ಮೈಸೂರು: ಬಸವ ಚರಿತ್ರೆ ಎಂಬುದು ಪ್ರಜಾಪ್ರಭುತ್ವ ಸ್ಥಾಪನೆಯ ಹೋರಾಟವಾಗಿದೆ. ಬುದ್ಧ ತನ್ನ ಬಿಕ್ಕುಗಳ ಮುಖಾಂತರ ಪ್ರಜಾಪ್ರಭುತ್ವದ ಬೀಜ ಬಿತ್ತಿದರು. ಆ ಬೀಜವು ಬಸವಣ್ಣನವರ ಮೂಲಕ ಅನುಭವ ಮಂಟಪದ ರೂಪತಾಳಿ ಮೊಳಕೆ ಹೊಡೆಯಿತು. ಹೀಗೆ ಬಿತ್ತಿ ಮೊಳಕೆಯೊಡೆದ ಬೀಜವು ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಖಾಂತರ ಮರವಾಗಿ ಬೆಳೆಯಿತು. ಆ ಮರದಲ್ಲಿ ಬೆಳೆದ ಫಲವನ್ನು ನಾವೆಲ್ಲರೂ ಇಂದು ಅನುಭವಿಸುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಇಂದು ನಗರದ ಕಲಾಮಂದಿರದಲ್ಲಿ ಬಸವ ಬಳಗಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ “ಬಸವ ಜಯಂತಿ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದರ ಮೂಲ ಉದ್ದೇಶ ಜನರು ತಮಗೆ ಬೇಕಾದಂತೆ ಬದುಕನ್ನು ಬದುಕಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಜನಪರ ಯೋಜನೆ ಜಾರಿ ಮಾಡಿ ಸಮಸಮಾಜದ ನಿರ್ಮಾಣದ ಕಡೆಗೆ ನಾವು ಸಾಗಬೇಕಿದೆ. ನಮ್ಮ ದೇಶದ ಸಾಮಾಜಿಕ ಅಸಮಾನತೆ, ವರ್ಣಾಶ್ರಮದ ನೀತಿಗಳು, ಲಿಂಗತಾರತಮ್ಯ, ಜಾತೀಯತೆ ಮತ್ತು ಅಸ್ಪೃಶ್ಯತೆ ಇಡೀ ಮಾನವ ಕುಲಕ್ಕೆ ಅಂಟಿದ ಕಳಂಕವಾಗಿದೆ. ಈ ಎಲ್ಲಾ ತಾರತಮ್ಯಗಳ ವಿರುದ್ದವಾಗಿ ಬಸವಣ್ಣನವರು ತಮ್ಮ ಪ್ರಬಲವಾದ ಹೋರಾಟ ಮತ್ತು ನಿಲುವುಗಳ ಮೂಲಕ ನಿರ್ಮೂಲನೆ ಕಾರ್ಯಕ್ಕೆ ಮುಂದಾದರು ಎಂದರು.
ಬಸವಣ್ಣ ‘ದಯೆ ಇಲ್ಲದ ಧರ್ಮ ಯಾಕೆ’ ಎಂದು ಪ್ರಶ್ನಿಸಿದ್ದಾರೆ. ಕೆಲವು ವರ್ಗದ ಜನರನ್ನು ದೇವಸ್ಥಾನಗಳ ಪ್ರವೇಶಕ್ಕೆ ನಿರಾಕರಿಸಿದಾಗ ಬಸವಣ್ಣನವರು ‘ನನ್ನ ದೇಹವೆ ದೇಗುಲ’ ಎಂಬ ಸಂದೇಶದ ಮೂಲಕ ದೇವರ ಪರಿಕಲ್ಪನೆಯನ್ನು ಜಗದಲಕ್ಕೆ ಹಾಗೂ ಆಕಾಶದೆತ್ತರಕ್ಕೆ ವಿಸ್ತಿರಿಸಿದರು. ಈ ಬಗೆಯ ಉದಾತ್ತ ಕಲ್ಪನೆ ಹೊಂದಿರುವ ಬಸವ ತತ್ವದ ಅನುಯಾಯಿಗಳು ಅವರನ್ನು ಹೊಗಳುತ್ತ ಕೂರಬಾರದು ಎಂದು ಕಿವಿಮಾತು ಹೇಳಿದರು.
ಬಸವಣ್ಣನವರನ್ನು ನಮ್ಮ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ನಾವು ಸಾಂಸ್ಕೃತಿಕವಾಗಿ ಬಲಾಢ್ಯರಾಗದಿದ್ದರೆ ಬಲಿಷ್ಠವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಬಿಜ್ಜಳನ ಆಸ್ಥಾನದಲ್ಲಿ ಒಂದು ಭಾಗದ ನಿಧಿಯನ್ನು ಕೊಡುವುದಾಗಿ ಹೇಳಿದಾಗ, ಅರ್ಥ ಸಚಿವರಾಗಿ ಬಸವಣ್ಣ ಅದನ್ನು ನಿರಾಕರಿಸಿದ್ದರು. ಅದು ಸುಖೀರಾಜ್ಯದ ನಿರ್ಮಾಣಕ್ಕಾಗಿ ಮೀಸಲಿಡಬೇಕು ಎಂದಿದ್ದರು ಎಂದು ವಿವರಿಸಿದರು.
ಇನ್ನು ಇಂದು ಧರ್ಮ, ಜಾತಿ ಹೆಸರಿನಲ್ಲಿ ಜನರನ್ನು ವಿಂಗಡಿಸಲಾಗುತ್ತಿದೆ. ಸಮುದಾಯದ ಸಾಮರಸ್ಯವನ್ನು ಹಾಳು ಮಾಡಲಾಗುತ್ತಿದೆ. ಲಿಂಗತಾರತಮ್ಯ, ಮಹಿಳಾ ದೌರ್ಜನ್ಯ ಹಾಗೂ ಅಸ್ಪೃಶ್ಯತೆ ಆಚರಣೆಗಳು ಮನುಕುಲವನ್ನು ಅದೋಗತಿಗೆ ತಲುಪಿಸುತ್ತಿವೆ. ಇವೆಲ್ಲವನ್ನು ಪುನರುಜ್ಜೀವನಗೊಳಿಸಿ ಸಮಸಮಾಜ ನಿರ್ಮಾಣ ಮಾಡಲು ಅಗತ್ಯವಿರುವುದು ಬಸವಣ್ಣನ ನಿಲುವುಗಳು. ಆ ಮೂಲಕ ಸುಖೀರಾಜ್ಯದ ಸ್ಥಾಪನೆಯಾಗಲಿದೆ ಎಂದರು.
ಬುದ್ದ, ಬಸವ, ಅಂಬೇಡ್ಕರ್ ಎಂದರೆ ಆಚರಣೆಗಷ್ಟೇ ಸೀಮಿತವಲ್ಲ. ಇವರೆಲ್ಲರೂ ಬಹುದೊಡ್ಡ ಪ್ರಜಾಪ್ರಭುತ್ವವಾದಿಗಳು, ವಿಶ್ವಮಾನ್ಯತೆ ಗಳಿಸಿರುವ ಸಮಾಜ ಸುಧಾರಕರು. ವಿದೇಶದಲ್ಲಿ ನಾವು ಬುದ್ದನ ನಾಡಿನವರು ಎನ್ನುತ್ತೇವೆ. ಈ ಪರಂಪರೆಯಲ್ಲಿ ನಡೆದು ಬಂದಿರುವ ನಾವು ಈ ಮಹನೀಯರ ವಿಚಾರಗಳು ನಮ್ಮ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನಕ್ಕೆ ಪ್ರೇರಣಾಶಕ್ತಿಯಾಗಬೇಕಿದೆ. ಈ ಮುಖೇನ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೌರಾಡಳಿತ ಸಚಿವ ರಹೀಂಖಾನ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಡಿ.ರವಿಶಂಕರ್, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಶ್ರೀವತ್ಸ, ಎಚ್.ಎಂ.ಗಣೇಶ್ ಪ್ರಸಾದ್, ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ ಅವರು ಸೇರಿದಂತೆ ಬಸವ ಬಳಗದ ಮುಖಂಡರು ಉಪಸ್ಥಿತರಿದ್ದರು.
Related

You Might Also Like
ಹಾಳಾಗಿರುವ ಒಳಚರಂಡಿ ಸ್ಲ್ಯಾಬ್ ಬದಲಾಯಿಸಿ: ಅಧಿಕಾರಿಗಳಿಗೆ ಸ್ನೇಹಲ್ ತಾಕೀತು
ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯಲ್ಲಿ ಹಾಳಾಗಿರುವ ಒಳಚರಂಡಿ ಮೇಲ್ಭಾಗದ ಕವರ್ ಸ್ಲ್ಯಾಬ್ ಬದಲಾಯಿಸಲು ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಜಲಮಡಂಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪೂರ್ವ ವಲಯ...
ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ: ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಸಲಹೆ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ...
ಗ್ರಾಪಂ- ಮನೆ ಬಾಗಿಲಿಗೆ ಇ-ಸ್ವತ್ತು ಖಾತೆ ವಿತರಣೆ: ಜಿಪಂ ಸಿಇಒ ಡಾ.ಅನುರಾಧ
ಪಂಚಾಯತ್ ರಾಜ್ ಇಲಾಖೆಯಿಂದ ಮಹತ್ವಕಾಂಕ್ಷಿ ಕಾರ್ಯಕ್ರಮ ಗ್ರಾಮಠಾಣಾ ವ್ಯಾಪ್ತಿಯ ಮನೆ ಬಾಗಿಲಿಗೇ ಈ ಸ್ವತ್ತು ಖಾತೆ ನೀಡುವ ಯೋಜನೆ ಆರಂಭ ಬೆಂಗಳೂರು ಗ್ರಾಮಾಂತರ: ಪಂಚಾಯತ್ ರಾಜ್ ಮತ್ತು...
ರೈತರಿಗಾಗಿ ಜಿಲ್ಲಾ ಮಟ್ಟದ ಮಾವು- ಹಲಸು ಮೇಳ: ಸಚಿವ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ...
ಖಾಸಗಿ ಕಂಪನಿಯ ಮುಖ್ಯ ಕಾನೂನು ಸಲಹೆಗಾರರಾಗಿ ನೇಮಕಗೊಂಡ ವಕೀಲ ಶಿವರಾಜುರಿಗೆ ಅಭಿನಂದನೆಗಳು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಹಲವು ನೌಕರರು ಸೇರಿದಂತೆ ಇತರರಿಗೆ ಉಚಿತವಾಗಿ ಕಾನೂನು ಸೇವೆ ನೀಡಿದ ಫಲವಾಗಿ ವಕೀಲರಾದ ಎಚ್.ಬಿ.ಶಿವರಾಜು ಅವರಿಗೆ ಕೈ...
KSRTC ನೂತನ ಎಂಡಿ ಅಕ್ರಮ್ ಪಾಷಗೆ ಸ್ವಾಗತ ಕೋರಿದ ನಿಗಮದ ಪ್ರಭಾರ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಅಕ್ರಮ್ ಪಾಷ ಇಂದು ಅಧಿಕಾರ ಸ್ವೀಕರಿಸಿದರು. ನಿಗಮದ ಪ್ರಭಾರ ಎಂಡಿಯಾಗಿದ್ದ ಬಿಎಂಟಿಸಿ...
ಟೇಕಾಫ್ ಆದ ಕೆಲವೇ ಕ್ಷಣದ ಏರ್ ಇಂಡಿಯಾ ವಿಮಾನ ಪತನ: ಇಬ್ಬರು ಸೇಫ್
ಅಹಮದಾಬಾದ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡ ಘಟನೆಗೆ ಸಂಬಂಧಿಸಿದಂತೆ 240 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ...
KSRTC ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ರಮ್ ಪಾಷ ನೇಮಕ: ಸರ್ಕಾರ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಕ್ರಂಪಾಷಾ ಅವರನ್ನು ನೇಮಿಸಿ ಸರ್ಕಾರ ಗುರುವಾರ (ಜೂ.12) ಆದೇಶ ಹೊರಡಿಸಿದೆ. ಇದೇ ಜೂನ್ 2ರ ಸೋಮವಾರ...
NWKRTC: ವರುಣನ ಅಬ್ಬರಕ್ಕೆ ಕಾರವಾರದ ಬಸ್ ಡಿಪೋ ಜಲಾವೃತ- ಮಳೆ ನೀರಿನಲ್ಲೇ ನಿಂತು ಹೆರಿಗೆ ಮಾಡಿಸಿದ ವೈದ್ಯರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಧಾರಾಕರ ಮಳೆಯಾಗುತ್ತಿದ್ದು, ಈ ಮಳೆಗೆ ವಾಯುವ್ಯ ರಸ್ತೆ ಸಾರಿಗೆ ನಿಮಗದ ಘಟಕ ಸಂಪೂರ್ಣ ಜಲಾವೃತವಾಗಿದ್ದು, ಬಸ್ಗಳನ್ನು ತೆಗೆಯುವುದಕ್ಕೂ ಸಿಬ್ಬಂದಿ ಪರದಾಡಿತ...