ನ್ಯೂಡೆಲ್ಲಿ: ಮಹಿಳೆಯರು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಈ ನಡುವೆ ಅವರಿಗೆ ಮಾತೃತ್ವದ ಸಮಯದಲ್ಲಿ ರಜೆ ಕೊಡುವುದಕ್ಕೆ ಹಲವಾರು ತೊಡಕುಗಳು ಎದುರಾಗುತ್ತವೆ. 2 ಮಕ್ಕಳವರಗೆ ಮಾತ್ರ ಮಾತೃತ್ವ ರಜೆ ತೆಗೆದುಕೊಳ್ಳಲು ಅವಕಾಶವಷ್ಟೆ ಎಂದು ಹೇಳುವುದು.
ಇನ್ನು ಬೇರೆ ಬೇರೆ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಇಲಾಖೆಗಳಲ್ಲೇ ಒಂದೊಂದು ನಿಯಮವನ್ನು ಮಾಡಿಕೊಳ್ಳಲಾಗಿದೆ. ಇದೆಲ್ಲವನ್ನು ಮೀರಿ 2025ರ ಮೇ 23ರಂದು ಸುಪ್ರೀ ಕೋರ್ಟ್ ಈ ಮಾತೃತ್ವ ರಜೆಯನ್ನು ಮೂರನೇ ಮಗುವಿಗೂ ತೆಗೆದುಕೊಳ್ಳಬಹುದು ಎಂದು ಮಹತ್ವದ ಆದೇಶ ನೀಡಿದೆ.
ಹೌದು! ಮಾತೃತ್ವದ ರಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. ಆದ್ದರಿಂದ 3ನೇ ಮಗುವಿಗೂ ಅದನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡುವ ಮೂಲಕ ಸ್ತ್ರೀಯರ ಗೌರವಕ್ಕೆ ಕುಂದು ಬರುವ ರೀತಿ ನಡೆದುಕೊಳ್ಳವವರಿಗೆ ನೀತಿಪಾಠ ಕಲಿಸಿದೆ.
ತಮಿಳುನಾಡಿನಲ್ಲಿ ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ 2 ಮಕ್ಕಳಿಗೆ ಮಾತ್ರ ಮಾತೃತ್ವದ ರಜೆ ನೀಡಲಾಗುತ್ತದೆ. ಇದರ ಆಧಾರದಲ್ಲಿ, ಸರ್ಕಾರಿ ಶಿಕ್ಷಕಿಯೊಬ್ಬರಿಗೆ 3ನೇ ಮಗುವಿಗೆ ಮಾತೃತ್ವ ರಜೆ ನೀಡಬೇಕು ಎಂದು ಆದೇಶಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಅದರ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಶಿಕ್ಷಕಿಯ 3ನೇ ಮಗು 2ನೇ ಮದುವೆಯಿಂದ ಆಗಿರುವುದನ್ನು ಗಮನಿಸಿರುವ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, ‘ಮಹಿಳೆಯರ ಸಂತಾನೋತ್ಪತ್ತಿ ಆಯ್ಕೆಯಲ್ಲಿ ರಾಜ್ಯದ ಅನಗತ್ಯ ಹಸ್ತಕ್ಷೇಪ ಇರಬಾರದು. ಅವರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಇದರಿಂದ ಅಡ್ಡಿಯಾಗುವುದರಿಂದ ಮಹಿಳೆಯರ ಘನತೆಗೆ ಹಾನಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಈಗ ಮಹಿಳೆಯರು ಉದ್ಯೋಗ ಕ್ಷೇತ್ರದ ಗಣನೀಯ ಭಾಗವಾಗಿದ್ದಾರೆ. ಅವರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು. ಸ್ತ್ರೀಯರಿಗೆ ಸಾಮಾಜಿಕ ನ್ಯಾಯ ಒದಗಿಸಲು, ಹೆರಿಗೆ ಸಮಯದಲ್ಲಿ ಕುಂದಿದ ಶಕ್ತಿಯನ್ನು ಮರುಪೂರಣಗೊಳಿಸಲು, ಮಗುವಿನ ಪಾಲನೆ ಮಾಡಲು, ಕೆಲಸದ ವಿಷಯದಲ್ಲಿ ತಮ್ಮ ದಕ್ಷತೆಯನ್ನು ಹಿಂದಿನಂತೆ ಕಾಯ್ದುಕೊಳ್ಳಲು ಅನುವು ಮಾಡಿಕೊಡಲು ಮಾತೃತ್ವ ರಜೆ ನೀಡಲಾಗುತ್ತದೆ ಎಂದು ಹೇಳಿದೆ.

Related


You Might Also Like
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...
ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ ಅಧಿಕೃತವಾಗಿ ಆಹ್ವಾನಿಸಿದ ಜಿಲ್ಲಾ ಉಸ್ತುವಾರಿ ಸಚಿವ HCM
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅಧಿಕೃತವಾಗಿ ಆಹ್ವಾನಿಸಿದರು. ಇದೇ ಸೆ.22 ರಂದು ಪ್ರಾರಂಭವಾಗಲಿರುವ...
ಮೊಸಳೆಹೊಸಳ್ಳಿ ದುರಂತ: ಮೃತರ ಮನೆಗಳಿಗೆ ವ್ಹೀಲ್ ಚೇರ್ನಲ್ಲೇ ತೆರಳಿ ಸಾಂತ್ವನ ಹೇಳಿದ ಮಾಜಿ ಪ್ರಧಾನಿ ಎಚ್ಡಿಡಿ
ಹಾಸನ: ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಮೊನ್ನೆ ನಡೆದ ಅಪಘಾತ ಪ್ರಕರಣ ನಿಜಕ್ಕೂ ಘನಘೋರ. ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಂದನ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಮೂಲಕ...
ಸಾಲಬಾಧೆ-ಗಂಡ, ಇಬ್ಬರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆಗೆ ಯತ್ನ ಮೂವರು ಮೃತ: ಸಾವು ಬದುಕಿನ ನಡುವೆ ತಾಯಿ ಸೆಣಸಾಟ
ಹೊಸಕೋಟೆ: ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಗೊಣಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಗಂಡ, ಇಬ್ಬರು ಮಕ್ಕಳನ್ನು...
KSRTC ಹಾಸನ: ಸತ್ಯ ಮರೆಮಾಚಿದ ತನಿಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾದ ಡಿಸಿ
ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ವಿಭಾಗದ ತನಿಖಾ ಸಿಬ್ಬಂದಿ ಸತ್ಯ ಮರೆಮಾಚಲು ಬಾಡಿ ಕ್ಯಾಮರಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೊಂದು ಸಮಯದಲ್ಲಿ ಹ್ಯಾಂಗ್...
KSRTC ಹಾಸನ: ತನಿಖಾಧಿಕಾರಿಗಳ ಬಾಡಿ ಕ್ಯಾಮೆರಾದ ವಿಡಿಯೋ ರೆಕಾರ್ಡಿಂಗ್ ಕೊಡಲು ವಿಫಲ- ಆರೋಪ ಪತ್ರ ಜಾರಿ ಮಾಡಿದ ಡಿಸಿ
ಹಾಸನ: ಸಾರಿಗೆ ಸಂಸ್ಥೆಯ ಮಾರ್ಗ ತನಿಖಾಧಿಕಾರಿಗಳು ಬಾಡಿ ಕ್ಯಾಮೆರಾವನ್ನು ಹಾಕಿಕೊಂಡು ತನಿಖೆ ಮಾಡದ ಪರಿಣಾಮ ಮಾಹಿತಿ ಆಯೋಗದಲ್ಲಿ ಪ್ರಕರಣ ದಾಖಲು ಮಾಡಿದ ನೌಕರನಿಗೆ ವಿಡಿಯೋ ರೆಕಾರ್ಡಿಂಗ್ ಕೊಡಲು...
ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ
ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ...
KRSTC: ಅನ್ಯಮಾರ್ಗದಲ್ಲಿ ಹೋಗಲು ಮಹಿಳಾ ಕಂಡಕ್ಟರನ್ನು ರಾತ್ರಿ ಅರ್ಧದಲ್ಲೇ ಇಳಿಸಿಹೋದ ಸಹೋದ್ಯೋಗಿಗಳು…!
ಸಾರಿಗೆ ಚಾಲನಾ ಸಿಬ್ಬಂದಿಗಳಲ್ಲಿ ಒಬ್ಬರಿಗೊಬ್ಬರು ಆಗುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಹುತೇಕ ಎಲ್ಲ ಚಾಲನಾ ಸಿಬ್ಬಂದಿಗಳಲ್ಲಿ...
ಸೆ.22ರಿಂದ ಅ.7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಇದೇ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ...