NEWSದೇಶ-ವಿದೇಶನಮ್ಮರಾಜ್ಯ

ಕೆನರಾ ಬ್ಯಾಂಕ್‌ನಲ್ಲಿ ₹20 ಸಾವಿರ FD ಮಾಡಿ ₹40 ಸಾವಿರ ಪಡೆಯಿರಿ..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗ್ರಾಹಕರಿಗೆ ಕೆನರಾ ಬ್ಯಾಂಕ್ ನೀಡುತ್ತಿರುವ ಸೇವೆಗಳಲ್ಲಿ ಒಂದಾದ ಎಫ್‌ಡಿ ಯೋಜನೆಯ ಬಡ್ಡಿದರದ ಬಗ್ಗೆ ಆಸಕ್ತ ಬ್ಯಾಂಕ್ ಗ್ರಾಹಕರು ಪರಿಶೀಲಿಸಿ ಹೂಡಿಕೆ ಮಾಡಬಹುದಾಗಿದೆ.

ಇನ್ನು 7 ದಿನಗಳಿಂದ 45 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 4% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 4% ಬಡ್ಡಿದರ ನೀಡಲಾಗುತ್ತದೆ. ಅದರಂತೆ 46 ದಿನಗಳಿಂದ 90 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 5.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 5.25% ಬಡ್ಡಿದರ ನೀಡಲಾಗುತ್ತದೆ.

91 ದಿನಗಳಿಂದ 179 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 5.50% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 5.50% ಬಡ್ಡಿದರ ನೀಡಲಾಗುತ್ತದೆ. 180 ದಿನಗಳಿಂದ 269 ದಿನಗಳವರೆಗೆ ಸಾಮಾನ್ಯ ನಾಗರಿಕರಿಗೆ 6.15% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 6.65% ಬಡ್ಡಿ ಸಿಗಲಿದೆ.

270 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 6.75% ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷದ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.85% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿ ಸೇರಿಸಿ ನೀವು ಹೂಡಿದ ಹಣದ ಜತೆಗೆ ಬಡ್ಡಿಯೂ ಬರಲಿದೆ.

ಇನ್ನು 444 ದಿನಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ 7.25% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.75% ಬಡ್ಡಿದರ ನೀಡಲಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು, ಆದರೆ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮಾಡಿಸಿದರೆ ಸಾಮಾನ್ಯ ನಾಗರಿಕರಿಗೆ 6.85% ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿ ಹಣ ಸಿಗಲಿದೆ.

2 ವರ್ಷಕ್ಕಿಂತ ಹೆಚ್ಚು, ಆದರೆ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.85% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.35% ಬಡ್ಡಿದರ ನೀಡಲಾಗುತ್ತದೆ. 3 ವರ್ಷಕ್ಕಿಂತ ಹೆಚ್ಚು, ಆದರೆ 5 ವರ್ಷಕ್ಕಿಂತ ಕಡಿಮೆ ಅವಧಿಗೆ ಸಾಮಾನ್ಯ ನಾಗರಿಕರಿಗೆ 6.80% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.30% ಬಡ್ಡಿದರ ನೀಡಲಾಗುತ್ತದೆ.

ಅದರಂತೆ 5 ವರ್ಷಗಳಿಂದ 10 ವರ್ಷಗಳವರೆಗೆ ಸಾಮಾನ್ಯ ನಾಗರಿಕರಿಗೆ 6.70% ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ 7.20% ಬಡ್ಡಿದರ ನೀಡಲಾಗುತ್ತದೆ. ಹಾಗಾಗಿ ನಾವು 5 ವರ್ಷದ ಅವಧಿಯ 20,000 ರೂ. ಎಫ್‌ಡಿ ಮಾಡಿಸಿದರೆ 7.20% ಬಡ್ಡಿದರದೊಂದಿಗೆ ಒಟ್ಟು 28,575 ರೂ. ಸಿಗಲಿದೆ. ನಾವು 10 ವರ್ಷದ ಅವಧಿಯ 20,000 ರೂ. ಎಫ್‌ಡಿ ಮಾಡಿಸಿದರೆ 7.20% ಬಡ್ಡಿದರದೊಂದಿಗೆ ಒಟ್ಟು 40,826 ರೂ. ಸಿಗಲಿದೆ.

ಇನ್ನು ನೀವು ಬ್ಯಾಂಕ್‌ನಲ್ಲಿ ಹೆಚ್ಚು ವರ್ಷ ಎಫ್‌ಡಿ ಮಾಡಿದಷ್ಟು ಬಡ್ಡಿಯು ದುಪ್ಪಟ್ಟಾಗುತ್ತದೆ. ಅದು ಹೇಗೆಂದರೆ ತಿಂಗಳಿಂದ ತಿಂಗಳಿಗೆ ನಿಮ್ಮ ಹಣಕ್ಕೆ ಸಿಗುವ ಬಟ್ಟಿಗೂ ಬಡ್ಡಿ ಸಿಗಲಿದೆ. ಹೀಗಾಗಿ 10 ವರ್ಷ ಅದಕ್ಕೂ ಮೇಲ್ಪಟ್ಟು ಎಫ್‌ಡಿ ಮಾಡಿಸಿದರೆ ಹಾಕಿದ ಹಣಕ್ಕೆ ದುಪ್ಪಟ್ಟು ಹಣ ಸಿಗಲಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ವಿಚಾರಿಸಬಹುದು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ