NEWSನಮ್ಮರಾಜ್ಯ

ಆಂಬುಲೆನ್ಸ್‌ಗೆ ಕಾದು 7 ಗಂಟೆ ರಸ್ತೆಯಲ್ಲೇ ನಿಂತ ಕೊರೊನಾ ಪಾಸಿಟಿವ್‌ ಪೊಲೀಸ್‌

ಸಿಟಿ ಮಾರ್ಕೆಟ್‌ ಪೊಲೀಸ್‌ ಠಾಣೆ ವಾಹನ ಚಾಲಕ, ಎಎಸ್‌ಐಗೆ ಕೊರೊನಾ ಸೋಂಕು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಿಟಿ ಮಾರುಕಟ್ಟೆ ಪೊಲೀಸ್‌ ಠಾಣೆ  ಹೆಡ್‌ಕಾನ್‌ಸ್ಟೆಬಲ್‌ಗೆ ಕೊರೊನಾ ಸೋಂಕು ಇದೆ ಎಂದು ಮೊಬೈಲ್‌ ಫೋನ್‌ ಮೂಲಕ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ರೆಡಿಯಾಗಿರಿ ಎಂದು  ತಿಳಿಸಿದ ಬಿಬಿಎಂಪಿ ಅಧಿಕಾರಿಗಳು ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 3.30ರ ವರೆಗೂ ಆಂಬುಲೆನ್ಸ್‌ ಕಳುಹಿಸದೆ ರಸ್ತೆಯಲ್ಲೇ ನಿಲ್ಲಿಸಿದ್ದು, ಇದು ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಬಿಎಂಪಿ ಅಧಿಕಾರಿಗಳ ನಡೆಗೆ  ಮನನೊಂದ ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಪಬ್ಲಿಕ್‌ ಟಿವಿಗೆ ಈ ಬಗ್ಗೆ ತಿಳಿಸಿದ್ದಾರೆ. ಮಾಧ್ಯಮದವರು ಆರೋಗ್ಯ, ಕಂದಾಯ ಸಚಿವರು ಮತ್ತು ಬಿಬಿಎಂಪಿ ಆಯುಕ್ತರನ್ನು ಸಂಪರ್ಕಿಸಿ  ವಿಷಯ ತಿಳಿಸಿದ್ದರು. ಈ ಸಚಿವರು ಅಧಿಕಾರಿಗಳೆಲ್ಲರೂ ಆಂಬುಲೆನ್ಸ್‌ ಕಳುಹಿಸಿಕೊಡುವುದಾಗಷ್ಟೇ ಹೇಳಿದರು. ಆದರೆ ಆಂಬುಲೆನ್ಸ್‌ ಬರಲೇ ಇಲ್ಲ.

ಇನ್ನು ಕೊರೊನಾ ಪಾಸಿಟಿವ್‌ ಎಂಬ  ವಿಷಯ ತಿಳಿದ ಕೂಡಲೇ ಬೆಳಗ್ಗೆ 8 ಗಂಟೆಗೆ ತಿಂಡಿಯನ್ನೂ ತಿನ್ನದೇ ಮನೆಯಿಂದ ಹೊರ ಬಂದ ಕೊರೊನಾ ವಾರಿಯರ್ಸ್‌ಕೂಡ ಆಗಿರುವ ಹೆಡ್‌ಕಾನ್‌ಸ್ಟೆಬಲ್‌ ಹಸಿವಿನಿಂದಲೇ ಬೆಂಗಳೂರು ವಿವಿಯ ಜ್ಞಾನಭಾರತಿ ಅಮೀಪದ ರಸ್ತೆಯಲ್ಲೇ ನಿಂತಿದ್ದರು.

ಇತ್ತ ಫೋನ್‌ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳು ಮತ್ತೆ ಫೋನ್‌ ಮಾಡಿಲ್ಲ. ಸರಿ ಎಂದು  ಹೆಡ್‌ಕಾನ್‌ಸ್ಟೆಬಲ್‌ ಅವರೇ ಅಧಿಕಾರಿಗಳಿಗೆ ಫೋನ್‌ ಮಾಡಿದರೆ ಸದ್ಯಕ್ಕೆ ಯಾವ ಆಸ್ಪತ್ರೆಯಲ್ಲೂ ಬೆಡ್‌ ಖಾಲಿ ಇಲ್ಲ ನೀವು ಇರುವ ಮನೆಯಲ್ಲೆ ಒಂದು ಕೊಣೆಯಲ್ಲಿ ಇರಿ ಎಂದು ಹೇಳಿದ್ದಾರೆ.

ಇದರಿಂದ ಗಾಬರಿಗೊಂಡ  ಹೆಡ್‌ಕಾನ್‌ಸ್ಟೆಬಲ್‌  ಅದು ಹೇಗೆ ಸಾಧ್ಯ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಚಿಕ್ಕಮಕ್ಕಳಿದ್ದಾರೆ. ದಯಮಾಡಿ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಕೊಡದೆ ಬಿಬಿಎಂಪಿ ಅಧಿಕಾರಿಗಳು ತಮ್ಮ ಮೊಬೈಲ್‌ ಫೋನ್‌ ಮತ್ತು ಲ್ಯಾಂಡ್‌ ಲೈನ್‌ ಫೋನ್‌ಅನ್ನು ನಿಸ್ಕ್ರಿಯೆಗೊಳಿಸಿಕೊಂಡು ಸಂಪರ್ಕಕ್ಕೆ ಸಿಕ್ಕಿಲ್ಲ.

ಮುಂದೆ ಏನು ಮಾಡುವುದು ಎಂಬ  ದಿಕ್ಕು ಕಾಣದೆ ತಾವು ಕೆಲಸ ಮಾಡುತ್ತಿದ್ದ  ಸಿಟಿಮಾರುಕಟ್ಟೆ  ಪೊಲೀಸ್‌ ಠಾಣೆಯ ಇನ್‌ಸ್ಪಕ್ಟರ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇನ್‌ಸ್ಪಕ್ಟರ್‌ ಬೆಂಗಳೂರಿನಲ್ಲಿರುವ ಹಲವಾರು ಕೋವಿಡ್‌ ಆಸ್ಪತ್ರೆಗಳನ್ನು ವಿಚಾರಿಸಿದ್ದಾರೆ. ಆದರೆ ಎಲ್ಲ ಕಡೆಯಿಂದಲೂ ಬೆಡ್‌ ಖಾಲಿ ಇಲ್ಲ ಎಂಬ ಉತ್ತರ ಬಂದಿದೆ. ನಂತರ ಕೊನೆಯದಾಗಿ ರಾಮಯ್ಯ ಕೋವಿಡ್‌ ಆಸ್ಪತ್ರೆಯಲ್ಲಿ ಬೆಡ್‌ ಇದೆ ಎಂದು ತಿಳಿದು ಹೆಡ್‌ಕಾನ್‌ಸ್ಟೆಬಲ್‌  ಅವರನ್ನು ಅಲ್ಲಿಗೆ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ  ದಾಖಲಿಸಲಾಗಿದೆ. ಆದರೂ ಬಿಬಿಎಂಪಿ ಅಧಿಕಾರಿಗೂ ಏನು ಮಾಡುತ್ತಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಂಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ನೊಂದ ಹೆಡ್‌ಕಾನ್‌ಸ್ಟೆಬಲ್‌  ಆಗ್ರಹಿಸಿದ್ದಾರೆ.

ಸಿಟಿ ಮಾರುಕಟ್ಟೆಯ ಪೊಲೀಸ್‌ಠಾಣೆ  ಹೆಡ್‌ಕಾನ್‌ಸ್ಟೆಬಲ್‌ ಜತೆಗೆ ಇದೇ ಠಾಣೆಯ ಎಎಸ್‌ಐ ಒಬ್ಬರಿಗೂ ಕೊರೊನಾ ಪಾಸಿಟಿವ್‌ ಇದ್ದು ಅವರನ್ನು ರಾಮಯ್ಯ ಆಸ್ಪತ್ರೆಗೆ ಪೊಲೀಸ್‌ ಅಧಿಕಾರಿಗಳೇ ದಾಖಲಿಸಿದ್ದಾರೆ.

ಅಂದರೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಚಿವರು ಮಾತಿಗೆ ಮಾತ್ರ ಕೊರೊನಾ ಸೋಂಕಿತರಿಗೆ ಬೇಕಾದಷ್ಟು ಬೆಡ್‌ಗಳಿವೆ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರ. ಇವರಿಗೆ ಮಾನವೀಯತೆ ಅನ್ನೊಂದು ಇದೆಯೇ. ಇವರ ಕುಟುಂಬದವರಿಗೆ ಬಂದರೆ ಇದೇ ರೀತಿ ನಡೆದುಕೊಳ್ಳುತ್ತಾರೆಯೇ ಎಂದು ಜನರು ಮುಖಕ್ಕೆ ಉ… ಮಾತನಾಡುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಿ ಯಾರಿಗೂ ಮಾನವೀಯತೆ ತೋರಿಸಬೇಡಿ ನಿಮ್ಮ ಕೆಲಸವನ್ನು ನೀವು ಮಾಡಿ ಎಂದು ಆಕ್ರೋಶಭರಿತ ಮಾತುಗಳಿಂದ ಆಗ್ರಹಿಸುತ್ತಿದ್ದಾರೆ.

1 Comment

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್