ವಿಜಯಪಥ ಸಮಗ್ರ ಸುದ್ದಿ
ರಾಮನಗರ : ತಾಲೂಕಿನಲ್ಲಿ ಸಬ್ ಇನ್ಸ್ಪೆಕ್ಟರ್ ವರ್ಗಾವಣೆಗೆ 30 ಲಕ್ಷ ಬೇಡಿಕೆಯನ್ನು ಇಲ್ಲಿನ ಬಿಜೆಪಿ ಶಾಸಕರು ಇಡುತ್ತಿದ್ದಾರೆ. ಇಂತಹ ಜೀವನ ಮಾಡುವ ಬದಲು ರಾಜಕೀಯ ಬಿಟ್ಟು ಮನೆಯಲ್ಲಿಯೇ ಇರಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.
ನಗರದಲ್ಲಿ ಮಾತನಾಡಿದ ಅವರು, ತಾಲೂಕಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕೆ ಲೆಟರ್ ಹೆಡ್‌ನ ಆ್ಯಕ್ಷನ್‌ಗೆ ಹಾಕಿಕೊಂಡು ಕೂತಿದ್ದಾರೆ. ಈ ರೀತಿ ಹಣ ಸಂಪಾದನೆ ಮಾಡಲು ಅವಶ್ಯಕತೆ ಇದ್ದೀಯಾ ಎಂದು ಪ್ರಶ್ನೆ ಮಾಡಿದರು.
ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಕೇಳಿದರೆ, ಕಡೆಗೆ ಅಧಿಕಾರಿಗಳು ಜನರಿಂದಲೇ ಸುಲಿಗೆ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿ ಹಗಲು ದರೋಡೆ ಮಾಡುವ ಅವಶ್ಯಕತೆ ಇದೆಯಾ. ಈ ರೀತಿ ಹಣ ಲೂಟಿ ಮಾಡುವ ಬದಲು ಮನೆಯಲ್ಲಿ ಇದ್ದು ಗೌರವಯುತ ಜೀವನ ನಡೆಸುವುದು ಒಳ್ಳೆಯದು ಎಂದು ಎಂಎಲ್ಸಿ ಸಿಪಿ ಯೋಗೇಶ್ವರ್ ಸಲಹೆ ನೀಡಿದರು.
ಪಂಚಾಯಿತಿ ಚುನಾವಣೆಯಲ್ಲಿ ಏನೋ ಮಾಡುತ್ತೇನೆ ಎಂದು ನನ್ನ ವಿರುದ್ಧ ಸವಾಲ್ ಹಾಕಿದರು. ಆದರೆ, ಏನೂ ಮಾಡಲಿಕ್ಕೆ ಆಗಲಿಲ್ಲ. ನಾನು ಇಂದಲ್ಲ. ನಾಳೆ ಮುಂತ್ರಿಯಾಗುತ್ತೇನೆ ಎಂದು ಹೇಳುತ್ತಾನೆ ಇದ್ದಾರೆ. ಇದೇ ರೀತಿ ಎಷ್ಟು ದಿನ ಹೇಳಿ ಜನರನ್ನು ಸೆಳೆಯಲು ಸಾಧ್ಯ ಎಂದು ಪರೋಕ್ಷವಾಗಿ ಕುಟುಕಿದರು.
ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಈ ಚುನಾವಣಾ ಫಲಿತಾಂಶಕ್ಕೂ, ವಿಧಾನಸಭಾ ಚುನಾವಣಾ ಫಲಿತಾಂಶಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನಾವು ಗೆದ್ದೆವೂ ಎಂದು ಬೀಗಲು ಸಾಧ್ಯವಿಲ್ಲ. ಕೆಲವೆಡೆ ಕಾಂಗ್ರೆಸ್ ಹಣಬಲದಿಂದ ಗೆದ್ದಿದೆ. ಆದರೆ, ಜಿಲ್ಲೆಯ ಜನ ಹಣ ಬಲಕ್ಕಿಂತ ವ್ಯಕ್ತಿಗೆ ಬೆಂಬಲ ನೀಡುವವರು. ಈ ಬಾರಿಯ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 25 ಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ ಎಂದರು.
ಕಾಂಗ್ರೆಸ್-ಬಿಜೆಪಿಗಿಂತಲೂ ಜೆಡಿಎಸ್ ಶಕ್ತಿ ದೊಡ್ಡದು
ಜನವರಿ 15 ರ ಸಂಕ್ರಾಂತಿ ನಂತರ ಪಕ್ಷ ಸಂಘಟನೆ ಮಾಡುತ್ತೇವೆ. ಅಲ್ಲಿಂದಲೇ ನಮ್ಮ ಪಕ್ಷದ ಚಟುವಟಿಕೆಗಳು ರಾಜ್ಯಾದ್ಯಂತ ಪ್ರಾರಂಭವಾಗುತ್ತವೆ. ಜೊತೆಗೆ ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಪಂಚಾಯಿತಿ ಚುನಾವಣೆಯಲ್ಲಿ ಒಳ್ಳೆಯ ಸಾಧನೆ ಮಾಡಿದೆ. ಮುಂದೆ ಜೆಡಿಎಸ್ ಪಕ್ಷದ ಶಕ್ತಿ ಗೊತ್ತಾಗುತ್ತದೆ ಎಂದರು.
ಇನ್ನು ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಹೋದರೂ ಜೆಡಿಎಸ್‌ಗೆ ತೊಂದರೆಯಿಲ್ಲ.ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಆದರೆ ಕಾಂಗ್ರೆಸ್-ಬಿಜೆಪಿಯವರು ನಮ್ಮವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ಜೆಡಿಎಸ್ ಪಕ್ಷದ ಶಕ್ತಿ ಏನು ಎಂದು ಇದರಿಂದಲೇ ತಿಳಿಯಲಿದೆ. ಬಿಜೆಪಿ-ಕಾಂಗ್ರೆಸ್‌ಗೆ ಶಕ್ತಿ ಇಲ್ಲದ ಕಾರಣ ನಮ್ಮ ಅಭ್ಯರ್ಥಿಗಳ ಸೆಳೆಯುವ ಯತ್ನ ನಡೆಸಿದ್ದಾರೆ ಎಂದರು.