NEWSಉದ್ಯೋಗನಮ್ಮರಾಜ್ಯ

ಸ್ವಂತ ಉದ್ಯೋಗ ಮಾಡಬಯಸುವ ಯುವಕ ಯುವತಿಯರಿಗೆ 50 ಲಕ್ಷ ರೂ.ವರೆಗೂ ಸಾಲ ಸೌಲಭ್ಯ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ 250ಕ್ಕೂ ಹೆಚ್ಚಿನ ಬಗೆಯ ಉದ್ಯೋಗಗಳಿಗೆ ಸಂಬಂಧಿಸಿದಂತೆ 50 ಲಕ್ಷ ರೂಪಾಯಿ ವರೆಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ.

ಸ್ವಂತ ಉದ್ಯೋಗ (Own business) ಮಾಡಬೇಕು ಎನ್ನುವ ಕನಸು ಇರುವವರಿಗೆ ಕೇಂದ್ರ ಸರ್ಕಾರ (central government) ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ ಸ್ವಾವಲಂಬನೆ ಜೀವನ (independent life) ಕಟ್ಟಿಕೊಳ್ಳಲು ಪುರುಷರು ಅಥವಾ ಮಹಿಳೆಯರು ಸಾಲ ಸೌಲಭ್ಯ (loan facility) ಪಡೆದು ತಮ್ಮದೇ ಆಗಿರುವ ಸ್ವಂತ ಉದ್ಯಮ ಆರಂಭಿಸಬಹುದು.

ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP) ಉತ್ಪಾದನಾ ಮತ್ತು ಸೇವಾ ಘಟಕಗಳಲ್ಲಿ ಸ್ವಂತ ಉದ್ಯಮ ಆರಂಭಿಸುವವರಿಗೆ PMEGP ಅಡಿಯಲ್ಲಿ 2020 ಸಾಲಿನಲ್ಲಿ ಸಾಲ ಸೌಲಭ್ಯ (loan ) ಪಡೆಯಲು ಕೇಂದ್ರ ಸರ್ಕಾರ ನಿರುದ್ಯೋಗಿಗಳಿಗೆ ಹಾಗೂ ಆಸಕ್ತ ಸ್ವಉದ್ಯೋಗಿಗಳಿಗೆ ಕರೆ ನೀಡಿದೆ.

PMEGP ಉದ್ದೇಶ! (Purpose of PMEGP): ನಿರುದ್ಯೋಗಿ (unemployment) ಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದ ಮುಖ್ಯ ಉದ್ದೇಶ. ಇಂದು ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಬಹುವಾಗಿ ಕಾಡುತ್ತಿದೆ ಇದರಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆ ಉದ್ಯೋಗ ಕಂಡುಕೊಳ್ಳುವುದು ಜನರಿಗೆ ಕಷ್ಟವಾಗುತ್ತಿದೆ.

ಹೀಗಾಗಿ ಸ್ವಂತ ಉದ್ಯಮವನ್ನಾದರೂ ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಕಾರಣಕ್ಕೆ ನಿರುದ್ಯೋಗ ಯುವಕ, ಯುವತಿಯರಿಗೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಂತ ಉದ್ಯಮ ಆರಂಭಿಸಲು ಈ ಕಾರ್ಯಕ್ರಮದ ಅಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು.

PMEGP ಸಾಲ ಸೌಲಭ್ಯ: ನೀವು ಯಾವ ಉದ್ಯೋಗ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಸಾಲದ ಮೊತ್ತ (loan amount) ನಿಗದಿಪಡಿಸಲಾಗುತ್ತದೆ. ಸುಮಾರು 50 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು ಹಾಗೂ ಶೇ.25 ರಿಂದ 35% ವರೆಗೆ ಸಬ್ಸಿಡಿಯನ್ನು ಸರ್ಕಾರದಿಂದ ಪಡೆಯಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
ಅರ್ಜಿದಾರರ ಫೋಟೋ
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಸ್ವಉದ್ಯೋಗ ಆರಂಭಿಸಲು ಉದ್ಯೋಗದ ಬಗ್ಗೆ ಸಂಪೂರ್ಣವಾದ ವಿವರ
ಬ್ಯಾಂಕ್ ಖಾತೆಯ ವಿವರ (ಈ ಕೆವೈಸಿ ಕಡ್ಡಾಯ)

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (PMEGP) ಅಧಿಕೃತ ವೆಬ್ಸೈಟ್ನಲ್ಲಿ ಸರಿಯಾದ ವಿವರಗಳನ್ನು ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದು ಆನ್ಲೈನ್ ಪ್ರಕ್ರಿಯೆ ಆಗಿರುವುದರಿಂದ ನೀವು ಯಾವುದೇ ಬ್ಯಾಂಕ್ ಹೋಗಿ ಸಾಲಕ್ಕಾಗಿ ಕಾಯಬೇಕಿಲ್ಲ. ಆನ್ಲೈನ್ ನಲ್ಲಿ ವಿವರಗಳು ಸರಿಯಾಗಿ ನೀಡಿದರೆ ಸಾಲ ಮಂಜೂರು ಆಗುತ್ತದೆ.

Leave a Reply

error: Content is protected !!
LATEST
KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್‌ಡಿಕೆಗೆ ಜೆಡಿಎಸ್ ನಾಯಕರಿಂದ ಅದ್ದೂರಿ ಸ್ವಾಗತ ಪ್ರತಿ ಮನೆಯಿಂದ ₹100 ಘನತ್ಯಾಜ್ಯ ಶುಲ್ಕ ಸಂಗ್ರಹಕ್ಕೆ ಎಎಪಿ ವಿರೋಧ - ಜೂ.17ರಿಂದ ಮನೆಮನೆಗೆ ತೆರಳಿ ಜಾಗೃತಿ ಅಭಿಯಾನ KSRTC: ಬಾನಂದೂರು - ಶ್ರೀಕ್ಷೇತ್ರ ಆದಿ ಚುಂಚನಗರಿ ನಡುವಿನ ಬಸ್‌ ಸಂಚಾರಕ್ಕೆ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಚಾಲನೆ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಸಂಬಂಧ ಕರೆದಿದ್ದ ಎಂಡಿಗಳ ಸಭೆ ಮುಂದೂಡಿಕೆ KSRTC- 3ನಿಗಮಗಳ 15 ಡಿಸಿಗಳ ವರ್ಗಾವಣೆ ಮಾಡಿ ಆದೇಶ: ಸಿಪಿಎಂ KSRTC: ಅಪಘಾತದಿಂದ ಮೃತಪಟ್ಟ ನಾಲ್ವರು ನೌಕರರ ಕುಟುಂಬಕ್ಕೆ ತಲಾ 1ಕೋಟಿ ರೂ. ಚೆಕ್‌ ವಿತರಣೆ KSRTC: ನಾಳೆಯಿಂದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಜನ್ಮಸ್ಥಳ ಬಾನಂದೂರು- ಆದಿ ಚುಂಚನಗಿರಿಗೆ ನೇರ ಬಸ್ ಸೌಕರ್ಯ KSRTC: ಜೂ.15ರಂದು ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿ ಸಂಬಂಧ ಸಚಿವರ ಅಧ್ಯಕ್ಷತೆಯಲ್ಲಿ ಎಂಡಿಗಳ ಸಭೆ