NEWS

ಮದುವೆಗೆ ಹೆಣ್ಣು ಮಕ್ಕಳು ಸಿಗುತ್ತಿಲ್ಲ ಅಂತ ಮಾದಪ್ಪನ ಮೊರೆ ಹೋಗುತ್ತಿರುವ ಮಂಡ್ಯ ಹೈಕ್ಳು

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಮದುವೆ ವಯಸ್ಸಿಗೆ ಬಂದರೂ ನಮಗೆ ಕನ್ಯೆ ಯರು ಸಿಗುತ್ತಿಲ್ಲ ಎಂದು ಮಂಡ್ಯ ಜಿಲ್ಲೆ ಹೈಕ್ಳು ವಧುಗಳನ್ನು ಹುಡಿಕೊಡುವಂತೆ ಮಲೆ ಮಹದೇಶ್ವನಿಗೆ ಮೊರೆಯಿಡುತ್ತಿದ್ದಾರೆ.

30 ವರ್ಷ ದಾಟಿದರೂ ಮದುವೆ ಆಗದ ಹಿನ್ನೆಲೆಯಲ್ಲಿ ನೊಂದ ಈ ಬ್ರಹ್ಮಚಾರಿ ಯುವಕರು ದೇವರ ಮೊರೆ ಹೋಗುತ್ತಿದ್ದಾರೆ.  ಹೀಗಾಗಿ ಇಂದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಸ್ಯಾಂಡಲ್​ವುಡ್​ ನಟ, ನಿರ್ಮಾಪಕ ಡಾಲಿ ಧನಂಜಯ್​ ಈ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

ಬಹ್ಮಚಾರಿ ಯುವಕರ ಗುಂಪು ಸೇರಿಕೊಂಡು ‘ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ’ ಎಂಬ ಘೋಷ ವಾಕ್ಯದೊಂದಿಗೆ ಕಾಲ್ನಡಿಗೆ ಹೊರಟಿದ್ದಾರೆ. ಅವಿವಾಹಿತ ಯುವಕರ ಪಾದಯಾತ್ರೆಗೆ ನಟ, ನಿರ್ಮಾಪಕ ಡಾಲಿ ಧನಂಜಯ್ ಚಾಲನೆ ನೀಡಿದ ಬಳಿಕ  ಸ್ವಲ್ಪ ದೂರ ಪಾದಯಾತ್ರಿಗಳೊಂದಿಗೆ ಹೆಜ್ಜೆ ಹಾಕಿದ್ದಾರೆ.

ಜತೆಗೆ ಬ್ರಹ್ಮಚಾರಿಗಳು ಮುಂದಿನ ವರ್ಷದೊಳಗೆ ಮದುವೆ ಆಗಲಿ ಅಂತ ಡಾಲಿ ಶುಭ ಹಾರೈಸಿದ್ದಾರೆ. ಇನ್ನು ಟಗರು ಪಲ್ಯ ಚಿತ್ರದ ನಾಯಕ ನಟ ನಾಗಭೂಷಣ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ಇಂದು ಮಧ್ಯಾಹ್ನದವೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿ ಅನಿವಾಹಿತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಇವರೆಲ್ಲರೂ ಮಂಡ್ಯ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಅವಿವಾಹಿತ ಯುವಕರು. ವಯಸ್ಸೇನೋ 30 ದಾಟಿದೆ. ಆದ್ರೆ ವಧು ಸಿಗ್ತಿಲ್ಲ ಅನ್ನೋದು ಇವರ ಕೊರಗು. ಇದಕ್ಕೆಲ್ಲ ಪರಿಹಾರ ತೋರಿಸು ಮಾದಪ್ಪ ಅಂತಾ ಮಹದೇಶ್ವರನ ಬೆಟ್ಟಕ್ಕೆ ಹೊರಟಿದ್ದಾರೆ. ಹೀಗೆ ನೂರಕ್ಕೂ ಅಧಿಕ ಅವಿವಾಹಿತ ಯುವಕರು ಪಾದಯಾತ್ರೆ ಆರಂಭಿಸಿದ್ದು, ರೈತರ ಮಕ್ಕಳಿಗೂ ದೇವರು ಹೆಣ್ಣು ಕೊಡುವ ಬುದ್ಧಿ ಕೊಡಲಿ ಎಂದು ಪಾರ್ಥಿಸುತ್ತಿದ್ದಾರೆ.

ಇನ್ನು ಕೆ.ಎಂ.ದೊಡ್ಡಿ ಗ್ರಾಮದ ಅವಿವಾಹಿತರ ತಂಡ ಮೂರು ಷರತ್ತು ಹಾಕಿ ಪಾದಯಾತ್ರೆ ಆಯೋಜಿಸಿದ್ದು,  ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ ʼʼಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆʼʼ ಎಂಬ ಘೋಷ ವಾಕ್ಯದೊಂದಿಗೆ ಕಾಲ್ನಡಿಗೆ ಆಂರಭ ಮಾಡಿದ್ದಾರೆ.

ರೈತ ಯುವಕರಿಗೆ ಹೆಣ್ಣು ಸಿಗಲಿ: ಹೀಗೆ ಪಾದಯಾತ್ರೆ ಹೊರಟವರಲ್ಲಿ ಬಹುತೇಕ ಯುವರೈತರೇ ಹೆಚ್ಚು. ಎಷ್ಟೇ ಸಂಪಾದನೆ ಇದ್ರೂ ರೈತನಿಗೆ ಹೆಣ್ಣು ಕೊಡಲ್ಲ ಅನ್ನೋ ಮಾತು ಇಲ್ಲಿ ನಿಜವಾಗಿದೆ ಕೂಡಾ. ಹೀಗಾಗಿ ರೈತರಿಗೂ ಹೆಣ್ಣು ಕೊಡೋ ಮನಸ್ಸನ್ನು ಹೆಣ್ಣು ಹೆತ್ತವ ಮನೆಯವರಿಗೆ ಕೊಡಪ್ಪ ಮಾದಪ್ಪ ಅನ್ನೋ ಮೊರೆಯನ್ನೂ ಇವರೆಲ್ಲರೂ ಸೇರಿ ಇಡುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಭಾಗವಹಿಸಿಲು ಈ ಷರತ್ತು ಪಾಲಿಸಬೇಕು!: ಸದ್ಯ ಈ ಪಾದಯಾತ್ರೆಯಲ್ಲಿ ಅವಿವಾಹಿತ ಯುವಕರು ಮಾತ್ರ ಪಾಲ್ಗೊಂಡಿದ್ದಾರೆ. ವಿವಾಹಿತರು, ನಿಶ್ಚಿತಾರ್ಥ ಆದವರು, 30 ವರ್ಷ ಆಗದೇ ಇರೋರಿಗೆ ಈ ಪಾದಯಾತ್ರೆ ನಿರ್ಬಂಧಿಸಲಾಗಿದೆ. ಅದರ ಹೊರತಾಗಿಯೂ ನೂರಾರು ಯುವಕರು ಮೂರು ದಿನಗಳ ಪಾದಯಾತ್ರೆ ಮಾಡಿ ಕೆ.ಎಂ. ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟ ತಲುಪಲಿದ್ದಾರೆ. ದಾರಿ ಮಧ್ಯೆ ಈ ಅವಿವಾಹಿತ ಭಕ್ತರಿಗೆ ಊಟ, ವಸತಿ, ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಗಂಭೀರ ವಿಚಾರ: ಮದುವೆ ಆಗಿಲ್ಲ ಅಂತ ಪಾದಯಾತ್ರೆ ನಡೆಸುತ್ತಿರೋದನ್ನು ಕೇಳಿದ್ದು ಫಸ್ಟ್ ಟೈಮ್. ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಗಳಲ್ಲಿ ಪಾದಯಾತ್ರೆ ವಿಚಾರ ನೋಡಿದಾಗ ತಮಾಷೆ ಅನಿಸ್ತು. ಇಲ್ಲಿ ಬಂದಾಗಲೂ ತಮಾಷೆ ಅನಿಸ್ತು ಎಂದು ಅವಿವಾಹಿತರ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಮಂಡ್ಯದ ಕೆ.ಎಂ.ದೊಡ್ಡಿಯಲ್ಲಿ ನಟ ಡಾಲಿ ಧನಂಜಯ್ ತಿಳಿಸಿದ್ದಾರೆ.

ಪಾದಯಾತ್ರೆ ಯಾಕೆ ಹೊಟಿದ್ದೀರಿ ಅಂತ ಕೇಳಿದಾಗ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಅಂದ್ರು. ಇದು ನಿಜಕ್ಕೂ ಗಂಭೀರವಾದ ವಿಚಾರ. ನಾನು ಹಳ್ಳಿಯಿಂದಲೇ ಬಂದಿರೋದು. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನು ಮಾತನಾಡಿಸಿದಾಗ ಹೆಣ್ಣು ಸಿಕ್ತಿಲ್ಲ ಅಂತ ಹೇಳ್ತಾರೆ. ಇತ್ತೀಚೆಗೆ ಆದಿಚುಂಚನಗಿರಿಯಲ್ಲಿ ವಧು-ವರರ ನೋಂದಣಿಯಲ್ಲಿ ಪಾಲ್ಗೊಂಡಿದ್ದ ಯುವಕರ ಸಂಖ್ಯೆ ನೋಡಿದ್ರೆ ಲಿಂಗಾನುಪಾತ ಗೊತ್ತಾಗುತ್ತೆ.

ಒಟ್ಟಿನಲ್ಲಿ ಬ್ಯಾಚುಲರ್ ಲೈಫ್​ನಿಂದ ಮುಕ್ತಿ ಕೊಡಪ್ಪ ಅಂತಾ ಮಾದಪ್ಪನ ಮೊರೆ ಹೋಗಿರುವ ಅವಿವಾಹಿತರಿಗೆ ಶೀಘ್ರವೇ ಕಂಕಣ ಭಾಗ್ಯ ಕೂಡಿ ಬರಲಿ ಅನ್ನೋ ಹಾರೈಕೆ ನಮ್ಮದು. ಇದಕ್ಕೆ ಗುರುಹಿರಿಯರು ತಥಾಸ್ತು ಅನ್ನುತ್ತಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...