ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ನಡೆಯುತ್ತಿರುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್‍ಬುಕ್ ಮತ್ತು ಯೂಟ್ಯೂಬ್‍ನಲ್ಲಿ ನೇರಪ್ರಸಾರವಾಗುತ್ತಿವೆ.
ಫೆಸ್‍ಬುಕ್ ಪೇಜ್ ಲಿಂಕ್ https://www.facebook.com/mysorevarthe/ ಈ ಪೇಜ್‍ನಲ್ಲಿ ನೇರಪ್ರಸಾರ ಸಿಗುತ್ತದೆ. ಈ ಪೇಜ್ ಅನ್ನು ಲೈಕ್ ಮಾಡಿ ಫಾಲೊ ಮಾಡಿದ್ದಲ್ಲಿ, ಈಃ ಟive ಪ್ರಾರಂಭವಾದಗೆಲ್ಲ ತಾನಾಗೇ ತಮ್ಮ ಮೊಬೈಲ್‍ಗೆ ನೋಟಫಿಕೇಶನ್ ಬರುತ್ತದೆ. ಈ ಪೇಜ್‍ನಲ್ಲಿ ಕಾರ್ಯಕ್ರಮಗಳ ಮಾಹಿತಿಯನ್ನು ಸಹ ಆಗಾಗ್ಗೆ ಪ್ರಕಟಿಸಲಾಗುತ್ತದೆ.
ಇದಲ್ಲದೆ ಯ್ಯೂಟೂಬ್‍ನಲ್ಲಿಯೂ (live stream) ನೇರಪ್ರಸಾರವಾಗಲಿದ್ದು, ಈ ಲಿಂಕ್ https://www.youtube.com/playlist?list=PLvhg-sbsHV_ybFvK6Iu7HLoaOmh3yCcVC ಮೂಲಕ ವೀಕ್ಷಿಸಬಹುದು.
ಅಕ್ಟೋಬರ್ 24ರವರೆಗೆ ಪ್ರತಿ ದಿನ ಸಂಜೆ7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, YouTube ನಲ್ಲಿ ನೇರಪ್ರಸಾರವಾಗಲಿದೆ ಎಂದು ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು ತಿಳಿಸಿದ್ದಾರೆ.