ಬೆಂಗಳೂರು: ಬಾನಂಗಳದಲ್ಲಿ ನೆರಳು ಬೆಳಕಿನ ಆಟ ಬೆಳಗ್ಗೆ 10.13ರಿಂದ ಆರಂಭವಾಗಿದೆ. ಈಗಾಗಲೇ ಅಬುದಾಬಿಯಲ್ಲಿ ಶೇ.48ರಷ್ಟು ಗ್ರಹಣ ಗೋಚರಿಸಿದೆ. ಇನ್ನು ಬೆಳಗಳೂರು ಮತ್ತು ಬಳ್ಳಾರಿಯಲ್ಲಿ ಶೇ.06 ಮತ್ತು ಶೇ.09ರಷ್ಟು ಸೂರ್ಯನನ್ನು ಆವರಿಸಿಕೊಂಡಿದೆ.
ಬೆಳಗ್ಗೆ 10.55ರಲ್ಲಿ ಕಂಡದ್ದು
ಬೆಳಗ್ಗೆ 11.06ರಲ್ಲಿ ಕಂಡದ್ದು
ಇನ್ನು ನಮ್ಮ ಕಗೋಳ ವಿಜ್ಞಾನಿಗಳು ಹೇಳುವ ಪ್ರಕಾರ ಇದು ಒಂದು ಪ್ರಕೃತಿಯಲ್ಲಿ ನಡೆಯುವ ಕಾಯಕವಾಗಿದೆ. ಜತೆಗೆ ಇದನ್ನು ವೈಜ್ಞಾನಿಕವಾಗಿಯೇ ನೋಡಬೇಕೆ ಹೊರತು ಭಯದಿಂದ ಅಲ್ಲ. ಆದರೆ ಕೆಲ ಮಾಧ್ಯಮಗಳು ಈ ಸೂರ್ಯ ಗ್ರಹಣವನ್ನು ಒಂದು ರೀತಿಯ ರಕ್ಕನಂತೆ ಬಿಂಬಿಸುತ್ತಿವೆ.
ಮಧ್ಯಾಹ್ನ 1ಗಂಟೆಯಲ್ಲಿ ಕಂಡದ್ದು
ಅದಕ್ಕೆ ಕೆಲ ಜ್ಯೋತಿಷಿಗಳು ಇಲ್ಲ ಸಲ್ಲದ ಭಯವನ್ನು ಹುಟ್ಟಿಸುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದು ಮೂರ್ಖ ಜ್ಯೋತಿಗಳು ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಮಾಡುತ್ತಿರುವ ಉಪಾಯ ಎಂಬುದನ್ನು ಜನ ಸಾಮಾನ್ಯರು ಅರಿತುಕೊಳ್ಳಬೇಕು.
ಕೊರೊನಾ ವಿಶ್ವಮಾರಿ ವಕ್ಕರಿಸಿರುವ ಈ ಸಮಯದಲ್ಲಿ ನಿತ್ಯದ ಜೀವನವೇ ಕಷ್ಟವಾಗಿದೆ. ಇಂಥ ವೇಳೆ ಕೆಲ ಜ್ಯೋತಿಷಿಗಳು ತಮ್ಮ ಖಜಾನೆ ತುಂಬಿಸಿಕೊಳ್ಳಲು, ಕೆಲವೊಂದು ನಾಮ ರಾಶಿಗಗಳನ್ನು ಟಾರ್ಗೆಟ್ ಮಾಡಿಕೊಂಡು ಈ ರಾಶಿಯವರು ತುಂಬ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಶಾಂತಿ ಮತ್ತು ಆಶಾಂತಿ ಮಾಡಿಸಿ ಎಂದು ಭಯ ಹುಟ್ಟುಹಾಕಿ ಜನರನ್ನು ಸುಲಿಗೆ ಮಾಡುತ್ತಾರೆ.
ಇದಕ್ಕೆ ಪ್ರಜ್ಞಾವಂತರು ಭಯಪಡದೆ ನಿಮ್ಮ ನಿತ್ಯ ಕರ್ಮಗಳನ್ನು ನಿರ್ವಿಘ್ನವಾಗಿ ಮಾಡಿಕೊಳ್ಳಿ ಎಂದು ಕಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.