ಬೆಂಗಳೂರು: ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಕ್ರಮಗಳು ನಡೆದಿವೆ ಎಂದು 15ಕ್ಕೂ ಹೆಚ್ಚು ದೂರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸಲ್ಲಿಸಲಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ 2 ವರದೊಳಗೆ ವರದಿ ಸಲ್ಲಿಸುವಂತೆ ಸಿಎಂ ಆದೇಶ ಮಾಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರು ಹಾಗೂ ಆಡಳಿತ ವ್ಯವಸ್ಥೆಯ ವೈಫಲ್ಯದಿಂದಾಗಿ ಆಸ್ಪತ್ರೆಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ದೂರಲಾಗಿದೆ. ಹೀಗಾಗಿ ಅಕ್ರಮ ನಡೆದಿರುವ ಬಗ್ಗೆ ವರದಿ ಸಲ್ಲಿಸುವುದಕ್ಕೆ ಡಾ.ಅರುಂಧತಿ ಚಂದ್ರಶೇಖರ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಈ ತಂಡಕ್ಕೆ ಜವಾಬ್ದಾರಿಯನ್ನು ನೀಡಲಾಗಿದೆ.
ಸಿದ್ದರಾಮಯ್ಯ ಅವರಿಗೆ 15ಕ್ಕೂ ಹೆಚ್ಚು ದೂರುಗಳು ಲಿಖಿತವಾಗಿ ಸಲ್ಲಿಕೆಯಾಗಿವೆ. ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸಿದ್ದರಾಮಯ್ಯರವರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ವೈದ್ಯಕೀಯ ಶಿಕ್ಷಣ ಇಲಾಖೆ ಡಾ.ಅರುಂಧತಿ ಚಂದ್ರಶೇಖರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಿದೆ.
ಸಿಎಂಗೆ ಸಲ್ಲಿಸಿದ ದೂರಿನಲ್ಲಿ ಏನಿದೆ?: ಆಸ್ಪತ್ರೆಯ ಪೆಟ್‌ಸ್ಕ್ಯಾನ್ ಟೆಂಡರ್ ನಿಯಮ ಉಲ್ಲಂಘನೆ ಮಾಡಲಾಗಿದ್ದು ಅವಧಿಗೂ ಮುನ್ನವೇ ನಿರ್ದೇಶಕರಿಂದ ಟೆಂಡರ್ ಕೆರೆಯಲಾಗಿದೆ. ವಸ್ತುಗಳ ಪೂರೈಕೆಗೂ ಮುನ್ನವೇ ಬಿಲ್ಲಿಂಗ್ ಹಾಗೂ ಹೆಚ್ಚುವರಿ ಹಣ ವಸೂಲಿ ಮಾಡಲಾಗಿದೆ.
ನಿಯಮ ಉಲ್ಲಂಘಿಸಿರುವ ಆಡಳಿತ ಮಂಡಳಿ ಮಾನವ ಸಂಪನ್ಮೂಲನ ಪೂರೈಕೆ ಮಾಡಿದೆ. ಕಳಪೆ ಮಟ್ಟದ ಪೆಟ್‌ಸ್ಕ್ಯಾನ್ ಯಂತ್ರ ಖರೀದಿಸಿ ಇದರಲ್ಲಿ ಜಿಎಸ್‌ಟಿ ವಂಚನೆ ಮಾಡಿದ್ದಾರೆ. ಇದು ಅಲ್ಲದೇ ಸರ್ಕಾರದ ಅನುಮೋದನೆ ಇಲ್ಲದೆ ಟೆಂಡರ್‌ದಾರರಿಗೆ ಈಗಾಗಲೇ ಹಣ ಸಂದಾಯ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಪಿಪಿಪಿ ಮಾದರಿಯ ನಿಯಮ ಉಲ್ಲಂಘನೆ ಮಾಡಿದ್ದು ಕಳಪೆ ಗುಣಮಟ್ಟದ ಔಷಧ, ಔಷಧಗಳ ಖರೀದಿಯಲ್ಲಿ ಅಕ್ರಮ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಸಂಖ್ಯೆ ಕೂಡ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಎಂದು ಆಡಳಿತ ವ್ಯವಸ್ಥೆಯ ವಿಫಲತೆ ಬಗ್ಗೆ ಸಿಎಂ ವಿವರವಾದ ದೂರು ಸಲ್ಲಿಸಲಾಗಿದೆ.