ಲಿಂಗಸುಗೂರು: ರಸ್ತೆ ಕಿರಿದಾದರಿಂದ ಸ್ವಲ್ಪ ಮುಂದೆ ಹೋಗಿ ಬಸ್ ನಿಲ್ಲಿಸಿದಕ್ಕೆ ಕುಪಿಗೊಂಡ ಪ್ರಯಾಣಿಕನೊಬ್ಬ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಸಾರಿಗೆ ನೌಕರರು ಆರೋಪಿಸಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದ ನಿರ್ವಾಹಕ ಲಿಂಗಣ್ಣ ಮತ್ತು ಚಾಲಕ ಮಲ್ಲು ಕುಂಬಾರ ಎಂಬುವರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಲ್ಲೆ ಮಾಡಿದ ಪ್ರಯಾಣಿಕನನ್ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಲಿಂಗಸಗೂರು ಘಟಕದ ರೂಟ್ ನಂಬರ್ 105ರ ವಾಹನ ಲಿಂಗಸಗೂರು ನಿಂದ ಕಡದರಗಡ್ಡಿಗೆ ಹೋಗುವಾಗ ಯರಗೋಡಿ ಗ್ರಾಮದ ರಾಮಪ್ಪ ಹಾಲಬಾವಿ ಎಂಬುವರು ಬಸ್ ಹತ್ತಿದ್ದರು, ಅವರು ಇಳಿಯಬೇಕಿದ್ದ ಸ್ಥಳದಲ್ಲಿ ರಸ್ತೆ ಕಿರಿದಾದರಿಂದ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದಕ್ಕೆ ನಿರ್ವಾಹಕ ಹಾಗೂ ಚಾಲಕರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಹಲ್ಲೆ ಸಂಬಂಧ FIR ಕೂಡ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ವಿಡಿಯೋದಲ್ಲಿ ಬಸ್ ಸಿಬ್ಬಂದಿಯೇ ಮೊದಲು ಪ್ರಯಾಣಿಕನ ಮೇಲೆ ಹಲ್ಲೆ ಮಾಡಿರುವುದು ಕಂಡು ಬರುತ್ತಿದ್ದು ನಂತರ ಆ ಪ್ರಯಾಣಿಕನನ್ನು ಬಸ್‌ನಿಂದ ಎಳೆದುಹಾಕಿ ನಂತರ ಹೊಡಿ ಹೊಡಿ ಎಂದು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.
ಇಲ್ಲಿ ಪ್ರಯಾಣಿಕ ಮತ್ತು ಸಾರಿಗೆ ಸಿಬ್ಬಂದಿ ಅಂದರೆ ಎರಡು ಕಡೆಯೂ ತಪ್ಪಾಗಿರುವುದು ಕಂಡು ಬರುತ್ತಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ.