NEWS

ರಾಜ್ಯ ಸಾರಿಗೆ ನೌಕರರು 2018ರಲ್ಲೇ ಸರ್ಕಾರಿ ನೌಕರರೆಂದು ಪರಿಗಣಿಸಲು ಸಿಎಂ, ಪ್ರಧಾನಿಗೆ ಪತ್ರ ಬರೆದಿದ್ದರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆಯ ನಾಲ್ಕೂ ನಿಗಮಗಳನ್ನು ವಿಲೀನ ಮಾಡಿ ಕರ್ನಾಟಕ ಸರ್ಕಾರ ರಸ್ತೆ ಸಾರಿಗೆ ಇಲಾಖೆಯಿಂದ ಘೋಷಣೆ ಮಾಡುವಂತೆ 2018ರಿಂದಲೂ ಸಾರಿಗೆ ನೌಕರರು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಇನ್ನು ಸಾರಿಗೆ ನಿಗಮದಲ್ಲೇ ಕಚೇರಿ ಸ್ವಚ್ಛ ಮಾಡುವ ನೌಕರರಿಗೆ ಸಿಗುತ್ತಿರುವಷ್ಟು ವೇತನ ಚಾಲನಾ ಸಿಬ್ಬಂದಿಗೆ ಸಿಗುತ್ತಿಲ್ಲ. ಇದನ್ನು ನೋಡಿದರೆ, ಸರ್ಕಾರದ ನೌಕರರ ವೇತನದೊಂದಿಗೆ ನಮ್ಮ ವೇತನವನ್ನು ತಾಳೆ ಮಾಡುವುದಾದರೂ ಹೇಗೆ?

ನಮಗಿಂತಲೂ ಕಡಿಮೆ ಅಂಕ ಪಡೆದು ಪಿಯುಸಿ ಪಾಸ್‌ ಆಗಿ ಸರ್ಕಾರಿ ನೌಕರರಾಗಿರುವವರು ನಾವು ದ್ವಿತೀಯ ಪಿಯುಸಿಯಲ್ಲಿ ಶೇ.75ಕ್ಕಿಂತಲೂ ಹೆಚ್ಚು ಅಂಕ ಪಡೆದು ಸಾರಿಗೆ ನಿಮಗಳ ನೌಕರಿಗೆ ಸೇರಿದ್ದೇವೆ. ಆದರೆ ನಮ್ಮ ವೇತನ ಹೇಳಿಕೊಳ್ಳುವುದಕ್ಕೆ ಬೇಸರವಾಗುತ್ತದೆ ಎಂದು ಪ್ರಧಾನಿ ಮೋದಿ ಅವರ ಬಳಿ ಪತ್ರದ ಮೂಲಕ ಅಳಲು ತೋಡಿಕೊಂಡಿದ್ದಾರೆ.

2018ರ ವೇತನದ ಪಟ್ಟಿ.

ಈ ವೇತನ ತಾರತಮ್ಯ ಸರಿಪಡಿಸಲು ನಮ್ಮನ್ನು ಸರ್ಕಾರಿ ನೌಕರರು ಎಂದು ಘೋಷಣೆ ಮಾಡಿ, ಇಲ್ಲ ವೇತನ ಆಯೋಗದ ಶಿಫಾಸನ್ನು ನಮಗೂ ಅಳವಡಿಸಿ ಎಂದು ನೌಕರರು ಕೇಳುತ್ತಿದ್ದಾರೆ. ಜತೆಗೆ ಈ ಬಗ್ಗೆ ಘೋಷಣೆ ಮಾಡಿ ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ನೀಡಿದರೆ ಸಾಕು. ನಾವು ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತು ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುತ್ತೇವೆ ಎಂದು ಮನವಿ ಮಾಡಿದ್ದಾರೆ.

ಇನ್ನು ಇಡೀ ದೇಶದಲ್ಲಿಯೇ ಉತ್ತಮ ಸಾರಿಗೆ ವ್ಯವಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡ ಸಂಸ್ಥೆಯೆಂದರೆ ರಾಜ್ಯ ಸಾರಿಗೆ ಸಂಸ್ಥೆ. ಮಾತ್ರವಲ್ಲದೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಕೂಡ ಪಡೆದುಕೊಂಡಿರುವ ಸಂಸ್ಥೆಗಳು ರಾಜ್ಯದ ನಾಲ್ಕೂ ನಿಗಮಗಳು ಎಂದು ತಿಳಿಸಿದ್ದಾರೆ. ಇದಿಷ್ಟೇ ಅಲ್ಲದೇ ದೇಶದಲ್ಲಿನ ರಾಜ್ಯಗಳು ಬೆರಗಾಗುವಂತೆ ಸಾರ್ವಜನಿಕ ಸೇವೆ ನೀಡುತ್ತಿದ್ದೇವೆ. ಆದರೆ ನಮಗೆ ಕೊಡುತ್ತಿರುವ ವೇತನ ಮಾತ್ರ ಅರೆಕಾಸಿನ ಮಜ್ಜಿಗೆಯಂತೆ. ಯಾಕೆ ಈ ತರತಮ್ಯ ಎಂದು ಕೇಳುತ್ತಿದ್ದಾರೆ.

ಕೆಲಸ ಮಾಡುವ ನೌಕರರಿಗೆ ಮಾತ್ರ ಕಡಿಮೆ ವೇತನ ನೀಡಿ ಅನ್ಯಾಯ ಮಾಡಲಾಗುತ್ತಿದೆ. ಇಡೀ ದೇಶದಲ್ಲಿ ಹೆಗ್ಗಳಿಗೆ ಪಡೆದುಕೊಂಡ ಸಂಸ್ಥೆಯೆಂದರೆ ರಾಜ್ಯಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಂತೆಯೇ ಅಲ್ಲವೇ. ಇನ್ನು ನೌಕರರಿಗೆ ಸರಿಯಾದ ವೇತನವಿಲ್ಲ ಎಂದು ಪ್ರಚಾರವಾದರೆ ರಾಜ್ಯಕ್ಕೆ ಕೆಟ್ಟ ಹೆಸರು ಬರುವುದಿಲ್ಲವೇ?

ರಸ್ತೆ ಸಾರಿಗೆ ನಿಗಮಗಳನ್ನು ಕರ್ನಾಟಕ ಸರ್ಕಾರ ರಸ್ತೆ ಸಾರಿಗೆ ಇಲಾಖೆ ಎಂದು ಘೋಷಣೆ ಮಾಡಿ ವೇತನ ತಾರತಮ್ಯ ಸರಿಪಡಿಸಿದರೆ ಇದರಿಂದ ಸರ್ಕಾರಕ್ಕೆ ಮತ್ತು ನೌಕರರಿಗೆ ಲಾಭವಾಗಲಿದೆ ಎಂದು 2018ರಲ್ಲೇ ಪ್ರಧಾನಿಯವರಿಗೂ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೆ ಆ ಮನವಿಗೆ ಪ್ರಧಾನಿ ಮೋದಿ ಅವರು ಯಾವುದೇ ಉತ್ತರವನ್ನು ಇದುವರೆಗೂ ನೀಡಿಲ್ಲ.

ಸರ್ಕಾರಿ ನೌಕರರು ಎಂದು ಘೊಷಿಸಿದರೆ ಸರ್ಕಾರ- ನೌಕರರು, ಸಾರ್ವಜನಿಕರಿಗೆ ಆಗುವ ಲಾಭ ಏನು?
1. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಬಗ್ಗೆ ನಡೆಯುವ ಹಗ್ಗಜಗ್ಗಾಟಕ್ಕೆ ಬ್ರೇಕ್ ಬೀಳುತ್ತದೆ.

2. ಹಠಾತ್ ಮುಷ್ಕರಗಳು ಹಾಗೂ ಬಂದ್‌ಗಳು ಸಂಭವಿಸುವುದಿಲ್ಲ.

3. ಆಡಳಿತ ಮಂಡಳಿಯ ನಡುವೆ ಹಾಗೂ ನೌಕರರ ಸಮೂಹದ ನಡುವೆ ಸ್ನೇಹ ಸಂಬಂಧದ ವಾತಾವರಣ ಬೆಳೆಯುತ್ತದೆ.

4. ಆಡಳಿತ ಸರಾಗವಾಗಿ ಸಾಗಲು ಅನುಕೂಲವಾಗುತ್ತದೆ.

5. ಮುಷ್ಕರಗಳಿಂದ ಆಗುವ ತೊಂದರೆಗಳಿಂದ ಪ್ರಯಾಣಿಕರು ದೂರವುಳಿಯುತ್ತಾರೆ.

6. ಇನ್ನೂ ಹೆಚ್ಚಿನ ಆಸಕ್ತಿಯಿಂದ ದುಡಿಯುವ ಮನೋಭಾವನೆ ಅಧಿಕಾರಿ/ ನೌಕರರಲ್ಲಿ ಬರುತ್ತದೆ.

7. ಪ್ರಯಾಣಿಕರ ಹಾಗೂ ನೌಕರರ ನಡುವೆ ಒಳ್ಳೆ ಸಂಬಂಧದ ವಾತಾವರಣ ಬೆಳೆಯುತ್ತದೆ.

8. ಆಡಳಿತ ಮಂಡಳಿಯ ಪ್ರಯಾಣಿಕರ ಹಾಗೂ ನೌಕರರ ನಡುವೆ ಒಳ್ಳೆ ಸಂಬಂಧದ ವಾತಾವರಣ ಬೆಳೆಯುತ್ತದೆ.

9. ಆಡಳಿತ ಮಂಡಳಿ ಹಾಗೂ ಯೂನಿಯನ್ ನಡುವಿನ ಹಗ್ಗಜಗ್ಗಾಟ ನಿಂತುಬಿಡುತ್ತದೆ.

10. ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಲು ಅನುಕೂಲವಾಗುತ್ತದೆ.

11. ಉತ್ತಮ ಆದಾಯ ಗಳಿಸಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನೆರವು ನೀಡಲು ಸಹಾಯವಾಗುತ್ತದೆ.

12. ದೇಶದಲ್ಲೇ ಏಕೆ ಇಡೀ ವಿಶ್ವದಲ್ಲಿ ಹೆಸರು ಮಾಡಿ ಕರ್ನಾಟಕದ ಕೀರ್ತಿಪತಾಕೆ ಹಾರಿಸಲು ಉತ್ತೇಜನ ನೀಡಿದಂತಾಗುತ್ತದೆ.

13. ಕರ್ನಾಟಕ ರಾಜ್ಯಕ್ಕೆ ಒಳ್ಳೆಯ ಹೆಸರು ಬರುತ್ತದೆ.

14. ಅಧಿಕಾರಿ ನೌಕರ ಕುಟುಂಬಕ್ಕೆ ಸಹಾಯವಾಗುತ್ತದೆ.

ಇದಕ್ಕೆಲ್ಲ ಕಾರಣಕರ್ತರಾದ ಮುಖ್ಯಮಂತ್ರಿಗಳ ಹೆಸರು ಸುವರ್ಣ ಅಕ್ಷರದಲ್ಲಿ ಬರೆದು ಬಿಡುವಂತಾಗುತ್ತದೆ ಎಂದು 2018ರಲ್ಲೇ ಕಲಬುರಗಿ ಕೇಂದ್ರ ಕಚೇರಿಯ (ಅಂದಿನ) ಕಿರಿಯ ಸಹಾಯಕ ಶಿವಕುಮಾರ್‌ ಲಾ ಸೂರ್ಯವಂಶ ಅವರು ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ಇನ್ನು 2018ರಿಂದ ಸರ್ಕಾರಿ ನೌಕರರನ್ನಾಗಿ ಮಾಡಿ ಎಂಬ ಈ ಹೋರಾಟದ ಕೂಗಿಗೆ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ಸ್ಪಂದಿಸುವರೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...