ಮಂಡ್ಯ : ವಿವಾದಿತ ಕೃಷಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ನಡೆಸುತ್ತಿರುವ ರೈತಹೋರಾಟಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರು ಭಾಗದ ನಾಲ್ಕು ಜಿಲ್ಲೆಗಳ ರೈತ, ಪ್ರಗತಿಪರ ಸಂಘಟನೆಗಳ ಸದಸ್ಯರು ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಬಳಿ ಶುಕ್ರವಾರ (ನ.26) 7 ಗಂಟೆಗಳ ಕಾಲ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಬೆಳಗ್ಗೆ 9 ಗಂಟೆಗೆ ಆರಂಭವಾದ ಪ್ರತಿಭಟನೆ ಸಂಜೆ 4 ಗಂಟೆಯವರೆಗೂ ನಡೆಯಿತು. ಮಂಡ್ಯ , ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆ ಗಳ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹೆದ್ದಾರಿಯಲ್ಲಿ ಎತ್ತಿನ ಗಾಡಿ, ಟ್ರ್ಯಾಕ್ಟರ್ ನಿಲ್ಲಿಸಿ, ಜಾನುವಾರುಗಳನ್ನು ಕಟ್ಟಿ ಕೇಂದ್ರ , ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರ ತಿಭಟನಾಕಾರರು ರಸ್ತೆಯಲ್ಲೇ ಊಟ, ತಿಂಡಿ ಮಾಡಿ ಸೇವಿಸಿದರು.
ಪ್ರತಿಭಟನೆ ಆರಂಭವಾದಾಗ ಎರಡು ಬೆಂಗಳೂರು– ಮೈಸೂರು ಎರಡೂಕಡೆ 1 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಜೆ 4ರವರೆಗೂ ಪ್ರತಿಭಟನೆ ನಡೆಸುವುದಾಗಿ ಮುಖಂಡರು ಮೊದಲೇ ತಿಳಿಸಿದ್ದ ಕಾರಣ ಪೊಲೀಸರು ವಾಹನ ಸಂಚಾರಕ್ಕೆ ಬದಲಿಮಾರ್ಗ ವ್ಯವಸ್ಥೆ ಮಾಡಿದರು.
ಮೈಸೂರು ಕಡೆಯಿಂದ ಬರುವ ವಾಹನಗಳು ಕೆಆರ್‌ಎಸ್, ಕಟ್ಟೇ ರಿ, ಎಲೆಕೆರೆ ಹ್ಯಾಂ ಡ್ಪೋಸ್ಟ್, ಪಾಂಡವಪುರ, ಮಂಡ್ಯ ಮೂಲಕ ಬೆಂಗಳೂರು ಕಡೆ ತೆರಳಿದವು. ಬೆಂಗಳೂರು ಕಡೆಯಿಂದ ಬರುವ ವಾಹನಗಳು ಮದ್ದೂರು, ಭಾರತೀನಗರ, ಮಳವಳ್ಳಿ , ಬನ್ನೂರು ಮಾರ್ಗದಲ್ಲಿ ಮೈಸೂರು ತಲುಪಿದವು.
‘ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತಹೋರಾಟ ಜಗತ್ತಿನ ಅತೀದೊಡ್ಡ ಆಂದೋಲನವಾಗಿದ್ದು ನ.26ಕ್ಕೆ ವರ್ಷ ಪೂರೈಸಿದೆ. ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ.
ಆದರೆ ರೈತ ಹೋರಾಟದಲ್ಲಿ 700 ಜನರು ಮೃತಪಟ್ಟಿದ್ದು ಅವರಿಗೆ ಪರಿಹಾರ ದೊರೆಯಬೇಕು. ಅಲ್ಲಿಯವರೆಗೂ ದೆಹಲಿಯಲ್ಲಿ ಹೋರಾಟ ಮುಂದುವರಿಯಲಿದೆ. ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ನಾವು ಸಾಂಕೇತಿಕವಾಗಿ ಒಂದು ದಿನ ಹೋರಾಟ ನಡೆಸಿದ್ದೇವೆ’ ಎಂದು ಪ್ರ ತಿಭಟನಾಕಾರರು ತಿಳಿಸಿದರು.
ಹೋರಾಟದಲ್ಲಿ ರಾಜ್ಯ ರೈತಸಂಘ, ಕರ್ನಾಟಕ ಪ್ರಾಂತ ರೈತಸಂಘ, ಕೃಷ ಕೂಲಿ ಕಾರ್ಮಿಕರ ಸಂಘ, ಜನಶಕ್ತಿ ಸಂಘಟನೆ, ದಲಿತ ಸಂಘರ್ಷ ಸಮಿತಿ, ಸಿಐಟಿಯುಮುಂತಾದ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.