ಚಾಮರಾಜನಗರ: ಪಟ್ಟಣದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಅಧಿಕಾರಿಯೋರ್ವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ವಿಭಾಗೀಯ ಕಚೇರಿ, ಉಪವಿಭಾಗ ಕಚೇರಿ ಹಾಗೂ ವಿಭಾಗೀಯ ಉಗ್ರಾಣದ ಕಾರ್ಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.
ಕಳೆದ ಒಂದು ವಾರದಲ್ಲಿ ಗ್ರಾಹಕರು, ಗುತ್ತಿಗೆದಾರರು ಸದರಿ ಕಚೇರಿಯ ಕಂದಾಯ ಶಾಖೆಗೆ ಭೇಟಿ ನೀಡಿದ್ದಲ್ಲಿ ತಮ್ಮನ್ನು ತಾವೇ ಪ್ರತ್ಯೇಕಿಸಿಕೊಳ್ಳಬೇಕು. ಯಾವುದಾದರೂ ಕೊರೊನಾ ರೋಗಲಕ್ಷಣಗಳು ಕಂಡುಬಂದಲ್ಲಿ ಅಪ್ತಮಿತ್ರ ಸಹಾಯವಾಣಿ ಸಂಖ್ಯೆ 14410 ಅಥವಾ ಜಿಲ್ಲಾಡಳಿತದ ಕಂಟ್ರೋಲ್ ದೂರವಾಣಿ ಸಂಖ್ಯೆ 1077ಗೆ ಕರೆ ಮಾಡುವಂತೆ ಕೋರಲಾಗಿದೆ.
ಜೂನ್ 26ರಂದು ಸದರಿ ಕಚೇರಿಯನ್ನು ಸ್ಯಾನಿಟೈಸರ್ ಮುಖಾಂತರ ಶುಚಿಗೊಳಿಸಿ ಮುಚ್ಚಲಾಗಿದೆ. ಕಚೇರಿಗಳು ಪುನರಾರಂಭವಾಗುವ ದಿನಾಂಕವನ್ನು ಸದ್ಯದಲ್ಲೆ ತಿಳಿಸಲಾಗುವುದು. ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳು ಎಂದಿನಂತೆ ಜಾರಿಯಲ್ಲಿರುತ್ತವೆ. ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಕೇಂದ್ರೀಯ ದೂರು ನಿರ್ವಹಣಾ ವಿಭಾಗದ ಉಚಿತ ದೂರವಾಣಿ ಸಂಖ್ಯೆ 1912ಗೆ ಕರೆ ಮಾಡಿ ಪರಿಹರಿಸಿಕೊಳ್ಳಬೇಕು ಎಂದು ಸೆಸ್ಕ್‌ನ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.