CRIMENEWSನಮ್ಮರಾಜ್ಯ

KSRTC ಬಸ್‌ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ 8 ಲಕ್ಷ ರೂ. ದಂಡ ತೆತ್ತಿದ ತಿಳಿಗೇಡಿಗಳು- ಇವರಿಂದ ನಿರ್ವಾಹಕರಿಗೂ ಸಮಸ್ಯೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ಬಸ್‌ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ ಬಳಿಕ 8 ಲಕ್ಷ ರೂ. ದಂಡ ತೆತ್ತಿದ್ದಾರೆ ತಿಳಿಗೇಡಿ ಪ್ರಯಾಣಿಕರು.

ಹೌದು! ಪ್ರತಿದಿನ ಪ್ರಯಾಣಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಎಚ್ಚರಿಕೆಯನ್ನು ನೀಡುತ್ತಿದ್ದರೂ ಕೂಡ ಜನ ಈ ಬಗ್ಗೆ ಗಮನ ನೀಡುವುದಿಲ್ಲ. ಸಾರಿಗೆ ಸಂಸ್ಥೆಉ ಬಸ್‌ಗಳಲ್ಲಿ ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸಬೇಡಿ ಎಂದು ಪ್ರತಿ ಭಾರೀ ಹೇಳಿದರೂ ಮಾಧ್ಯಮಗಳ ವರದಿಯಾಗುತ್ತಿದ್ದರೂ ಕೂಡ ಅದಕ್ಕೆ ಕೇರ್ ಮಾಡದವರು ಈ ರೀತಿ ಒಂದಕ್ಕೆ 10 ಪಟ್ಟು ದಂಡಕಟ್ಟಿದ್ದಾರೆ.

ನೋಡಿ ಕೆಎಸ್‌ಆರ್‌ಟಿಸಿ ತನಿಖಾ ಸಿಬ್ಬಂದಿಗಳು ಟಿಕೆಟ್​​ ಪಡೆಯದೆ ಬಸ್‌ನಲ್ಲಿ ಪ್ರಯಾಣಿಸುಇವವರಿಗೆ ಅವರು ಪ್ರಯಾಣಿಸಿದ ದೂರಕ್ಕೆ ಅನುಗಣವಾಗಿ ದಂಡ ಹಾಕುತ್ತಾರೆ. ಅದರಂತೆ 2025ರಲ್ಲಿ ಕೆಎಸ್‌ಆರ್‌ಟಿಸಿ 8,08,704 ರೂ. ದಂಡವನ್ನು ವಸೂಲಿ ಮಾಡಿದೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ಹೊರಡಿಸಿದ್ದು, ಈ ಹಿಂದೆ ಅಂದರೆ 2025 ಏಪ್ರಿಲ್​​ನಲ್ಲಿ ಈ ದಂಡ ಸಾವಿರದಲ್ಲಿತ್ತು. ಇದೀಗ ಲಕ್ಷಕ್ಕೆ ದಾಟಿದೆ. 2025ರ ಡಿಸೆಂಬರ್ ತಿಂಗಳಿನಲ್ಲಿ ಕೆಎಸ್ಆರ್ಟಿಸಿ ನಿಗಮವು 8 ಲಕ್ಷದಷ್ಟು ದಂಡವನ್ನು ವಸೂಲಿ ಮಾಡಿದೆ.

ಡಿಸೆಂಬರ್ ತಿಂಗಳಿನಲ್ಲಿ ನಿಗಮವು 43553 ವಾಹನಗಳನ್ನು ತನಿಖೆಗೊಳಪಡಿಸಿತ್ತು. ಅದರಲ್ಲಿ 4207 ಬಸ್ಸಿನಲ್ಲಿದ್ದ ವಸ್ತುಗಳ ಕಳ್ಳತನ ಮಾಡಿದ ಹಾಗೂ ಇತರ ಪ್ರಕರಣಗಳನ್ನು ಪತ್ತೆಹಚ್ಚಿದೆ. ಇನ್ನು 4353 ಟಿಕೆಟ್ ರಹಿತ ಪ್ರಯಾಣ ಮಾಡಿರುವ ಪ್ರಕರಣಗಳು ಪತ್ತೆ ಮಾಡಿದೆ.

ಅಲ್ಲದೆ ಈ ವೇಳೆ ಒಟ್ಟು 8,08,704 ರೂ. ದಂಡದ ರೂಪದಲ್ಲಿ ವಸೂಲಿ ಮಾಡಿದೆ. ನಿಗಮದ ಆದಾಯದಲ್ಲೂ ಸೋರಿಕೆ ಆಗುತ್ತಿದ್ದು, 1,14,500 ರೂ. ನಷ್ಟ ಆಗರುವುದನ್ನು ಪತ್ತೆಹಚ್ಚಿದ್ದಾರೆ. ಇದೀಗ ಇದನ್ನು ತಡೆಯಲು ನಿಗಮ ಹಲವು ಕ್ರಮಗಳನ್ನು ತಂದಿದೆ ಅದರ ಜತೆಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್-ಪಾಸ್ ಪಡೆಯಿರಿ ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.

ಏಪ್ರಿಲ್ 2025ರಲ್ಲಿ 43,244 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪರಿಶೀಲಿಸಿದಾಗ, 97,576 ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ 3,882 ಪ್ರಕರಣಗಳು ಕಂಡುಬಂದಿವೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 3,780 ಪ್ರಯಾಣಿಕರು ಪತ್ತೆ ಮಾಡಿ, 7,32,495 ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದರು.

ಇನ್ನು ಇದರ ಜತೆಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ವಿರುದ್ಧ ಕೂಡ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಅದಕ್ಕಾಗಿ ಇಂತಹ ಘಟನೆಗಳನ್ನು ತಡೆಗಟ್ಟಲು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್​​ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!