ಸಾರಿಗೆ ಮುಷ್ಕರ ಎಂಬುದು ಎಲ್ಲಾ ಅಧಿಕಾರಿಗಳು ಮತ್ತು ನೌಕರ ಸಿಬ್ಬಂದಿಗಳ ವೇತನಕ್ಕೆ ಸಂಬಂಧಪಟ್ಟಿರುವುದಾಗಿರುತ್ತದೆ.ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಮುಷ್ಕರ ಮಾಡಬೇಕಾಗಿದೆ. ಆದರೆ ನಮ್ಮ ನಿಗಮದಲ್ಲಿ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸುವುದಿಲ್ಲ.
ಮುಷ್ಕರದ ಮುಖಾಂತರ ವೇತನದ ಬಗ್ಗೆ ಏನಾದರು ನಿರ್ಧಾರ ಮತ್ತು ಆದೇಶಗಳು ಆದರೆ ಅದು ಎಲ್ಲರಿಗೂ ಅನ್ವಹಿಸುತ್ತದೆ. ಆದ್ದರಿಂದ ವಿಭಾಗದ DC, DTO, DME ಯವರಿಂದ ಹಿಡಿದು ಎಲ್ಲ ವರ್ಗದ ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ಒಗ್ಗಟ್ಟಿನಲ್ಲಿ ಮುಷ್ಕರ ಮಾಡಬೇಕು.
ಇಲ್ಲದಿದ್ದರೆ ಎಲ್ಲರಿಗೂ ಆಗುವಾಗೆ ನಮಗೂ ಆಗುತ್ತದೆ. ಮುಷ್ಕರದಲ್ಲಿ ಭಾಗವಹಿಸಿದವರು ಮಾತ್ರ ಯಾಕೆ ಪೊಲೀಸ್ ಕೇಸ್, ವರ್ಗಾವಣೆ, ಅಮಾನತು, ವಜಾ ಮತ್ತು ಇನ್ನಿತರ ಗಂಭೀರ ಪ್ರಕರಣಗಳಲ್ಲಿ ಸಿಲುಕಿ ಕಷ್ಟ ನಷ್ಟ ಅನುಭವಿಸಬೇಕು.
ಆದುದರಿಂದ ಅಧಿಕಾರಿಗಳು ಮತ್ತು ಎಲ್ಲ ವರ್ಗದ ನೌಕರರು ಸಿಬ್ಬಂದಿಗಳು ಒಟ್ಟಾಗಿ ಮುಷ್ಕರ ಮಾಡುವುದಾದರೆ ನಾವೆಲ್ಲರೂ ಮುಷ್ಕರದಲ್ಲಿ ಭಾಗವಹಿಸೋಣ. ಇಲ್ಲದಿದ್ದರೆ ನಾವೆಲ್ಲರೂ ಕರ್ತವ್ಯ ನಿರ್ವಹಿಸುವುದು ಸೂಕ್ತವಾಗಿರುತ್ತದೆ ಎಂಬುದು ನನ್ನ ಪರ್ಸನಲ್ ಅಭಿಪ್ರಾಯ ಮತ್ತು ಅನಿಸಿಕೆ ಆಗಿದೆ.
ಧನ್ಯವಾದಗಳು.
ಜೀವನ್ ಮಾರ್ಟಿಸ್
ಸಂಘಟನೆ ಮುಖಂಡರು
KSRTC ಪುತ್ತೂರು ವಿಭಾಗ

Related









