- 4-5, 10 ವರ್ಷದಿಂದ ವಜಾಗೊಂಡ ನೌಕರರ ಮರು ನೇಮಕಕ್ಕೂ ಸಮ್ಮತಿ ನೀಡಿದ ಸಿಎಂ ಏಕನಾಥ್ ಶಿಂಧೆ
- ನಗದು ರಹಿತ ವೈದ್ಯಕೀಯ ಸೌಲಭ್ಯ
- ಎಲ್ಲ ಬಸ್‌ಗಳಲ್ಲೂ ನೌಕರರು ಮತ್ತವರ ಕುಟುಂಬದವರ ಪ್ರಯಾಣಕ್ಕೆ ರಿಯಾಯಿತಿ
- ಜುಲೈ 2016 ರಿಂದ ಜನವರಿ 2020ರ ಅವಧಿಗೆ ಬಾಕಿ ಇರುವ ತುಟ್ಟಿಭತ್ಯೆ ನೀಡಲು ಒಪ್ಪಿಗೆ
ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ನೌಕರರಿಗೆ 6500 ರೂ. ಮೂಲ ವೇತನ ಹೆಚ್ಚಳ ಮಾಡಲು ಸರ್ಕಾರ ಒಪ್ಪಿಕೊಂಡ ಹಿನ್ನೆಯಲ್ಲಿ ಅನಿರ್ದಿಷ್ಟಾವಧಿ ಹಮ್ಮಿಕೊಂಡಿದ್ದ ಮುಷ್ಕರವನ್ನು ಬುಧವಾರ ಸಂಜೆ ವಾಪಸ್ ಪಡೆಯಲಾಯಿತು.
ಮಂಗಳವಾರದಿಂದ ಅಂದರೆ ಇದೇ ಸೆ.2ರಿಂದ ಮುಷ್ಕರ ಮಾಡಲಾಗುತ್ತಿತ್ತು. ಈ ನಡುವೆ 11 ನೌಕರರ ಸಂಘಟನೆಗಳು ಸರ್ಕಾರಿ ನೌಕರರಂತೆ ಸರಿಸಮಾನತೆ ವೇತನಕ್ಕೆ ಆಗ್ರಹಿಸಿ ಕರೆ ನೀಡಿದ್ದ ಈ ಅನಿರ್ದಿಷ್ಟಾವಧಿ ಮುಷ್ಕರದ ನಡುವೆ ಬುಧವಾರ ಸಂಜೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜಂಟಿ ಕ್ರಿಯಾ ಸಮಿತಿಯ ಸಭೆ ಕರೆದು ಬೇಡಿಕೆಗಳ ಈಡೇರಿಕೆಗೆ ಒಪ್ಪಿಕೊಂಡ ಹಿನ್ನೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ.
“ನಮ್ಮ ಮಾಸಿಕ ವೇತನ 1 ಏಪ್ರಿಲ್ 2020 ರಿಂದ ಜಾರಿಗೆ ಬರುವಂತೆ ₹ 6,500 ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿದೆ, ಇದು ಐತಿಹಾಸಿಕ ನಿರ್ಧಾರವಾಗಿದೆ. ಆದ್ದರಿಂದ, ನಾವು ಮುಷ್ಕರವನ್ನು ಹಿಂಪಡೆದಿದ್ದೇವೆ ಎಂದು 11 ಯೂನಿಯನ್‌ಗಳಲ್ಲಿ ಒಂದಾದ ಮಹಾರಾಷ್ಟ್ರ ಎಸ್‌ಟಿ ವರ್ಕರ್ಸ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮುಖೇಶ್ ತಿಗೋಟೆ ಹೇಳಿದರು.
ಮುಂಬೈನ ಸಹ್ಯಾದ್ರಿಯ ರಾಜ್ಯ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿ ಮತ್ತು ಒಕ್ಕೂಟದ ಪ್ರತಿನಿಧಿಗಳ ನಡುವೆ ನಿನ್ನೆ ಸಂಜೆ ಸಭೆ ನಡೆಯಿತು. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೈಗಾರಿಕಾ ಸಚಿವ ಉದಯ್ ಸಾಮಂತ್, ಶಾಸಕರಾದ ಸದಾಭೌ ಖೋಟ್ ಮತ್ತು ಗೋಪಿಚಂದ್ ಪದಾಲ್ಕರ್ ಅವರು ನೌಕರರ ಸಂಘಟನೆಗಳೊಂದಿಗೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಯಾವಯಾವ ಬೇಡಿಕೆ ಈಡೇರಿಕೆಗೆ ಸಮ್ಮತಿ?: 1) ಏ 1, 2020 ರಿಂದ ನೌಕರರ ವೇತನ 6500 ರೂ.ಗಳು ಹೆಚ್ಚಾಗುತ್ತದೆ. 2) ಜುಲೈ 2016 ರಿಂದ ಜನವರಿ 2020ರ ಅವಧಿಗೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನೀಡಲಾಗುತ್ತದೆ. 3) ಸರ್ಕಾರಿ ನೌಕರರಂತೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆ ಮತ್ತು ವಾರ್ಷಿಕ ವೇತನ ಹೆಚ್ಚಳ.
4) ವಜಾಗೊಂಡ 2000 ನೌಕರರ ಮರು ನೇಮಕಕ್ಕೆ ಒಪ್ಪಿಗೆ. 5) ಇನ್ನು ಪ್ರಮುಖವಾಗಿ ಸಾರಿಗೆ ನೌಕರರಿಗೆ ನಗದು ರಹಿತ ವೈದ್ಯಕೀಯ ಸೇವೆ ನೀಡಲು ಸರ್ಕಾರ ಒಪ್ಪಿಕೊಂಡಿದೆ. 6) ನೌಕರರು ಮತ್ತು ಅವರ ಕುಟುಂಬಗಳು ಯಾವುದೇ ಬಸ್‌ಗಳಲ್ಲಾದರೂ ಒಂದು ವರ್ಷದ ಉಚಿತ ಬಸ್‌ಪಾಸ್ ಪಡೆಯಲು ರಿಯಾಯಿತಿ ನೀಡಲಾಗಿದೆ.
7) ಮಹಾರಾಷ್ಟ್ರದಲ್ಲಿ 251 ಚಾಲಕ ನಿರ್ವಾಕರ ವಿಶ್ರಾಂತಿ ಗೃಹ ನಿರ್ಮಾಣಲ್ಲೆ 500 ಕೋಟಿ ರೂ. ಹೆಚ್ಚುವರಿ ಹಣವನ್ನು ಮೀಸಲಿಡುವುದಾಗಿ ತಿಳಿಸಿದೆ. ಜತೆಗೆ 4-5, 10 ವರ್ಷಗಳಿಂದ ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಅನುಮೋದಿಸಿದ್ದಾರೆ.
ಬಸ್ ಡಿಪೋಗಳಲ್ಲಿನ ವಿಶ್ರಾಂತಿ ಕೊಠಡಿಗಳ ಉನ್ನತೀಕರಣ ಮತ್ತು ಎಲ್ಲಾ ನೌಕರರಿಗೆ ವೈದ್ಯಕೀಯ ನೆರವು ಮುಂತಾದ ಅವರ ಇತರ ಕೆಲವು ಬೇಡಿಕೆಗಳಿಗೆ ಸಮ್ಮತಿಸಿದರು. ಈ ಎಲ್ಲ ಬೇಡಿಕೆಗಳು ಈಡೇರಿದ್ದರಿಂದ ಗಣಪತಿ ಹಬ್ಬಕ್ಕೆ ಮುನ್ನ ಮುಷ್ಕರ ನಡೆಸಿ ನೌಕರರು ಸಂಘಟನೆಗಳು ನೌಕರರಿಗೆ ಗಣಮತಿ ಹಬ್ಬದ ಖುಷಿ ನೀಡಿವೆ.
ಮಂಗಳವಾರದಿಂದ ಆರಂಭವಾಗಿದ್ದ ಮುಷ್ಕರ ಬುಧವಾರ ದಿನವಿಡೀ ನಡೆಯಿತು. ರಾಜ್ಯಾದ್ಯಂತ 251 MSRTC ಬಸ್ ಡಿಪೋಗಳಲ್ಲಿ 94 ಸಂಪೂರ್ಣವಾಗಿ ಸ್ತಬ್ಧವಾಗಿದ್ದವು. 92 ಭಾಗಶಃ ಕಾರ್ಯನಿರ್ವಹಿಸುತ್ತಿವೆ ಮತ್ತು 65 ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು MSRTC ವಕ್ತಾರರು ಸಂಜೆ ತಿಳಿಸಿದ್ದಾರೆ. ಮುಷ್ಕರದಿಂದಾಗಿ ನಿಗಮಕ್ಕೆ 22 ಕೋಟಿ ರೂ.ಗಳಷ್ಟು ಆದಾಯ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ವೇಳಾಪಟ್ಟಿಯ ಪ್ರಕಾರ, MSRTC ಬುಧವಾರ ಮುಂಬೈ, ಥಾಣೆ ಮತ್ತು ಪಾಲ್ಘರ್‌ನಿಂದ ಸುಮಾರು 1,000 ವಿಶೇಷ ಬಸ್‌ಗಳ ಓಡಾಟ ಅರಂಭವಾಯಿತು. ಏತನ್ಮಧ್ಯೆ, ಕೊಂಕಣ ರೈಲ್ವೆಯು 342 ವಿಶೇಷ ರೈಲುಗಳನ್ನು ಹಬ್ಬಕ್ಕೆ ಬಿಟ್ಟಿದ್ದು ಅವುಕೂಡ ಓಡಾಡುತ್ತಿವೆ.
ಕೇವಲ ಪ್ರತಿಷ್ಟೆಗಾಗಿ ಹಾಗು ತಮ್ಮ ಅಸ್ಥಿತ್ವಕ್ಕಾಗಿ ಸಾರಿಗೆ ನೌಕರರ ಜೊತೆ ಚೆಲ್ಲಾಟ ಆಡುತ್ತಿರುವ ಎಲ್ಲಾ ಸಂಘಟನೆಗಳ “ನಾಯ “ಕರುಗಳು ಈಗ ಹೋಗಿ msrtc ಸಾರಿಗೆ ಸಂಘಟನೆಗಳ ನಾಯಕರ ಕಾಲ ಕೆಳಗೆ ನುಗ್ಗಿ ಬಂದರೆ ಸ್ವಲ್ಪವಾದರೂ ಬುದ್ಧಿ ಬಂದೀತು