ಚಾಮರಾಜನಗರ: ನಗರದ ಪೂರ್ವ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಠಾಣೆಯನ್ನು ಇಂದು ಮಧ್ಯಾಹ್ನ ಸೀಲ್‌ಡೌನ್ ಮಾಡಲಾಗಿದ್ದು ಕರ್ತವ್ಯದಲ್ಲಿರುವ ಇತರ ಪೊಲೀಸರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಕೋವಿಡ್ ಪರೀಕ್ಷೆ ಕಳುಹಿಸಲಾಗಿದ್ದು ವರದಿ ಬಂದ ನಂತರ ಕೊರೊನಾ ಪಾಸಿಟಿವ್ ಇನ್ನು ಎಷ್ಟು ಮಂದಿಯನ್ನು ಸುತ್ತಿಕೊಂಡಿದೆ ಎಂಬುವುದು ತಿಳಿಯಲಿದೆ.
ಹನೂರು ತಾಲೂಕಿನ 29 ವರ್ಷದ ಕಾನ್‌ಸ್ಟೆಬಲ್‌ಗೆ ಕೊರೊನಾ ಪಾಸಿಟಿವ್ ಬಂದಿರುವುದು. ಇವರು ಪುಣಜನೂರು ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಅದರಂತೆ ತಮಿಳುನಾಡು ಗಡಿಯ ಪುಣಜನೂರು ಚೆಕ್‌ಪೋಸ್ಟ್ ನಲ್ಲಿ ಇವರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನುಕೊರೊನಾ ಟೆಸ್ಟ್‌ಗೆ ಒಳಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.