ಬೆಂಗಳೂರು ಬಿಟ್ಟು ಹಳ್ಳಿ ಸೇರುವ ಮಂದಿ ಬಸ್‌ಗಾಗಿ ನೂಕುನುಗ್ಗಲು
ಬಿಎಂಟಿಸಿ ಬಸ್‌ಗಳು ಖಾಲಿಖಾಲಿ l ಜನರಿಲ್ಲದೇ ಖಾಲಿ ಓಡುತ್ತಿದೆ ನಗರ ಸಾರಿಗೆ

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಒಂದು ಕಡೆ ಫುಲ್ ರಶ್ ಮತ್ತೊಂದೆಡೆ ಖಾಲಿ ಖಾಲಿ. ಅಂದರೆ ನಗರದಿಂದ ಹೊರ ಜಿಲ್ಲೆಗಳಿಗೆ ಹೊರಡುವ ಮಂದಿ ಹೆಚ್ಚಾಗುತ್ತಿದ್ದಾರೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಮತ್ತೊಂದೆಡೆ ಬಿಎಂಟಿಸಿ ಬಸ್‌ಗಳ ಸಂಚಾರವೂ ಇದ್ದು, ಈ ಬಸ್‌ಗಳು ಪ್ರಯಾಣಿಕರಿಲ್ಲದೆ ಸಮಸ್ಯೆ ಎದುರಿಸುತ್ತಿವೆ. ಖಾಲಿಖಾಲಿಯಾಗಿಗೇ ಓಡಾಡುವ ಪರಿಸ್ಥಿತಿ ಬಂದಿದ್ದು, ಸಾರಿಗೆ ಸಿಬ್ಬಂದಿ ಗಂಟೆಗಟ್ಟಲೇ ನಿಲ್ದಾಣಗಳಲ್ಲಿ ಕಾದರೂ ಪ್ರಯಾಣಿಕರ ಕೊರತೆ ಹೆಚ್ಚಾಗುತ್ತಲೇ ಇದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ಇದರಿಂದ ಬಿಎಂಟಿಸಿ ಚಾಲಕ ನಿರ್ವಾಹಕರು ಪ್ರಯಾಣಿಕರಿಲ್ಲದೆ ತಮ್ಮ ನಿಗದಿತ ರೂಟ್‌ಗಳಲ್ಲಿ ಖಾಸಿಯಾಗಿಯೇ ಬಸ್‌ಗಳನ್ನು ಓಡಿಸಬೇಕಾಗಿದೆ.
ಇದಕ್ಕೆ ಮುಖ್ಯ ಕಾರಣವೂ ಇದೆ. ಅದೇನೆಂದರೆ, ನಿನ್ನೆ ಮತ್ತು ಮೊನ್ನೆ ಎರಡು ದಿನದಲ್ಲಿ ರಾಜ್ಯದಲ್ಲಿ ಒಟ್ಟು 258 ಕೊರೊನಾ ಪಾಸಿಟಿವ್ ಆಗಿದ್ದು, ಅದಕ್ಕೆ ಹೆದರಿರುವ ಜನತೆ ಬಸ್‌ಗಳಲ್ಲಿ ಪ್ರಯಾಣ ಮಾಡಲು ಹಿಂದೇಡು ಹಾಕುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ಬಸ್‌ನಲ್ಲಿ ಪ್ರಯಾಣಿಸುವ ನಾಗರಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಜಸರ್ ಮಾಡಬೇಕು ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿರುವ ಆದೇಶವನ್ನು ಸಾರಿಗೆ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ಜತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲಿಯೂ ಅಧಿಕಾರಿಗಳು ಎಡವಿದ್ದಾರೆ. ಇದರಿಂದ ಜನರು ಬಸ್‌ಗಳಲ್ಲಿ ಪ್ರಯಾಣಿಸಲು ಮುಂದಾಗುತ್ತಿಲ್ಲ.
ಆದರೆ ಹೊರ ಜಿಲ್ಲೆಗಳಿಗೆ ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ತೆರಳುವ ಮಂದಿ ನಿನ್ನೆ ರಾತ್ರಿಯಿಂದಲೇ ಮೆಜೆಸ್ಟಿಕ್‌ನಲ್ಲಿ ಬಸ್‌ಗಾಗಿ ಕಾದು ಕುಳಿತ್ತಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail