ವಿಜಯಪುರ: ತನ್ನ ತಂಗಿಯನ್ನು ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪರೀಕ್ಷೆಗೆ ಕರೆತಂದಿದ್ದ ಅಣ್ಣ ಮೃತಪಟ್ಟಿದ್ದು, ಪೊಲೀಸರು ಬೀಸಿದ ಲಾಠ ಏಟಿನಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇಂದು ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ 19 ವರ್ಷದ ಯುವಕ ಸಾಗರ ಚಲವಾದಿ ಮೃತ.
ತಂಗಿಯನ್ನು ಪರೀಕ್ಷೆಗೆ ಕಳುಹಿಸಿ ಪರೀಕ್ಷೆ ಮುಗಿಯುವವರೆಗೂ ಶಾಲೆಯ ಬಳಿಯೇ ಕಾದು ಕುಳಿತ್ತಿದ್ದ, ಸ್ವಲ್ಪ ಸಮಯದ ನಂತರ ತಂಗಿಗೆ ನಕಲು ಚೀಟಿ ಕೊಡಲು ಹೋಗುತ್ತಿದ್ದಾಗ ಪೊಲೀಸರು ಆತನನ್ನು ಬೆನ್ನಟ್ಟಿದ್ದಾರೆ. ಈ ನಡುವೆ ಪೊಲೀಸರಿಗೆ ಹೆದರಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಆದರೆ ಸಾಗರ್ ಕುಟುಂಬಸ್ಥರು ಮಾತ್ರ ಪೊಲೀಸರು ಲಾಠಿಯಿಂದ ಹೊಡೆದ ಕಾರಣ ನನ್ನ ಮಗ ಮೃತಪಟ್ಟಿದ್ದಾನೆ ಎಂದು ದೂರಿತ್ತಿದ್ದು, ಇದಲ್ಲೆ ಪುಷ್ಟಿ ನೀಡುವಂತೆ, ಪ್ರತ್ಯಕ್ಷದರ್ಶಿಯೊಬ್ಬ ಪರೀಕ್ಷಾ ಕೇಂದ್ರದ ಹೊರಗಡೆ ನಾವು ಕಾದು ಕುಳಿತಿದ್ದೇವು. ಆಗ ಪೊಲೀಸರು ಇಲ್ಲಿ ಕೂರಬಾರದು ಹೋಗಿ ಎಂದು ಹೇಳಿದರು.
ಅವರು ಹೇಳುತ್ತಿದ್ದಂತ್ತೆ ನಾವು ಎಂದು ಬೈಕ್ ಹತ್ತಿ ಹೋಗುತ್ತಿದ್ದೇವು. ಆಗ ಪೇದೆಯೊಬ್ಬರು ನನ್ನ ಕಾಲಿಗೆ ಲಾಠಿಯಿಂದ ಹೊಡೆದರು. ನಂತರ ನನ್ನ ಹಿಂದೆ ಕುಳಿತ್ತಿದ್ದ ಸಾಗರ್ ಬೆನ್ನಿಗೂ ಹೊಡೆದರು. ಅವರಿ ಲಾಠಿಯಿಂದ ಹೊಡೆದ ಏಟಿನ ನೋವು ತಾಳಲಾರದೆ ಆತ ಕೆಳಗಡೆ ಬಿದ್ದ. ನಂತರ ಆವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆವು ಎಂದು ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಹೇಳಿದ್ದಾನೆ.
ಇದರಿಂದ ಸಾಗರ್ ಪೊಲೀಸರು ಬೀಸಿದ ಲಾಠಿಯಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ಸತ್ಯಾಸತ್ಯತೆ ತಿಳಿಯಬೇಕಾದರೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಮಾಡಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.
Enu madodu satya satyate tilibeku