NEWSಕೃಷಿನಮ್ಮರಾಜ್ಯ

ಕೃಷಿ ವಿಜ್ಞಾನ ಕೇಂದ್ರದಿಂದ ಹತ್ತಿ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ -ತಾಂತ್ರಿಕ ಸಲಹೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಿಂದ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಪ್ರಗತಿಪರ ರೈತ ಮಂಜಪ್ಪ ಹಳ್ಳಳ್ಳಿ ಅವರ ಹತ್ತಿ ಬೆಳೆಯ ಪ್ರಾತ್ಯಕ್ಷಿಕೆ ಮತ್ತು ರೈತಕ್ಷೇತ್ರ ಪಾಠಶಾಲೆ ತಾಕಿಗೆ ಭೇಟಿ ನೀಡಿ ಪೋಷಕಾಂಶಗಳ ಕೊರತೆಯ ಹತೋಟಿ ಮಾಡಲು ಸಲಹೆ ನೀಡಲಾಯಿತು.

ಹಾವೇರಿ ಜಿಲ್ಲೆಯಲ್ಲಿ ಹೆಚ್ಚಾಗಿ ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದು, ಈಗಿನ ಸಂದರ್ಭದಲ್ಲಿ ಎಲ್ಲೆಡೆ ಎಲೆ ಕೆಂಪಾಗುವಿಕೆ ಕಂಡು ಬಂದಿದ್ದು ಅದರ ನಿರ್ವಹಣೆಗಾಗಿ ರೈತರು ಕ್ರಮಗಳನ್ನು ಅನುಸರಿಸಬೇಕೆಂದು ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಅಶೋಕ ಪಿ. ಅವರು ಕೇತ್ರಭೇಟಿಯಲ್ಲಿ ಪಾಲ್ಗೊಂಡು ಬೆಳೆಯನ್ನು ಪರಿಶೀಲಿಸಿ ಮಾಹಿತಿ ನೀಡಿದರು.

ಸುಮಾರು ಶೇ. 10 ರಿಂದ 20 ರಷ್ಟು ಬೆಳೆಯಲ್ಲಿ ಎಲೆಗಳು ಕೆಂಪಾಗುವಿಕೆ ಲಕ್ಷಣಗಳು ಕಂಡು ಬಂದಿವೆ. ಎಲೆ ಕಾಂಪಾಗುವಿಕೆಯು ಆರಂಭಿಕ ಹಂತದಲ್ಲಿದೆ ಮುಂದೆ ಇದು ಹೆಚ್ಚಾಗುವ ಸಂಭವಿರುತ್ತದೆ. ಇದರಿಂದ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯವಿರುತ್ತದೆ.

ಆದ್ದರಿಂದ ಎಲೆ ಕಾಂಪಾಗುವಿಕೆ ಕಾರಣಗಳು ಹಾಗೂ ನಿರ್ವಹಣಾ ಕ್ರಮಗಳನ್ನು ತಿಳಿದುಕೊಳ್ಳುವುದು ಅತೀ ಅವಶ್ಯವಾಗಿದೆ. ಸಾರಜನಕ ಮತ್ತು ಮ್ಯಾಗ್ನೇಶಿಯಂ ಪೋಷಕಾಂಶಗಳು ಪತ್ರ ಹರಿತ್ತು ಎಂಬ ವರ್ಣದ್ರವ್ಯದ ಕೇಂದ್ರ ಬಿಂದುವಾಗಿದ್ದು ಇವೆರಡರ ಕೊರತೆಯಿಂದ ಪತ್ರ ಹರಿತ್ತಿನ ಉತ್ಪಾದನೆ ಕಡಿಮೆಯಾಗಿ ಎಲೆ ಕೆಂಪಾಗುತ್ತದೆ.

ಇದರಿಂದಾಗಿ ಎಲೆಕೆಂಪು ಪ್ರಾರಂಭ ಹಂತದಲ್ಲಿಯೇ ಕಂಡು ಬಂದರೆ ಸಸ್ಯದ ಬೆಳವಣಿಗೆ ಕುಂಠಿತಗೊಂಡು, ಹೂ- ಕಾಯಿ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತವೆ ಹಾಗೂ ಇಳುವರಿ ಕಡಿಮೆಯಾಗುತ್ತದೆ. ಇದರ ನಿರ್ವಹಣೆಗಾಗಿ ಎಲೆ ಕೆಂಪು ಬಾಧೆಯ ಲಕ್ಷಣ ಕಂಡ ಕೂಡಲೆ ನೀರಿನಲ್ಲಿ ಕರಗುವಂತಹ ಶೇ 1 (ಪ್ರತಿ ಲೀಟರಿಗೆ 10 ಗ್ರಾಂ) ಮಾಗ್ನಿಶಿಯಂ ಸಲ್ಫೆಟ್ ಸಿಂಪಡಿಸಬೇಕು.

ಮುಂಜಾಗ್ರತಾ ಕ್ರಮವಾಗಿ ಚಳಿಗಾಲ ಪ್ರಾರಂಭವಾಗುವುದಕ್ಕಿಂತ ಮೊದಲು ಶೇ. 2 (ಪ್ರತಿ ಲೀಟರಿಗೆ 20 ಗ್ರಾಂ) ರ ಡಿಎಪಿ ಅಥವಾ ಯೂರಿಯಾ ರಸಗೊಬ್ಬರ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸಬೇಕು ಎಂದರು.

ಜೊತೆಗೆ ಶೇ 1.0 ರ ಪೊಟ್ಯಾಸಿಯಂ ನೈಟ್ರೇಟ್ ಸಿಂಪರಣೆ ತೆಗೆದುಕೊಳ್ಳುವುದರಿಂದ ಕಾಯಿ ಸಂಖ್ಯೆ ಹೆಚ್ಚಿಸಿ ಇಳುವರಿಯನ್ನು ಹೆಚ್ಚಿಸಬಹುದು. ಬೋರಾನ್ ಶೇ. 0.2 ರ ದ್ರಾವಣ (2 ಗ್ರಾಂ ಪ್ರತಿ ಲೀಟರಿಗೆ) ಸಿಂಪಡಿಸುವುದರಿಂದ ಕಾಯಿ ಸಂಖ್ಯೆ ಹಾಗೂ ಹೂವು ನಿಲ್ಲುವುದು ಹೆಚ್ಚುತ್ತದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರಾಜಕುಮಾರ್ ಜಿ. ಆರ್ ಮಾತನಾಡಿ, ಮಣ್ಣಿನ ಫಲವತ್ತತೆ ನಿರ್ವಹಣೆ ಮಾಡಿದರೆ ಸಸ್ಯದಲ್ಲಿ ಕಾಣುವ ಕೊರತೆಗಳನ್ನು ನಿವಾರಿಸಬಹುದು. ಸಸ್ಯದಲ್ಲಿ ಕಾಣುವ ಚಿನ್ಹೆಗಳನ್ನು ಆಧರಿಸಿ ಸಿಂಪರಣೆಗಳನ್ನು 15 ದಿನಕ್ಕೊಮ್ಮೆ ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರಗತಿಪರ ರೈತರಾದ ಶಂಭುಲಿಂಗಪ್ಪ ಹುಲಿಹಳ್ಳಿ, ಹನುಮಂತಪ್ಪ ಕುಡಪಲಿ, ಮಹದೇವಪ್ಪ ಹಳ್ಳಳ್ಳಿ, ಶ್ರೀ ಮಾಲತೇಶ ನೀಲಣ್ಣನವರ ಮತ್ತು ಮುಖೇಶ ರೈತರು ಭಾಗವಹಿಸಿದ್ದರು.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ