NEWSನಮ್ಮಜಿಲ್ಲೆವಿಜ್ಞಾನ

ಕಸ ನಿರ್ವಹಣೆಗೆ  ಬಳಕೆದಾರರ ಶುಲ್ಕ ಸಂಗ್ರಹ ಎಎಪಿ ಕಿಡಿ

ಬಿಬಿಎಂಪಿ ಆದೇಶ ಹಿಂಪಡೆಯದಿದ್ದರೆ ಕರ ನಿರಾಕರಣೆ ಚಳವಳಿ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಸ ನಿರ್ವಹಣೆಗಾಗಿ ಆಸ್ತಿ ತೆರಿಗೆ ಜತೆ ಉಪಕರ (ಸೆಸ್‌) ವಿಧಿಸುವುದರ ಜತೆಗೆ ಬಳಕೆದಾರರ ಶುಲ್ಕ ಸಂಗ್ರಹಿಸಲು ಹೊರಟಿರುವ ಬಿಬಿಎಂಪಿ ಮತ್ತೆ ಸಾರ್ವಜನಿಕರನ್ನು ಸುಲಿಗೆ ಮಾಡಲು ಹೊರಟಿದೆ. ಬಿಬಿಎಂಪಿಯ ಈ  ತೀರ್ಮಾನವನ್ನು ಆಮ್‌ಆದ್ಮಿ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಈ ಕೂಡಲೇ ಈ ಆದೇಶವನ್ನು ಹಿಂಪಡೆಯದೇ ಹೋದರೆ ಕರ ನಿರಾಕರಣೆ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಆಮ್‌ಆದ್ಮಿ ಪಕ್ಷದ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ  ಶಾಂತಲಾ ದಾಮ್ಲೆ  ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿಗಿಂತಲೂ ದೊಡ್ಡ ವಿಸ್ತೀರ್ಣದ ನ್ಯೂಡೆಲ್ಲಿ ನಗರದ ಕಸ ನಿರ್ವಹಣೆಗೆ ವಾರ್ಷಿಕ ₹ 250 ಕೋಟಿ ಖರ್ಚು ಮಾಡಲಾಗುತ್ತಿದೆ. ಆದರೆ ಬಿಬಿಎಂಪಿ ಮಾತ್ರ ವರ್ಷಕ್ಕೆ ₹1000 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡುತ್ತಿದೆ ಎಂದು ಜನರನ್ನು ನಂಬಿಸುತ್ತಾ ವಂಚಿಸುತ್ತಿದೆ, ಕಸದಲ್ಲೂ ಕೊಳ್ಳೆ ಹೊಡೆಯುತ್ತಿದೆ ಎಂದು ದೂರಿದ್ದಾರೆ.

ಕಸದಿಂದ ಅನೇಕ ರಾಜ್ಯಗಳು, ಆದಾಯವನ್ನು ಪಡೆಯುತ್ತಿವೆ. ಇಂತಹ ಅವಕಾಶಗಳು ಇದ್ದರೂ ಪ್ರತಿ ಮನೆಗೆ ತಿಂಗಳಿಗೆ  ₹ 200  ಶುಲ್ಕ ವಿಧಿಸುತ್ತಿರುವ ಬಿಬಿಎಂಪಿಯ ನಡೆ ಅವೈಜ್ಞಾನಿಕ ಹಾಗೂ ಅಮಾನವೀಯ ಎಂದರು.

ಅತ್ಯಂತ ಹೆಚ್ಚು ಕಸ ಉತ್ಪಾದಿಸುವ ಹೋಟೆಲ್, ಮದುವೆ ಮಂಟಪ, ವ್ಯಾಪಾರಿ ವಲಯಗಳಿಗೆ ಮತ್ತು ವಸ್ತುಪ್ರದರ್ಶನ ಸ್ಥಳದಲ್ಲಿ ನಡೆಯುವ ತಾತ್ಕಾಲಿಕ ಮನರಂಜನಾ ಕಾರ್ಯಕ್ರಮಗಳಿಗೆ, ಸಮುದಾಯ ಭವನಗಳಿಗೆ ಅತ್ಯಂತ ಕಡಿಮೆ ಶುಲ್ಕ ನಿಗದಿ ಪಡಿಸಿ, ಜನರ ಜೇಬಿಗೆ ಮತ್ತೆ ಕತ್ತರಿ ಹಾಕುವ ಬದಲು ಈಗ  ವಿಧಿಸಿರುವ ಕಡಿಮೆ‌ ಶುಲ್ಕವನ್ನು ಮತ್ತಷ್ಟು ಹೆಚ್ಚಳ ಮಾಡಬೇಕು ಎಂದು ತಿಳಿಸಿದ್ದಾರೆ.

ಮತ್ತೊಮ್ಮೆ‌ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ‌ ಅಭಿಪ್ರಾಯ ಪಡೆದು ಮುಂದುವರೆಯಬೇಕಾಗಿ ಆಮ್‌ಆದ್ಮಿ ಪಕ್ಷ ಆಗ್ರಹಿಸುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಕರ ನಿರಾಕರಣೆ ಚಳವಳಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್