CrimeNEWSಸಿನಿಪಥ

ಡ್ರಗ್ಸ್‌ ಮಟ್ಟಹಾಕುವ ಕಾರ್ಯದಲ್ಲಿ ಪುನೀತ್ ರಾಜ್​ಕುಮಾರ್‌: ಪೊಲೀಸರಿಗೆ ಸಾಥ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪುನೀತ್ ರಾಜ್​ಕುಮಾರ್ ನಟನೆಯಲ್ಲಿ ಮಾತ್ರವಲ್ಲ ಈಗ ಅವರು ನಿಜ ಜೀವನದಲ್ಲೂ ಡ್ರಗ್ಸ್‌ ಮಟ್ಟಹಾಕುವ ಕಾರ್ಯ ಮಾಡುತ್ತಿದ್ದಾರೆ. ಈ ಡ್ರಗ್ಸ್ ವಿರುದ್ಧದ ಬೆಂಗಳೂರು ನಗರ ಪೊಲೀಸರ ಹೋರಾಟದಲ್ಲಿ ಪುನೀತ್ ರಾಜ್​ಕುಮಾರ್‌ ಕೈ ಜೋಡಿಸಿದ್ದಾರೆ.

ಹೀಗಾಗಿ ‘ಯವರತ್ನ’ ಸಿನಿಮಾದಲ್ಲಿ ಡ್ರಗ್ ಮಟ್ಟ ಹಾಕಬೇಕು ಎನ್ನುವ ಸಂದೇಶ ಸಾರುವ ಜತೆಗೆ ಶಿಕ್ಷಕ ವೃತ್ತಿ ಮಾಡುತ್ತಲೇ ಡ್ರಗ್ಸ್ ಜಾಲವನ್ನು ನಾಶ ಮಾಡುವ ಕೆಲಸ ಮಾಡುತ್ತಾರೆ ಪುನೀತ್. ಅದನ್ನು ನಿಜ ಜೀವದಲ್ಲೂ ಅಳವಡಿಸಿಕೊಳ್ಳುತ್ತಿದ್ದಾರೆ ಅವರು.

ಇನ್ನು ಇತ್ತೀಚೆಗೆ ಸ್ಯಾಂಡಲ್​ವುಡ್​​ನಲ್ಲಿ ಡ್ರಗ್ಸ್ ಜಾಲ ಪತ್ತೆ ಆಗಿತ್ತು. ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಇದರಲ್ಲಿ ಕೇಳಿ ಬಂದಿತ್ತು. ಈ ಬೆಳವಣಿಗೆ ನಂತರದಲ್ಲಿ ಬೆಂಗಳೂರು ಪೊಲೀಸರು ಮಾದಕ ದ್ರವ್ಯ ವಸ್ತುಗಳನ್ನು ಮಟ್ಟಹಾಕಬೇಕು ಎಂಬ ನಿಟ್ಟಿನಲ್ಲಿ ವಿವಿಧ ಆಯಾಮಗಳಲ್ಲಿ ಪ್ರಯತ್ನಿಸುತ್ತಿದ್ದಾರೆ. ಈಗ ಆರಕ್ಷಕರ ಪ್ರಯತ್ನಕ್ಕೆ ಪುನೀತ್ ಕೂಡ ಧ್ವನಿಗೂಡಿಸಿದ್ದಾರೆ.

ಬೆಂಗಳೂರು ಸಿಟಿ ಪೊಲೀಸ್ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಡ್ರಗ್ಸ್ ಇದು ನಮ್ಮ ಸಮಾಜಕ್ಕೆ ದೊಡ್ಡ ಕಂಟಕ. ಇದಕ್ಕೆ ಯಾರೂ ಬೇಕಿದ್ದರೂ ಬಲಿ ಆಗಬಹುದು. ಆದರೆ, ಇದಕ್ಕೆ ಯಾರೂ ಬಲಿ ಆಗದಂತೆ ನೋಡಿಕೊಳ್ಳಲು ಪೊಲೀಸರ ಜತೆ ಕೈ ಜೋಡಿಸಿ. ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕು. ಡ್ರಗ್ಸ್ ತೆಗೆದುಕೊಳ್ಳಬೇಡಿ. ಜೀವ ಬಹುಮುಖ್ಯ ಎಂದು ವಿಡಿಯೋದಲ್ಲಿ ಪುನೀತ್ ಸಲಹೆ ನೀಡುತ್ತಿದ್ದಾರೆ​.

ಶಿಕ್ಷಣ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ‘ಯುವರತ್ನ’ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬಂದಿತ್ತು. ಆಗ ಕೋವಿಡ್ ಪ್ರಕರಣ ಹೆಚ್ಚಿತ್ತು. ಚಿತ್ರಮಂದಿರಗಳಲ್ಲಿ ಶೇ.50 ಭರ್ತಿಗೆ ಮಾತ್ರ ಸರ್ಕಾರ ಅವಕಾಶ ನೀಡಿತ್ತು. ಹೀಗಾಗಿ, ಸಿನಿಮಾ ಒಂದೇ ವಾರಕ್ಕೆ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಮೂಲಕ ಚಿತ್ರ ಹೆಚ್ಚು ಜನರನ್ನು ತಲುಪಿತು. ಈಗ ಪುನೀತ್ ರಾಜ್​ಕುಮಾರ್ ‘ಜೇಮ್ಸ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಅವರ ಸಾಮಾಜಿಕ ಕಳಕಳಿ ಸಾಗುತ್ತಲೇ ಇದೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ