NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಸಂಸ್ಥೆಯ ನೌಕರರ ಬಾಳು ಹಸನು ಮಾಡಲು ಸಂಘಟನೆಗಳ ನಾಯಕರು ಒಗ್ಗಟ್ಟಾಗಿ: ಜೀವನ್ ಮಾರ್ಟಿಸ್ ಮನವಿ

ನಮ್ಮ ರಾಜ್ಯದ ಸಾರಿಗೆ ನೌಕರರು ಹಗಲಿರುಳು ಶ್ರಮಿಸುತ್ತಾ, ವಿಶ್ವ ದಾಖಲೆ ಎನ್ನಬಹುದಾದ ನೂರಾರು ಪ್ರಶಸ್ತಿಗಳನ್ನು ಸಂಸ್ಥೆಗೆ ತಂದುಕೊಟ್ಟಿದ್ದಾರೆ. ಇಷ್ಟಿದ್ದರೂ ಸಹ, ಇತರ ನಿಗಮ ಮಂಡಳಿಗಳಿಗೆ ಹೋಲಿಸಿದರೆ ನಮ್ಮ ವೇತನ ಶ್ರೇಣಿ ಬಹಳ ಕಡಿಮೆ ಇರುವುದು ನಮಗೆಲ್ಲ ತಿಳಿದಿರುವ ಬೇಸರದ ಸಂಗತಿ.

ವಿಜಯಪಥ ಸಮಗ್ರ ಸುದ್ದಿ

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಭಿವೃದ್ಧಿ ಹಾಗೂ ನೌಕರರ ಹಿತದೃಷ್ಟಿಯಿಂದ ಎಲ್ಲ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ರೂಪಿಸಬೇಕು ಎಂದು KSRTC ನೌಕರರ ಕೂಟದ ಪುತ್ತೂರು ವಿಭಾಗದ ಅಧ್ಯಕ್ಷ ಜೀವನ್ ಮಾರ್ಟಿಸ್ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ಸಾರಿಗೆ ಸಂಸ್ಥೆಯ ಒಬ್ಬ ನೌಕರನಾಗಿ, ನಮ್ಮೆಲ್ಲಾ ನಾಯಕರ ಮೇಲೆ ಅಪಾರ ಗೌರವವನ್ನಿಟ್ಟು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ.

ನಮ್ಮ ರಾಜ್ಯದ ಸಾರಿಗೆ ನೌಕರರು ಹಗಲಿರುಳು ಶ್ರಮಿಸುತ್ತಾ, ವಿಶ್ವ ದಾಖಲೆ ಎನ್ನಬಹುದಾದ ನೂರಾರು ಪ್ರಶಸ್ತಿಗಳನ್ನು ಸಂಸ್ಥೆಗೆ ತಂದುಕೊಟ್ಟಿದ್ದಾರೆ. ಇಷ್ಟಿದ್ದರೂ ಸಹ, ಇತರ ನಿಗಮ ಮಂಡಳಿಗಳಿಗೆ ಹೋಲಿಸಿದರೆ ನಮ್ಮ ವೇತನ ಶ್ರೇಣಿ ಬಹಳ ಕಡಿಮೆ ಇರುವುದು ನಮಗೆಲ್ಲ ತಿಳಿದಿರುವ ಬೇಸರದ ಸಂಗತಿ.

ಇನ್ನು ‘ಶಕ್ತಿ’ ಯೋಜನೆಯಂತಹ ಸವಾಲುಗಳ ನಡುವೆಯೂ ನಾವು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರೂ, ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಸೂಕ್ತ ಕಾಳಜಿ ವ್ಯಕ್ತವಾಗುತ್ತಿಲ್ಲ ಎಂಬ ನೋವು ಅಸಮಾಧಾನವೂ ನಮಗಿದೆ.

ಈ ಸಂದರ್ಭದಲ್ಲಿ ನನಗೆ ಅನ್ನಿಸುವುದೆಂದರೆ?: ನಮ್ಮ ಸಂಘಟನೆಗಳ ನಡುವೆ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೇ ಸರ್ಕಾರ ಅಥವಾ ಮ್ಯಾನೇಜ್‌ಮೆಂಟ್ ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಲು ಪ್ರಮುಖ ಕಾರಣವಾಗುತ್ತಿದೆ. ಹೋರಾಟ ಅಥವಾ ಮುಷ್ಕರಗಳ ಯಶಸ್ಸಿಗಾಗಿ ಎಲ್ಲ ಸಂಘಟನೆಗಳ ನಾಯಕರು ಒಂದೇ ವೇದಿಕೆಯಲ್ಲಿ ನಿಂತು ನೌಕರರಿಗೆ ಧೈರ್ಯ ತುಂಬಬೇಕು.

ನಾಯಕರ ನಡುವೆ ಒಮ್ಮತವಿದ್ದಾಗ ಮಾತ್ರ ಸಾಮಾನ್ಯ ನೌಕರರಲ್ಲಿ ಇರುವ ಗೊಂದಲಗಳು ಮತ್ತು ಅನುಮಾನಗಳು ದೂರವಾಗಲು ಸಾಧ್ಯ. ಎಲ್ಲ ನಾಯಕರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ, ಸಾರಿಗೆ ನೌಕರರ ಉದ್ಧಾರಕ್ಕಾಗಿ ನಾವು ಒಂದಾಗಿದ್ದೇವೆ ಎಂಬ ಸಂದೇಶವನ್ನು ಸರ್ಕಾರ ಹಾಗೂ ಆಡಳಿತ ಮಂಡಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸಬೇಕಿದೆ.

ಆದ್ದರಿಂದ, ಎಲ್ಲ ಸಂಘಟನೆ ಮುಖಂಡರು ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು, ನೌಕರರ ಬಾಳನ್ನು ಹಸನು ಮಾಡಲು ಮತ್ತು ಸಂಸ್ಥೆಯನ್ನು ಉಳಿಸಲು ತಾವೆಲ್ಲರೂ ಒಂದಾಗಿ ಹೋರಾಡಬೇಕೆಂದು ಅತ್ಯಂತ ವಿನಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ? KKRTC ನೌಕರರ 14 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಆದೇಶ ಯಾವುದೇ ಸಮಯದಲ್ಲಾದರೂ  ಹೊರಬೀಳಬಹುದು ಜೀವನದಲ್ಲಿ ದಿನಂಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ಡಿಸಿ ಡಾ. ಅನುರಾಧ ಕರೆ ಕೆರೆಗೆ ವೈದ್ಯಕೀಯ ತ್ಯಾಜ್ಯ ಹಾಕಿದ ಆರೋಪ: ಡಾಕ್ಟರ್ ವಿರುದ್ಧ ಎಫ್‌ಐಆರ್ ದಾಖಲು ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್‌ ಬೃಹತ್‌ ಪಾದಯಾತ್ರೆ- ಇದು ಕೇವಲ ಭಾಷಣಕ್ಕಷ್ಟೇ ಅಲ್ಲ: ನಿಖಿಲ್ ಕುಮಾರಸ್ವಾಮಿ ಎಚ್... ನಿಂತಿರುವ ಕಾಲೇಜು ವಿದ್ಯಾರ್ಥಿ ಚುನಾವಣೆ ಇದೇ ವರ್ಷದಿಂದ ಮತ್ತೆ ಆರಂಭ: ಸಿಎಂ ಡಿಕೆಶಿ ಅಪ್ಪ ಅಂದ್ರೆ ಭಯ- ಧೈರ್ಯ ಅಪ್ಪ ಅಂದ್ರೆ ಭವಿಷ್ಯದ ಗುರು ಅಪ್ಪ ಅಂದ್ರೆ ಆಲದ ಮರ ಇದಾವುದು ಅಲ್ಲ ಪದಗಳಿಗೆ ನಿಲುಕದ ದೈವ ಗ್ರಾಚ್ಯುಟಿ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸಲ್ಲ