜಿಸಲಾಗಿದ್ದು, ಇದರಿಂದಾಗಿ ಸಾಕಷ್ಟು ಅಧಿಕಾರಿಗಳ ಸೇವೆಯು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಅಲ್ಲದೇ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯಾನಿರ್ವಹಿಸಲು ಸಾಧ್ಯವಾಗದೇ, ಅನಿವಾರ್ಯ ಕಾರಣಗಳಿಗೆ ಮಾತ್ರ ಬಳಕೆಯಾಗಬೇಕಾದ ಈ ನಿಯಮ ಕೆಲವರಿಗೆ ವರದಾನವಾಗಿ ಅವರ ಅನುಕೂಲತೆಗೆ ಬಳಕೆಯಾಗುತ್ತಿದೆ.

ಇದರಿಂದಾಗಿ ಸಂಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ ಸಂಸ್ಥೆಯಲ್ಲಿ ದುರಾಡಳಿತ ಹೆಚ್ಚಾಗಿ ಸಂಸ್ಥೆಯ ಪ್ರಗತಿಗೆ ಕುಂಠಿತವಾಗಿದೆ. ಅಲ್ಲದೇ ಹಗರಣಗಳು ಆಗುವ ಸಾಧ್ಯತೆ ಇದೆ. ಆದ ಕಾರಣ ಪ್ರಸ್ತುತ ಸಂಸ್ಥೆಯಲ್ಲಿ 17/1 ರಡಿಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ಆದೇಶವನ್ನು ದಿ:10-05-2026 ರ ಒಳಗಾಗಿ ರದ್ದುಗೊಳಿಸಿ ಅವರ ಮೂಲ ಹುದ್ದೆಗೆ ನಿಯೋಜಿಸಿ ಸಂಸ್ಥೆಯನ್ನು ರಕ್ಷಿಸುವಂತೆ ಒತ್ತಾಯಿಸಿದ್ದಾರೆ.

4) ಸಂಸ್ಥೆಯಲ್ಲಿ C&D ನಿಯಮಾವಳಿ ಜಾರಿಯಲ್ಲಿದ್ದು, ಅದರಂತೆ ಅಧಿಕಾರಿಗಳು & ನೌಕರರ ಮೇಲೆ ಶಿಸ್ತು ಕ್ರಮಗಳು ಜರುಗಿಸಬೇಕಾಗಿದೆ. ಆದರೆ ಕೇಂದ್ರ ಕಚೇರಿ ಮಟ್ಟದಲ್ಲಿ ಹಾಗೂ ವಿಭಾಗ ಮಟ್ಟದಲ್ಲಿ C&D ನಿಯಮಾವಳಿ ವಿರುದ್ಧವಾಗಿ ಕ್ರಮ ಜರುಗಿಸಲಾಗುತ್ತಿದ್ದು, ಕಳೆದ ಎರಡು ವರ್ಷದ ಅವಧಿಯಲ್ಲಿ C&D ನಿಯಮಾವಳಿ ಉಲ್ಲಂಘನೆಯ ಶಿಸ್ತು ಆದೇಶಗಳನ್ನು ರದ್ದುಗೊಳಿಸಿ ಸಂಸ್ಥೆಯ ಶಿಸ್ತು ಹಾಗೂ ಘನತೆ, ಗೌರವ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

5) ಸಂಸ್ಥೆಯಲ್ಲಿ ಅಧಿಕಾರಿಗಳ ವರ್ಗಾವಣೆ ಹಾಗೂ ಪದೋನ್ನತಿ ಮತ್ತು ರಜೆ ನೀಡುವಲ್ಲಿ ಸಾಕಷ್ಟು ತಾರತಮ್ಯಗಳಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪಾರದರ್ಶಕತೆ ತರುವುದು ಹಾಗೂ ತಾರತಮ್ಯ ನೀತಿಯನ್ನು ತಗೆದು ಹಾಕುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳ ಅವಶ್ಯಕತೆ ಇದೆ. ಪ್ರಸ್ತುತ ಈ ಕಾರಣಗಳಿಂದಾಗಿ ಅಧಿಕಾರಿಗಳ ಮನೋಸ್ಥೈರ್ಯ ಕಳೆದುಕೊಳ್ಳುವಂತಾಗಿದೆ. ಪ್ರಸ್ತುತ ಜರುಗುತ್ತಿರುವ ಲೋಪದೋಷಗಳನ್ನು ಸರಿಪಡಿಸಿ ಅಧಿಕಾರಿಗಳ ಮನೋಸ್ಥೈರ್ಯ ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

6) ಪ್ರಸ್ತುತ ಏಪ್ರಿಲ್‌, ಮೇ ಹಾಗೂ ಜೂನ್ ಮಾಹೆಗಳು ಹೆಚ್ಚಿನ ಜನಸಂದಣಿ ಮಾಹೆಗಳಾಗಿದ್ದು, ಈ ಮಾಹೆಯಲ್ಲಿ ವಿಭಾಗ ಮಟ್ಟದ ಅಧಿಕಾರಿಗಳು ಹಾಗೂ ಘಟಕ ಮಟ್ಟದ ಅಧಿಕಾರಿಗಳು ಸಂಸ್ಥೆಯ ಪ್ರಮುಖ ಉದ್ದೇಶವಾದ ಬಸ್ ಕಾರ್ಯಾಚರಣೆ ಮೇಲೆ ಕೇಂದ್ರಿಕೃತವಾಗಿರುವುದು ಅತೀ ಅವಶ್ಯಕವಾಗಿದೆ. ಆದರೆ ವಾರಕ್ಕೆ 2 ರಿಂದ 3 ಸಭೆಗಳು, ತರಬೇತಿ ಕಾರ್ಯಕ್ರಮಗಳನ್ನು ಮುಂದೂಡಲು ಹಾಗೂ ವಿಚಾರಣೆಗಳನ್ನು ಸಹ ಸಂಸ್ಥೆಯ ಹಿತದೃಷ್ಟಿಯಿಂದ ಮುಂದೂಡುವುದು ಸೂಕ್ತವಾಗಿದೆ.

ಒಟ್ಟಾರೆಯಾಗಿ ಸಂಸ್ಥೆಯನ್ನು ಆರ್ಥಿಕವಾಗಿ ಸಧೃಡಗೊಳಿಸುವಲ್ಲಿ ಸರಕಾರದ ಹಾಗೂ ನೌಕರರ ಪಾತ್ರ ಅಪಾರವಾಗಿದ್ದು, ತನ್ನ ಕಾಲ ಮೇಲೆ ತಾನು ನಿಲ್ಲಲು, ಇದರಲ್ಲಿ ಕೇವಲ ಒಂದು ವರ್ಗದ ಹಿತಾಸಕ್ತಿ ಇರುವುದಿಲ್ಲ. ಎಲ್ಲ ವರ್ಗದ ಅಧಿಕಾರಿ/ ಸಿಬ್ಬಂದಿ/ ನೌಕರರ ಹಾಗೂ ಅವರ ಕುಟುಂಬದವರ ಜೀವನದ ಪ್ರಶ್ನೆಯಾಗಿರುವುದಲ್ಲದೇ ಹಾಗೂ ನಾಡಿನ ಜನತೆಯ ಜೀವನಾಡಿಯಾದ ಸಾರಿಗೆ ಸಂಸ್ಥೆಯ ಉಳಿವಿನ ಪ್ರಶ್ನೆಯೂ ಇದಾಗಿದೆ, ಕಾರಣ ಸಂಸ್ಥೆಯ ರಕ್ಷಣೆಯ ಉಳಿವಿಗಾಗಿ ಹಾಗೂ ಅಭಿವೃದ್ಧಿಗಾಗಿ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಶೋಕ ರು. ಪಾಟೀಲ ಆಗ್ರಹಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿ... ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಓಕೆನಾ ಅಥವಾ ವೇತನ ಆಯೋಗನಾ? ನೌಕರರ ಅಭಿಪ್ರಾಯವೇನು? KKRTC ವಿಜಯಪುರ: ಪ್ರತಿಷ್ಠಿತ ಸಾರಿಗೆ ಕಲ್ಯಾಣ ರಥ ಸ್ವಂತಕ್ಕೆ ಬಳಸುತ್ತಿರುವ ಕೆಲ ಅಧಿಕಾರಿಗಳು- ಮೌನವಾಗಿರುವ ಡಿಸಿ ಅಮಾ... ಕೇಂದ್ರ ಸರ್ಕಾರ 1966ರ ಸಕ್ಕರೆ ನಿಯಂತ್ರಣ ಕಾಯ್ದೆ ಬಗ್ಗೆ ಕೇಳಿರುವ ಅಭಿಪ್ರಾಯಕ್ಕೆ ರಾಜ್ಯ ಸರ್ಕಾರ ಸಮಿತಿ ರಚಿಸಿ ವರದಿ ... ಮೇ 15ರೊಳಗೆ ಡಿಕೆಶಿಗೆ ಹೈಕಮಾಂಡ್​ನಿಂದ ಸಿಗಲಿದೆಯೇ ಬಿಗ್ ಬರ್ತ್​ಡೇ ಗಿಫ್ಟ್? ನಿಗೂಢವಾಗಿ ಮೃತಪಟ್ಟ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿ: ಬೆತ್ತಲೆ, ಅರೆಕೊಳೆತ ಸ್ಥಿತಿಯಲ್ಲಿ ಪತ್ತೆ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಸೌಲಭ್ಯ ಜಾರಿಗೆ ಮುಂದಾದ ಸಾರಿಗೆ ಇಲಾಖೆ ಕಾರು-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ: ಐವರು ಸಾವು, ಏಳು ಮಂದಿಗೆ ಗಂಭೀರ ಗಾಯ ನೌಕರರ 18 ತಿಂಗಳ ಬಾಕಿ ಹಣ 6 ಕಂತುಗಳಲ್ಲಿ ನೀಡಲಾಗುವುದು: ವಿತ್ತ ಸಚಿವರ ಭರವಸೆ KSRTC ಕೋಲಾರ ವಿಭಾಗದ ಅಧಿಕಾರಿಗಳ ದರ್ಪ- ಚಾಲಕರ ಹೆದರಿಸಿ ವಿಶ್ರಾಂತಿ ರಹಿತ ಡಬಲ್‌ ಡ್ಯೂಟಿ, ಸಿಂಗಲ್‌ ಪೇಮೆಂಟ್‌, ಒಟಿ ...