Please assign a menu to the primary menu location under menu

NEWSಕೃಷಿನಮ್ಮರಾಜ್ಯ

ಕಾಡಂಚಿನ ಗ್ರಾಮ ಕಡಬೂರಿಗೆ ಸಚಿವ ಆನಂದ್‌ ಸಿಂಗ್‌ ಭೇಟಿ

ಹುಲಿ ದಾಳಿ ಹಿನ್ನೆಲೆ l ದಾಳಿ ನಡೆದ ಸ್ಥಳ ಪರಿಶೀಲಿಸಿ ಅಹವಾಲು ಆಲಿಕೆ

ವಿಜಯಪಥ ಸಮಗ್ರ ಸುದ್ದಿ

ಚಾಮರಾಜನಗರ: ಒಂದು ತಿಂಗಳಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಸು, ಕುರಿ, ಮೇಕೆ ಸೇರಿದಂತೆ 19 ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿದ್ದು ಈ  ಹಿನ್ನೆಲೆಯಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ  ಆನಂದ್ ಸಿಂಗ್ ಬಂಡೀಪುರ ಹುಲಿ ಯೋಜನೆಯ ಕುಂದಗೆರೆ ವಲಯದ ಕಾಡಂಚಿನ ಗ್ರಾಮ ಕಡಬೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಕುಂದಗೆರೆ, ಕಡಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹುಲಿದಾಳಿ ನಿರಂತರವಾಗಿ ನಡೆಯುತ್ತಿರುವುದರಿಂದ ದಾಳಿ ನಡೆದ ಅರಣ್ಯ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ಮಾಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಶಾಸಕ ಸಿ.ಎಸ್. ನಿರಂಜನಕುಮಾರ್ ಅವರೊಂದಿಗೆ ಆಗಮಿಸಿದ ಅರಣ್ಯ ಸಚಿವರಾದ ಆನಂದ್ ಸಿಂಗ್ ಅವರು ಮೊದಲಿಗೆ ಅ ಭಾಗದ ಜನರಿಂದ ಅಹವಾಲುಗಳನ್ನು ಆಲಿಸಿದರು.

ಒಂದು ತಿಂಗಳಿಂದ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದೆ. ಇದರಿಂದ ವ್ಯವಸಾಯಕ್ಕೆ ಕಷ್ಟವಾಗುತ್ತಿದೆ. ಆಹಾರ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಜನರು ಭಯಭೀತರಾಗಿದ್ದಾರೆ. ಹುಲಿಯನ್ನು ಸೆರೆ ಹಿಡಿದು ಬೇರೆಡೆ ಬಿಡಬೇಕು. ಹುಲಿಯಲ್ಲದೆ ಇತರೆ ಪ್ರಾಣಿಗಳಿಂದ ಜಾನುವಾರು ದಾಳಿಗಳು ಆಗಾಗ್ಗೆ ಸಂಭವಿಸುತ್ತಿವೆ. ಪ್ರಾಣಿಗಳು ನಾಡಿಗೆ ಬರದಂತೆ ಕಾಡಂಚಿನಲ್ಲಿ ಬ್ಯಾರಿಕೇಡ್, ರೈಲ್ವೆಕಂಬಿಗಳನ್ನು ಹಾಕಬೇಕು. 15 ಅಡಿಗಳ ಚೈನ್‍ಲಿಂಕ್‍ಮೆಸ್‍ನ್ನು ಅಳವಡಿಸಬೇಕು. ಸರ್ಕಾರ ಮಾನವ-ಕಾಡು ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟಬೇಕು. ಇದರಿಂದ ಶಾಶ್ವತ ಪರಿಹಾರ ಬೇಕು ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಸಚಿವರು ಮಾತನಾಡಿ, ಹುಲಿ ನಿರಂತರವಾಗಿ ದಾಳಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪದೇಪದೆ ಹುಲಿ ದಾಳಿಯಿಂದ ಈಗಾಗಲೇ ಹಲವು ಜಾನುವಾರುಗಳು ಸಾವನ್ನಪ್ಪಿವೆ. ಜಾನುವಾರುಗಳ ಮಾಲೀಕರಗೆ ಸರ್ಕಾರದಿಂದ ಅವರ ಬೇಡಿಕೆಗನುಗುಣವಾಗಿ ಪರಿಹಾರ ಒದಗಿಸಲಾಗುವುದು ಎಂದರು.

ಕಾಡುಪ್ರಾಣಿಗಳಿಂದ ದಾಳಿಗೊಳಗಾದ ಹಸುವಿಗೆ ಅವುಗಳ ತಳಿ ಆಧಾರದ ಮೇಲೆ ಈ ಹಿಂದೆ 10 ಸಾವಿರ ಪರಿಹಾರ ನಿಗದಿ ಮಾಡಲಾಗಿತ್ತು. ಅಗತ್ಯಕ್ಕಿಂತ ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಿದರೆ ಮರುಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸ್ಥಳದಲ್ಲಿಯೇ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಶಾಸಕ ಸಿ.ಎಸ್. ನಿರಂಜನಕುಮಾರ್ , ತಾಲೂಕಿನ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಕುಂದಗೆರೆ, ಕಡಬೂರು, ಚಿರಕನಹಳ್ಳಿ, ಉಪಕಾರ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಹುಲಿ ದಾಳಿ ನಿರಂತರವಾಗಿ ನಡೆಯುತ್ತಿರುವುದರಿಂದ ಅವಶ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸಚಿವರಲ್ಲಿ ಮನವಿ ಮಾಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಕಾಡುಪ್ರಾಣಿಗಳಿಂದ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯುವ ಸಲುವಾಗಿ ಸರ್ಕಾರ ಅಗತ್ಯ ಕ್ರಮ ವಹಿಸಲಿದೆ. ರಾಜ್ಯದ ಅರಣ್ಯ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಲು 100 ಕೋಟಿ ರೂ. ಮಂಜೂರಾಗಿದೆ. ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಕುಂದಗೆರೆ, ಕಡಬೂರು ವಲಯದಲ್ಲಿ ಸುಮಾರು 40 ಕಿ.ಮೀ. ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಸಚಿವ ಆನಂದ್ ಸಿಂಗ್  ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಡಿ.ವೈ.ಎಸ್.ಪಿ. ಜೆ. ಮೋಹನ್, ಬಂಡೀಪುರ ಹುಲಿ ಯೋಜನೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದರ್, ಪಿಸಿ.ಸಿ.ಎಫ್ ಸಂಜಯ್ ಮೋಹನ್, ವನ್ಯಜೀವಿ ವಿಭಾಗದ ಪಿಸಿ.ಸಿ.ಎಫ್ ಅಜಯ್ ಮಿಶ್ರಾ, ಚಾಮರಾಜನಗರ ಸಿ.ಸಿ.ಎಫ್ ಮನೋಜ್‍ಕುಮಾರ್, ಮೈಸೂರು ಸಿ.ಸಿ.ಎಫ್ ಹಿರೇಲಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ಪರಮೇಶ್ವರ್, ಕುಂದಗೆರೆ ವಲಯದ ವಲಯ ಅರಣ್ಯಾಧಿಕಾರಿ ಮಂಜುನಾಥ್, ರೈತ ಮುಖಂಡರಾದ ಕಡಬೂರು ಮಂಜುನಾಥ್, ಕುಂದಗೆರೆ ಸಂಪತ್ ಇತರರುವ ಇದ್ದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

Leave a Reply

error: Content is protected !!
LATEST
ನಮ್ಮ ಕ್ಲಿನಿಕ್ ಹೆಸರಲ್ಲಿ ನೂರಾರು ಕೋಟಿ ಗುಳುಂ: ಎಎಪಿ ಉಷಾ ಮೋಹನ್ KSRTC- ಫೋನ್‌ ಪೇ ಹಗರಣ- ₹20 ಸಾವಿರ ಲಂಚ ಕೊಟ್ಟ ಡಿಸಿ, ಡಿಟಿಒ ಅಮಾನತುಮಾಡಿ: ಎಂಡಿ ಭೇಟಿ ಮಾಡಿದ ನಾಗರಾಜ್‌ ಇಂದು ಸಾರಿಗೆ ನಿಗಮಗಳಲ್ಲಿ ಚಾಲಕರ ದಿನದ ಸಂಭ್ರಮ - ಘಟಕಗಳಲ್ಲಿ ಹೂಗುಚ್ಛ ನೀಡಿ ಶುಭ ಕೋರಿದ ಸಹೋದ್ಯೋಗಿಗಳು KSRTC ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಡಿಸಿ ಬೆವರಿಳಿಸಿದ  ಉಪಲೋಕಾಯುಕ್ತರು BMTC: ಅತೀ ಶೀಘ್ರದಲ್ಲೇ ಸಂಸ್ಥೆಯ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ- ಎಂಡಿ ರಾಮಚಂದ್ರನ್‌ KKRTC ಬಸ್‌-ಟ್ರ್ಯಾಕ್ಟರ್‌ ನಡುವೆ ಡಿಕ್ಕಿ: ಯುವತಿ ಸಾವು, 18ಮಂದಿಗೆ ಗಾಯ KSRTC: ಭ್ರಷ್ಟಾಚಾರ ಬಯಲು ಮಾಡದಂತೆ ದೂರುದಾರನ ಬಾಯಿ ಮುಚ್ಚಿಸಲು ATI ಮೂಲಕ ₹20 ಸಾವಿರ ಕೊಟ್ಟರೇ ಡಿಸಿ, ಡಿಟಿಒ! ಮಗನ ಎದುರೇ ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ KSRTC ಮೆಕ್ಯಾನಿಕ್‌ ಚಾಲಕನ ನಿಯಂತ್ರಣ ತಪ್ಪಿ ಹಣ್ಣು ತರಕಾರಿ ತುಂಬಿದ ಲಾರಿ ಪಲ್ಟಿ: 14 ಜನ ಮೃತ 2026ಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿ ಸಾಧ್ಯತೆ: ರಾಜ್ಯಾಧ್ಯಕ್ಷ ಷಡಾಕ್ಷರಿ