ಬೆಂಗಳೂರು: ಕೊರೊನಾ ವಿಶ್ವಮಾರಿಗೆ ತತ್ತರಿಸಿರುವ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳು ಶೇ.50ರಷ್ಟು ನೌಕರರನ್ನು ನಾಲ್ಕು ತಿಂಗಳು ವೇತನ ರಹಿತ ಕಡ್ಡಾಯ ರಜೆ ಮೇಲೆ ಕಳುಹಿಸಲು ನಾಲ್ಕು ನಿಗಮಗಳು ಮುಂದಾಗಿವೆ.
ಈ ಸಂಬಂಧ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದು, ಇದರಿಂದ ಸುಮಾರ 60 ಸಾವಿರ ನೌಕರರಿಗೆ ಕಡ್ಡಾಯ ರಜೆ ನೀಡುವುದಾಗಿ ತಿಳಿಸಿದೆ. ಇದರಲ್ಲಿ ಭದ್ರತ ಸಿಬ್ಬಂದಿ ಸೇರಿ ಹೊರಗುತ್ತಿಗೆ ನೌಕರರನ್ನು ಕೈಬಿಡಲು ಅಂದರೆ ನಾಲ್ಕು ತಿಂಗಳವರೆಗೆ ರಜೆ ಮೇಲೆ ಕಳುಹಿಸಲು ನಿರ್ಧಿಸಿದೆ.
ಇನ್ನು ಸಾರಿಗೆ ನಾಲ್ಕು ನಿಗಮಗಳ ನೌಕರರಿಗೆ ಸರಿಸುಮಾರು 656 ಕೋಟಿ ರೂ. ವೇತನವನ್ನು ತಿಂಗಳಿಗೆ ನಿಗಮ ಭರಿಸುತ್ತಿತ್ತು. ಆದರೆ ಕೊರೊನಾ ಸೋಂಕಿನ ಭಯದಲ್ಲಿ ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸುವಲ್ಲಿ ಹಿಂದೆಟು ಹಾಕಿದ್ದರಿಂದ ನಷ್ಟದಲ್ಲೇ ಇಂದಿಗೂ ಕೂಡ ಸಂಚರಿಸುತ್ತಿವೆ. ಹೀಗಾಗಿ ಸರ್ಕಾರ ತನ್ನ ಬೊಕ್ಕಸದಿಂದ ನೌಕರರಿಗೆ ವೇತನವನ್ನು ನೀಡಲಾಗುತ್ತಿತ್ತು.
ಇನ್ನು ಮುಂದೆ ಸರ್ಕಾರದ ಖಜಾನೆಯಲ್ಲೂ ಹಣವಿಲ್ಲದಿರುವುದರಿಂದ ಸಾರಿಗೆ ನೌಕರರಿಗೆ ವೇತನ ನೀಡಲು ಕಷ್ಟಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ನೌಕರರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಒಂದು ವೇಳೆ ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದರೆ 60 ಸಾವಿರ ನೌಕರರು ವೇತನ ರಹಿತ ಕಡ್ಡಾಯ ರಜೆ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ.
ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರ ಉಡಾಫೆ ಹೇಳಿಕೆ
ಈ ಬಗ್ಗೆ ಸ್ಪಷ್ಟನೆ ಕೇಳಲು ವಿಜಯಪಥ ನ್ಯೂಸ್ ಡೆಸ್ಕ್‌ಯಿಂದ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸಿದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿರುವ ಮುಖ್ಯ ಸಂಚಾರ ವ್ಯವಸ್ಥಾಪಕ (CTM) ರಾಜೇಶ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಲು ನಿರಾಕರಿಸಿದರು. ಅಲ್ಲದೆ ಇದನ್ನು ನಿಮಗೆ ಹೇಳಿದವರನ್ನೇ ಕೇಳಿ ಈ ರೀತಿ ಯಾರು ಹೇಳಿದರು ಎಂದು ನಮ್ಮನ್ನೇ ಪ್ರಶ್ನಿಸಿದ್ದು ಅಲ್ಲದೆ ಉಡಾಫೆ ಉತ್ತರನೀಡಿ ಫೋನ್ ಕರೆಯನ್ನು ಸ್ಥಗಿತಗೊಳಿಸಿದರು. ಅದರೆ ಈ ಅಧಿಕಾರಿ ಒಂದು ಮಾಧ್ಯಮಕ್ಕೆ ಸರಿಯಾದ ಹೇಳಿಕೆ ಕೊಡದೆ ಒಂದು ರೀತಿ ಉಡಾಫೆ ಉತ್ತರ ನೀಡುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.
Hegadru madu korona control madu anda age aythu