Breaking NewsNEWSನಮ್ಮಜಿಲ್ಲೆನಮ್ಮರಾಜ್ಯ

ಇಂದು ಬಿಎಂಟಿಸಿ ವಜಾಗೊಂಡ ನೌಕರರ ಮರು ನೇಮಕಕ್ಕೆ ಸಭೆ – ಒಂದಾದ ಮೇಲೆ ಒಂದರಂತೆ ಮೂರು ಸುತ್ತಿನ ಸಭೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ 2021ರ ಏಪ್ರಿಲ್‌ 7 ರಿಂದ 21ರವರೆಗೆ ಸಂಸ್ಥೆಯ ವಿರುದ್ಧ ನೌಕರರು ಕೈಗೊಂಡ ಮುಷ್ಕರದಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಂಡಿರುವ ನೌಕರರ ಮರು ನೇಮಕಕ್ಕೆ ಇಂದು ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ವಜಾಗೊಂಡ ನೌಕರರ ಎದುರಿನಲ್ಲೇ ಇಂದು (ಸೋಮವಾರ ಡಿ.19) ನಡೆಯುತ್ತಿದೆ.

ಬೆಳಗ್ಗೆಯಿಂದ ಈವರೆಗೆ ಎರಡು ಸುತ್ತಿನ ಮಾತುಕತೆ ನಡೆದಿದ್ದು ವಜಾಗೊಂಡ ನೌಕರರ ಸಮ್ಮುಖದಲ್ಲೇ ಸಭೆ ನೆಯುತ್ತಿದ್ದು ಅವರು ಸಭೆಯಲ್ಲಿ ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ನಿಗಮದ ಅಧಿಕಾರಿಗಳು ಮತ್ತು ಅಧ್ಯಕ್ಷ, ಉಪಾಧ್ಯಕ್ಷರು ಬಹುತೇಕ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಕೊನೆಯ ಸುತ್ತಿನ ಮಾತುಕತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಜತೆ ಈಗತಾನೆ ಆರಂಭವಾಗಿದ್ದು ಈ ವೇಳೆ ಯಾವ ನಿರ್ಧಾರಕ್ಕೆ ನಿಗಮ ಮಂಡಳಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹೀಗಾಗಿ ಇನ್ನು ಕೆಲವೇ ನಿಮಿಷಗಳಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದ್ದು ಆ ಬಳಿಕ ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ಷರತ್ತು ವಿಧಿಸಲಾಗಿದೆಯೇ ಇಲ್ಲ ಬೇಷರತ್‌ ಆಗಿ ಮರು ನೇಮಕ ಮಾಡಿಕೊಳ್ಳಲು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬುವುದು ತಿಳಿಯಲಿದೆ.

ಈ ಹಿಂದೆ ಮರು ನೇಮಕಗೊಂಡಾಗ ಇದ್ದ ಷರತ್ತು ಏನು?: 1) ಹಿಂದಿನ ಸೇವೆಯನ್ನು ಯಾವುದೇ ಉದ್ದೇಶಕ್ಕಾಗಿ ಪರಿಗಣಿಸದೇ ಹೊಸದಾಗಿ(AFRESH) ತರಬೇತಿ/ ಪರೀಕ್ಷಾರ್ಥಿ ಸೇವೆ ಮೇಲೆ ಮನರ್ ನೇಮಕ ಮಾಡಿಕೊಳ್ಳುವುದು. 2) ಮುಂದೆ ಯಾವುದೇ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಇತರರನ್ನು ಪ್ರಚೋದಿಸುವುದಿಲ್ಲ ಹಾಗೂ ಮುಷ್ಕರದ ಅವಧಿಯಲ್ಲ ಗೈರು ಹಾರಿಯಾಗುವುದಿಲ್ಲವೆಂದು ನೌಕರರು ಮುಚ್ಚಳಿಕೆ ಸಲ್ಲಿಸುವುದು.

ಕಾಯಂ ನೌಕರರು: 3) ವಜಾಗೊಂಡ ದಿನಾಂಕದಿಂದ ಮರು ನೇಮಕಗೊಳ್ಳುವ ದಿನಾಂಕದವರೆಗೆ ಯಾವುದೇ ಹಿಂಬಾಕಿ ವೇತನ, ನಿರಂತರ ಸೇವೆ, ತತ್ಪಲಿತ ಸೇವಾ ಸೌಲಭ್ಯ ರಹಿತವಾಗಿ ಮರು ನೇಮಕ ಮಾಡುವುದು.

4) ಮೂಲ ವೇತನದಲ್ಲಿ ಎರಡು ವೇತನ ಬಡ್ತಿಗಳನ್ನು ಸಂಚಿತವಾಗಿ ಇಳಸುವುದು ಹಾಗೂ ನೌಕರರು ನಿವೃತ್ತಿವರೆಗೂ ಮುಂಬಡ್ತಿಗೆ ಅರ್ಹರಿರುವುದಿಲ್ಲ.

5) ಮುಂದೆ, ಯಾವುದೇ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಇತರರನ್ನು ಪ್ರಚೋದಿಸುವುದಿಲ್ಲ ಹಾಗೂ ಮುಷ್ಕರದ ಅವಧಿಯಲ್ಲಿ ಗೈರು ಹಾಜರಿಯಾಗುವುದಿಲ್ಲ ಎಂದು ನೌಕರರು ಮುಚ್ಚಳಕೆ ಸಲ್ಲಸುವುದು ಇಂದು ಜಂಟಿ ಮೆಮೋದಲ್ಲಿ ಇದ್ದ ಅಂಶ.

ಬಳಿಕ ಸಂಸ್ಥೆಯೂ ಮಾಡಿದ ಮಾರ್ಪಾಡು ಏನು?: ಬೆಂ.ಮ.ಸಾ.ಸಂಸ್ಥೆಯು ಆಗಸ್ಟ್‌ 15 -1997 ರಂದು ಸ್ಥಾಪನೆಗೊಂಡಿದ್ದು ಇದೇ ಆ. 15-2022 ರಂದು ಅಂದರೆ ಸ್ವಾತಂತ್ರ್ಯ ದಿನದಂದು 25 ವರ್ಷ ಪೂರ್ಣಗೊಳಿಸಿರುತ್ತದೆ. ಈ ರಜತ ಮಹೋತ್ಸವದ ಹಿನ್ನೆಲೆಯಲ್ಲ, ಮುಷ್ಕರದಲ್ಲಿ ಸೇವೆಯಿಂದ ತೆಗೆದು ಹಾಕಲ್ಪಟ್ಟು ನಂತರ ಮರು ನೇಮಕಗೊಂಡು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 277 ತರಬೇತಿ ನೌಕರರು, 178 ಪರೀಕ್ಷಾರ್ಥಿ ನೌಕರರು ಹಾಗೂ 175 ಕಾಯಂ ನೌಕರರಿಗೆ ರಿಯಾಯಿತಿ ನೀಡಲು ಸಂಸ್ಥೆಯು ಉದ್ದೇಶಿಸಿದೆ.

ಈ ಹಿನ್ನೆಲೆಯಲ್ಲ, ಮುಷ್ಕರಕ್ಕೆ ಸಂಬಂಧಿಸಿದಂತೆ ಸೇವೆಯಿಂದ ತೆಗೆದು ಹಾಕಲ್ಪಟ್ಟು, ನಂತರ ಲೋಕಾದಲತ್ ಮೂಲಕ ಮರು ನೇಮಕಗೊಂಡು 15-08-2022 ರಂದು ಇದ್ದಂತೆ, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 277 ತರಬೇತಿ ನೌಕರರು, 178 ಪರೀಕ್ಷಾರ್ಥಿ ನೌಕರರು ಹಾಗೂ 175 ಕಾಯಂ ನೌಕರರ ಮರು ನೇಮಕಾತಿ ಆದೇಶಗಳನ್ನು ಭವಿಷ್ಯವರ್ತಿಯಾಗಿ, ಈ ಕೆಳಕಂಡಂತೆ ಮಾರ್ಪಾಡು ಮಾಡಿ ಆದೇಶಿಸಿದೆ.

l. ತರಬೇತಿ ನೌಕರರಿಗೆ: • ನೇಮಕಗೊಂಡ ದಿನಾಂಕದಿಂದ ತರಬೇತಿ ಸೇವೆಯಿಂದ ತೆಗೆದು ಹಾಕಲಾದ ದಿನಾಂಕದವರೆಗೆ ಸಲ್ಲಿಸಿರುವ ಸೇವೆಯೊಂದಿಗೆ ಮರು ನೇಮಕ ಮಾಡಲಾಗಿದೆ.

• ತರಬೇತಿ ಸೇವೆಯಿಂದ ತೆಗೆದು ಹಾಕಲಾದ ದಿನಾಂಕದಿಂದ ಮರು ನೇಮಕಗೊಂಡ ದಿನಾಂಕದವರೆಗಿನ ಅವಧಿಗೆ ಯಾವುದೇ ಹಿಂಬಾಕಿ ತರಬೇತಿ ಭತ್ಯೆ, ನಿರಂತರ ಸೇವೆ ಹಾಗೂ ತತ್ಪಲಿತ ಸೇವಾ ಸೌಲಭ್ಯಗಳಿಗೆ ಇವರು ಅರ್ಹರಿರುವುದಿಲ್ಲ.

* ತರಬೇತಿ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದೆ. ಇನ್ನುಳದಂತೆ, ಜಂಟಿ ಮೆಮೋದಲ್ಲಿರುವ ಅಂಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

II. ಪರೀಕ್ಷಾರ್ಥಿ ನೌಕರರಿಗೆ: • ನೇಮಕಗೊಂಡ ದಿನಾಂಕದಿಂದ ಪರೀಕ್ಷಾರ್ಥಿ ಸೇವೆಯಿಂದ ಬಿಡುಗಡೆಗೊಳಿಸಿದ ದಿನಾಂಕದವರೆಗೆ ಸಲ್ಲಿಸಿರುವ ಸೇವೆಯೊಂದಿಗೆ ಮರು ನೇಮಕ ಮಾಡಲಾಗಿದೆ.

• ಪರೀಕ್ಷಾರ್ಥಿ ಸೇವೆಯಿಂದ ತೆಗೆದು ಹಾಕಲಾದ ದಿನಾಂಕದಿಂದ ಮರು ನೇಮಕಗೊಂಡ ದಿನಾಂಕದವರೆಗಿನ ಅವಧಿಗೆ ಯಾವುದೇ ಹಿಂಬಾಕಿ ವೇತನ, ನಿರಂತರ ಸೇವೆ ಹಾಗೂ ತತ್ಪಲಿತ ಸೇವಾ ಸೌಲಭ್ಯಗಳಿಗೆ ಇವರು ಅರ್ಹರಿರುವುದಿಲ್ಲ.

• ಪರೀಕ್ಷಾರ್ಥಿ ಅವಧಿಯನ್ನು ಒಂದು ವರ್ಷಕಾಲ ವಿಸ್ತರಿಸಲಾಗಿದೆ. • ಇನ್ನುಳಿದಂತೆ, ಜಂಟಿ ಮೆಮೋದಲ್ಲಿರುವ ಅಂಶಗಳಲ್ಲಿ ಯಾವುದೇ ಬದಲಾವಣಿ ಇರುವುದಿಲ್ಲ.

III ಕಾಯಂ ನೌಕರರಿಗೆ: • ನಿರಂತರ ಸೇವೆಯೊಂದಿಗೆ ಮರು ನೇಮಕ ಮಾಡಲಾಗಿದೆ.

• ಸೇವೆಯಿಂದ ವಜಾಗೊಂಡ ದಿನಾಂಕದಿಂದ ಮರು, ನೇಮಕಗೊಂಡ ದಿನಾಂಕದವರೆಗಿನ ಅವಧಿಗೆ ಯಾವುದೇ ಹಿಂಬಾಕಿ ವೇತನ, ನಿರಂತರ ಸೇವೆ, ತತ್ಪಲಿತ ಸೇವಾ ಸೌಲಭ್ಯಗಳಗೆ ಇವರು ಅರ್ಹರಿರುವುದಿಲ್ಲ.

• ಮೂಲ ವೇತನದಲ್ಲಿ ಒಂದು ವೇತನ ಬಡ್ತಿಯನ್ನು ಸಂಚಿತವಾಗಿ ಇಳಿಸಲಾಗಿದೆ.

• ಮುಂಬಡ್ತಿಗೆ ಅರ್ಹರಿರುವುದಿಲ್ಲವೆಂದು ಜಂಟಿ ಮಮೋದಲ್ಲಿ ವಿಧಿಸಿರುವ ಷರತ್ತನ್ನು ಹಿಂಪಡೆಯಲಾಗಿದೆ. ಇನ್ನುಳದಂತೆ, ಜಂಟಿ ಮೆಮೋದಲ್ಲಿರುವ ಅಂಶಗಳಲ್ಲಿ ಯಾವುದೇ ಬದಲಾವಣಿ ಇರುವುದಿಲ್ಲ.

ವಿಶೇಷ ಸೂಚನೆ: ಪುನರ್ ನೇಮಕಗೊಂಡು 15-08-2022 ರಂದು ಇದ್ದಂತೆ, ಕಾರ್ಯ ನಿರ್ವಹಿಸುತ್ತಿರುವ 277 ತರಬೇತಿ ನೌಕರರು, 178 ಪರೀಕ್ಷಾರ್ಥಿ ನೌಕರರು ಹಾಗೂ 175 ಕಾಯಂ ನೌಕರರಿಗೆ ಮಾತ್ರ ಈ ಮಾರ್ಪಾಡು ಆದೇಶವು ಅನ್ವಯಿಸುತ್ತದೆ. ಈ ಮಾರ್ಪಾಡು ಆದೇಶವು 15-08-2022 ರಿಂದ ಭವಿಷ್ಯವರ್ತಿಯಾಗಿ ಹಾರಿಗೆ ಬರುತ್ತದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಆದೇಶ ಹೊರಡಿಸಿದ್ದರು.

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ