ಬೆಂಗಳೂರು: ಪ್ರೀತಿಯ ಪಾಷದಲ್ಲಿ ಸಿಲುಕಿದ ಕಿರುತೆರೆ ನಟಿ ಪ್ರಿಯಕರ ಮದುವೆ ನಿರಾಕರಿಸಿದ್ದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ತಾವರೆಕೆರೆಯಲ್ಲಿ ನಡೆದಿದೆ.
ತಾವರೆಕೆರೆಯ ಕೃಷ್ಣಮೂರ್ತಿ ಲೇಔಟಿನ ನಿವಾಸಿ ಚಂದನಾ (29) ಆತ್ಮಹತ್ಯೆ ಮಾಡಿಕೊಂಡವರು. ವಿಷ ಸೇವಿಸಿದ್ದ ಚಂದನಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಕನ್ನಡ ಕಿರುತೆರೆ, ಜಾಹೀರಾತು, ಚಲನಚಿತ್ರಗಳಲ್ಲಿ ನಟಿಸುತ್ತಿದ್ದರು. ಈ ನಡುವೆ ಐದು ವರ್ಷದ ಹಿಂದೆ ದಿನೇಶ್ ಎಂಬುವರ ಪರಿಚಯವಾಗಿದ್ದು, ಆತನ ಜತೆ ಪ್ರೇಮಾಂಕುರವಾಗಿದೆ. ಇದನ್ನೆ ಗಾಳವಾಗಿ ಮಾಡಿಕೊಂಡ ದಿನೇಶ್ ಚಂದನಾಳಿಂದ ಲಕ್ಷಾಂತರ ರೂ. ಪೀಕಿದ್ದಾನೆ. ನಂತರ ಈಕೆಯನ್ನು ನಿರ್ಲಕ್ಷ್ಯ ಮಾಡಿದ್ದಾನೆ. ಇದರಿಂದ ಬೇಸತ್ತ ಈಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವನೆಯ ಸೆಲ್ಫಿ ವಿಡಿಯೋ ಮಾಡಿರುವ ಚಂದನಾ ತಮ್ಮ ಪ್ರಿಯಕರ ದಿನೇಶ್ ಎಂಬುವರ ಮೇಲೆ ಆರೋಪ ಮಾಡಿದ್ದಾರೆ. ದಿನೇಶ್ ಸದ್ಯ ನಾಪತ್ತೆಯಾಗಿದ್ದಾನೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಚಂದನಾ ವಾಸವಿದ್ದ ಬೆಂಗಳೂರು ಮನೆಗೆ ದಿನೇಶ್ ಆಗಾಗ ಬರುತ್ತಿದ್ದ. ಮದುವೆ ಪ್ರಸ್ತಾಪ ಬಂದಾಗ ಮಾತ್ರ ಒಲ್ಲೆ ಎನ್ನುತ್ತಿದ್ದ. ಲಕ್ಷಾಂತರ ದುಡ್ಡು ಪಡೆದಿದ್ದ ದಿನೇಶ್ ಮದುವೆ ಬಗ್ಗೆ ನಿರಾಕರಿಸುತ್ತಿರುವುದರಿಂದ ಅನುಮಾನಗೊಂಡ ಆಕೆ ಈ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ನಂತರ ಚಂದನಾ ಕುಟುಂಬಸ್ಥರು ಮದುವೆ ಪ್ರಸ್ತಾಪ ಮುಂದಿಟ್ಟುಕೊಂಡು ದಿನೇಶ್ ಮನೆಗೆ ಹೋಗಿದ್ದಾರೆ. ಆದರೆ, ದಿನೇಶ್ ತಾಯಿ ಗಾಯತ್ರಿ, ಮಾವ ದಯಾನಂದ ಎಂಬುವರು ಚಂದನಾಳ ನಡವಳಿಕೆ ಸರಿಯಿಲ್ಲ, ನಿಮ್ಮ ಹುಡುಗಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿ ಅವಮಾನ ಮಾಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇದರಿಂದ ನೊಂದ ಚಂದನಾ ಈ ಬಗ್ಗೆ ದಿನೇಶ್ಗೆ ಪ್ರಶ್ನಿಸಿದ್ದಾರೆ. ಆದರೆ, ದಿನೇಶ್ ಕೊಟ್ಟ ಉತ್ತರ ಚಂದನಾಗೆ ತೃಪ್ತಿ ತಂದಿಲ್ಲ, ಇನ್ನು ಮಾತುಕತೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ತೀವ್ರವಾಗಿ ನೋವಿನಲ್ಲಿ ಕಣ್ಣೀರಿಡುತ್ತಾ ಚಂದನಾ ವಿಷ ಸೇವಿಸಿದ್ದಾರೆ.
ದಿನೇಶ್, ಈತನ ಅಪ್ಪ, ಅಮ್ಮ, ಮಾವ ಹಾಗೂ ಮತ್ತೊಬ್ಬ ಕುಟುಂಬಸ್ಥರು ಸೇರಿ ಐವರ ವಿರುದ್ಧ ಸದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಸಲಾಗಿದೆ. ದುಡ್ಡು ಪಡೆದು ವಂಚನೆ, ಮದುವೆಯಾಗುವುದಾಗಿ ನಂಬಿಸಿ ಮೋಸ, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಈ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಚಂದನಾ ಅವರ ಮಾವ ಸಂತೋಷ್ ಹೇಳಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail