ಬೆಂಗಳೂರು: ವಿಶ್ವಮಾರಿ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 445 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 11005 ಏರಿಕೆಯಾಗಿದೆ.
ಕೆಲ ದಿನಗಳಿಂದ ಕೊರೊನಾಗೆ ಮೃತಪಡುತ್ತಿರುವ ಸಂಖ್ಯೆ ಏರುತ್ತಲೇ ಇದ್ದು ಇಂದು ಕೂಡ 10 ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತ ಸಂಖ್ಯೆ 184ಕ್ಕೆ ಏರಿಕೆ ಆಗಿದೆ. (ಅನ್ಯಕಾರಣಕ್ಕೆ ನಾಲ್ವರು ಸೇರಿ).
ಬೆಂಗಳೂರು ಮೂರು, ಕೋಲಾರ, ಧಾರವಾಡ, ಶಿವಮೊಗ್ಗ, ಬಾಗಲಕೋಟೆ, ಬೀದರ್, ಕಲಬುರಗಿ ಮತ್ತು ಬಳ್ಳಾರಿಯಲ್ಲಿ ತಲಾ ಒಬ್ಬೊಬ್ಬರು ವಿಶ್ವಮಾರಿಗೆ ಬಲಿಯಾಗಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
24 ಗಂಟೆಗಳಲ್ಲಿ ರಾಜ್ಯದಲ್ಲಿ 246 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 6916 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇನ್ನು 3905 ಸಕ್ರಿಯ ಪ್ರಕರಣಗಳಿವೆ. 178 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕಂಡುಬಂದಿರುವ 445 ಹೊಸ ಪ್ರಕರಣಗಳಲ್ಲಿ65 ಮಂದಿ ಹೊರರಾಜ್ಯ ಮತ್ತು 21 ಮಂದಿ ಅಂತಾರಾಷ್ಟ್ರ ಪ್ರಯಾಣದ ಇತಿಹಾಸ ಹೊಂದಿದ್ದಾರೆ.
ಇಂದು ಬೆಂಗಳೂರಿನಲ್ಲಿ 144, ಚಾಮರಾಜನಗರ 11, ಮಂಡ್ಯ 6, ಶಿವಮೊಗ್ಗ 6, ಬಾಗಲಕೋಟೆ 6, ಮೈಸೂರು 5, ಕೊಡಗು 4, ವಿಜಯಪುರ 2, ಬೀದರ್, ಬೆಳಗಾವಿ, ದಾವಣಗೆರೆ, ರಾಮನಗರ, ಚಿತ್ರದುರ್ಗ ತಲಾ 1, ದಕ್ಷಿಣ ಕನ್ನಡ 33, ಬಳ್ಳಾರಿ 47, ಕಲಬುರಗಿ 42, ಗದಗ 12, ಉಡುಪಿ 9, ಕೋಲಾರ 6, ತುಮಕೂರು, ಹಾವೇರಿ ತಲಾ ಎರಡು ಸೋಂಕಿತರು ಸೇರಿ ರಾಜ್ಯದಲ್ಲಿ 445 ಮಂದಿಯನ್ನು ಸುತ್ತಿಕೊಂಡಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail