NEWSವಿದೇಶಸಿನಿಪಥ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು:  ಲಾಕ್‍ಡೌನ್ ನಡುವೆ ಸ್ಯಾಂಡಲ್‍ವುಡ್‍ನ ಮತ್ತೊಂದು ಜೋಡಿ ದಾಂಪತ್ಯ ಜೀವಕ್ಕೆ ಕಾಲಿಟ್ಟಿದೆ.

ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್‌ನಲ್ಲಿ ಸ್ಯಾಂಡಲ್‍ವುಡ್ ನಿರ್ದೇಶಕ ಎ.ಪಿ.ಅರ್ಜುನ್ ಭಾನುವಾರ ಹಾಸನ ಮೂಲದ ಬಿ.ಆರ್.ಅನ್ನಪೂರ್ಣ ಜತೆ ಸರಳವಾಗಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

ಲಾಕ್‍ಡೌನ್ ಹಿನ್ನೆಲೆಯಲ್ಲಿ ಅರ್ಜುನ್ ಮದುವೆಗೆ ಸ್ಯಾಂಡಲ್‍ವುಡ್ ಕಲಾವಿದರು ಬರಲು ಸಾಧ್ಯವಾಗಿಲ್ಲ. ಆದರೆ ಕೆಲವೇ ಆಪ್ತರ ಸಮ್ಮುಖದಲ್ಲಿ ಅರ್ಜುನ್ ಅನ್ನಪೂರ್ಣ ಅವರನ್ನು ವರಿಸಿದರು.  ಈ ನವ ಜೋಡಿಗೆ ನಟ ಧ್ರುವ ಸರ್ಜಾ ಮತ್ತು ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ಸೇರಿದಂತೆ ಕೆಲ ಕಲಾವಿದರು ಭಾಗಿಯಾಗಿ ಶುಭಾ ಹಾರೈಸಿದರು.

ತಂಗಿಗಾಗಿ ಸಿನಿಮಾದಲ್ಲಿ ಗೀತರಚನೆಕಾರನಾಗಿ ಚಿತ್ರರಂಗಕ್ಕೆ ನಿರ್ದೇಶಕ ಎ.ಪಿ.ಅರ್ಜುನ್ ಎಂಟ್ರಿ ಕೊಟ್ಟಿದ್ದಾರೆ. ಅರ್ಜುನ್ ಅವರು ‘ಅಂಬಾರಿ’, ‘ಅದ್ದೂರಿ’, ‘ಐರಾವತ’, ಮತ್ತು ‘ರಾಟೆ’ ಸಿನಿಮಾಗಳಲ್ಲಿ ನಿರ್ದೇಶಿಸುವ ಮೂಲಕ ಹೆಸರುಗಳಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

ಗೀತರಚನೆಕಾರರಾಗಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದು, ಸಹಾಯಕ ನಿರ್ದೇಶಕನಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.  ಕಳೆದ ವರ್ಷ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಕಂಡಿತ್ತು. ಈ ಚಿತ್ರದಲ್ಲಿ ನಾಯಕನಾಗಿ ವಿರಾಟ್ ಮತ್ತು ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು.

ಇನ್ನು ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಸಿನಿಮಾಕ್ಕೂ  ಅರ್ಜುನ್‌ ಅವರೇ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅದು ಏನೆ ಇರಲಿ ಕೊರೊನಾ ವೈರಸ್‌ನಿಂದ ಉಂಟಾಗಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಸೇರಬೇಕಿದ್ದ ಸ್ಯಾಂಡಲ್‌ವುಡ್‌ ತಾರೆಯರ ಮದುವೆ ಸಮಾರಂಭಗಳು ಕೇವಲ ಬೆರಳೆಣಿಕೆಯ ಜನರ ಸಮ್ಮುಖದಲ್ಲಿ ನೆರವೇರುತ್ತಿದ್ದು ಅಭಿಮಾನಿಗಳಲ್ಲೂ ಬೇಸರ ಮೂಡಿಸುತ್ತಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!