ರಾಯಚೂರು: ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮತ್ತು ತೃತೀಯ ಲಿಂಗಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಓಡಾಡುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಇದರಿಂದ ಸಂಸ್ಥೆಗೂ ಲಾಭ ಹಿಂದಿಗಿಂತ ಈಗ ಹೆಚ್ಚಾಗಿದೆ. ಆದರೆ, ಇಲ್ಲಿ ಆಧಾರ್ ತಂದಿದ್ದ ತೃತೀಯಲಿಂಗಿಯೊಬ್ಬರು ಬಸ್ ಹತ್ತಿದ್ದು. ಅವರ ಹೆಸರು ಲಕ್ಷ್ಮೀ ಆದರೆ, ಲಿಂಗದ ಜಾಗದಲ್ಲಿ ಪುರುಷ ಎಂದು ನಮೂದಾಗಿದೆ.
ಇದನ್ನು ಕಂಡ ನಿರ್ವಾಹಕ ಇದೇನಪ್ಪ ಎಂದು ಕಕ್ಕಾಬಿಕ್ಕಿಯಾಗಿದ್ದಾರೆ. ಕಂಡಕ್ಟರ್ ಗೊಂದಲಕ್ಕೆ ಕಾರಣ ಲಕ್ಷ್ಮೀ ಪುರುಷರ ಬಟ್ಟೆಯನ್ನೇ ಧರಿಸಿ ಬಂದಿದ್ದೂ ಕೂಡ. ಹೌದು! ಇದರಿಂದ ನಿರ್ವಾಹಕರು ತೃತೀಯ ಲಿಂಗಿಗೆ ಟಿಕೆಟ್ ನೀಡಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿ ಪರದಾಡಿದರು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಲಕ್ಷ್ಮೀ ರಾಯಚೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್ ಹತ್ತಿದ್ದರು. ಈ ವೇಳೆ ಲಕ್ಷ್ಮೀ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ.
ಅದೇ ವೇಗದಲ್ಲೇ ಎಲ್ಲಿ ನಿಮ್ಮ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿದ್ದಾರೆ. ಆಕೆ ಆಧಾರ್ ಕಾರ್ಡ್ ಕೊಟ್ಟಿದ್ದು, ಅದರಲ್ಲಿ ಲಕ್ಷ್ಮೀ ಎಂದು ಹೆಸರಿದೆ. ಆದರೆ ಲಿಂಗದ ಜಾಗದಲ್ಲಿ ಪುರುಷ ಎಂದು ಉಲ್ಲೇಖಿಸಲಾಗಿದೆ. ಜತೆಗೆ ಲಕ್ಷ್ಮೀ ಪುರುಷರ ಬಟ್ಟೆ ಹಾಕಿದ್ದರಿಂದ ಕಂಡಕ್ಟರ್ ಕಂಪ್ಲೀಟ್ ಗೊಂದಲಕ್ಕೆ ಒಳಗಾದರು.
ಹೆಸರು ಲಕ್ಷ್ಮೀ, ಲಿಂಗ ಪುರುಷ ಇದೇನಿದು ಎಂದು ನಿರ್ವಾಹಕರು ಆಕೆಯನ್ನು ಪ್ರಶ್ನಿಸಿದರು. ಅದಕ್ಕೆ ಆಕೆ ಕೊಟ್ಟ ಉತ್ತರ ನಾನು ತೃತೀಯ ಲಿಂಗಿ ಅನ್ನೋದು. ಇದೇನಮ್ಮ ಪುರುಷರ ಉಡುಪು ಎಂದಿದ್ದಕ್ಕೆ, ಆಕೆ ನಾನು ಮಹಿಳೆಯರ ಬಟ್ಟೆ ಹಾಕಿಕೊಳ್ಳಲ್ಲ. ಯಾವಾಗಲೂ ಪುರುಷರ ಬಟ್ಟೆನೇ ಧರಿಸುತ್ತೇನೆ ಎಂದು ಹೇಳಿದಳು.
ಈ ಎಲ್ಲ ಗೊಂದಲಗಳ ನಡುವೆ ಹೇಗೋ ಕಂಡಕ್ಟರ್ ಅವರಿಗೆ ಆಕೆ ತೃತೀಯ ಲಿಂಗೀನೆ ಎಂಬುವುದು ಕೊನೆಗೂ ಮನವರಿಕೆಯಾಗಿ ಫ್ರೀ ಟಿಕೆಟ್ ಕೊಟ್ಟು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರು.