NEWSನಮ್ಮಜಿಲ್ಲೆ

ಕ್ವಾರಂಟೈನ್‌ನಲ್ಲಿದ್ದ ಹೊಂಗಸಂದ್ರದ ಮಹಿಳೆ ಸಾವು, ವೈದ್ಯರಲ್ಲಿ ಹೆಚ್ಚಿದ ಆತಂಕ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೊಂಗಸಂದ್ರದಲ್ಲಿ ಕ್ವಾರಂಟೈನ್‌‌ನಲ್ಲಿದ್ದ ಮಹಿಳೆ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾರೆ. ಆದರೆ, ಈ ಸಾವಿಗೆ ನಿಖರ ಕಾರಣ ಗೊತ್ತಾಗದಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಹೊಂಗಸಂದ್ರದಲ್ಲಿ ವಾರದ ಹಿಂದೆ ಮಹಿಳೆಯನ್ನು ಕೊರೊನಾ ಸೋಂಕು ತಗುಲಿರಬಹುದು ಎಂಬ ಅನುಮಾನದಿಂದ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ, ಜಯನಗರ ಆಸ್ಪತ್ರೆಗೆ ದಾಖಲಿಸಿ ಕೊರೊನಾ ಪರೀಕ್ಷೆಗೂ ಒಳಪಡಿಸಲಾಗಿತ್ತು. ಆದರೆ, ವೈದ್ಯರು ವರದಿಗಾಗಿ ಕಾಯುತ್ತಿದ್ದಾರೆ. ಆ ವರದಿ ಬರುವ ಮುನ್ನವೇ ಮಹಿಳೆ ಅಸುನೀಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.

ಈ ಮಹಿಳೆಗೆ ಕೊರೊನಾ ಪಾಸಿಟಿವ್‌ ಇತ್ತೆ ಇದರಿಂದಲೇ ಮೃತಪಟ್ಟರೆ ಅಥವಾ ಇನ್ನಾವುದಾದರೂ ಕಾಯಿಲೆ ಇತ್ತೆ ಎಂಬ ಅನುಮಾನ ಈಗ ವೈದ್ಯರನ್ನು ಕಾಡುತ್ತಿದೆ. ಜತೆಗೆ ಕೊರೊನಾ ಪಾಸಿಟಿವ್‌ ಆಗಿದ್ದರೆ ಆಕೆಯ ಮೊದಲ ಸಂಪರ್ಕದಲ್ಲಿವರು ಮತ್ತು ವೈದ್ಯರನ್ನು ಕ್ವಾರಂಟೈನ್‌ ಮಾಡಬೇಕಾಗುತ್ತದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply