NEWSಉದ್ಯೋಗನಮ್ಮಜಿಲ್ಲೆ

ಅಸಂಘಟಿತ ವಲಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ : ಲಕ್ಷ್ಮೀನಾರಾಯಣ್ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ವಿಶ್ವಾದ್ಯಂತ ಕೊರೊನಾ ಎರಡನೇ ಅಲೆ ರೌದ್ರ ನರ್ತನವಾಡುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಎರಡು ವಾರಗಳ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಇದರಿಂದ ರಾಜ್ಯದ ಮಧ್ಯಮ ವರ್ಗದ ಜನತೆಯ ಜೀವ ಹಾಗೂ ಜೀವನ ನಿರ್ವಹಣೆಯ ಚಿಂತಗೀಡಗಿದ್ದು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕಾರ್ಮಿಕ ಮುಖಂಡ ಪಿ.ಟಿ.ಲಕ್ಷ್ಮೀನಾರಾಯಣ್ ಒತ್ತಾಯಿಸಿದ್ದಾರೆ.

ಜೀವನಕ್ಕಿಂತ ಜೀವ ಮುಖ್ಯವಾದ ಕಾರಣ ಸರ್ಕಾರದ ನಿಲುವು ಉತ್ತಮವಾಗಿದ್ದರೂ, ಬಡವರ ಜೀವನ ನಿರ್ವಾಹಣೆಗೆ ಪರಿಹಾರ ಮಾರ್ಗೋಪಾಯಗಳನ್ನು ಒದಗಿಸುವುದು ಮುಖ್ಯವಾಗಿದೆ.

ಪುಟ್ಪಾತ್ ಹೊಟೇಲ್ ಗಳನ್ನು ನಡೆಸುವ ಬಡ ಕಾರ್ಮಿಕರು, ದಿನಗೂಲಿ ನೌಕರರು, ಚಿಕ್ಕಪುಟ್ಟ ಖಾಸಗಿ ಸಂಸ್ಥೆಗಳ ನೌಕರರು, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ವಿವಿಧ ಚಿಕ್ಕಪುಟ್ಟ ಕೆಲಸ ಕಾರ್ಯಗಳನ್ನು ನಂಬಿದವರು. ಇತ್ತ ಕೆಲಸವು ಇಲ್ಲದೆ, ನಷ್ಟ ಅನುಭವಿಸಿ ಬೀದಿಗೆ ಬಂದಂತಾಗಿದೆ.

ಅವರ ದೈನಂದಿನ ಜೀವನ ನಿರ್ವಹಣೆಗೆ ನಿತ್ಯದ ಕಾಯಕದ ಅವಲಂಬಿಸಿದ್ದು, ಉಳಿತಾಯವೆಂಬುದು ಮರಿಚಿಕೆಯೇ ಸರಿ. ಇದ್ದುದ್ದರಲ್ಲಿ ಹೇಗೋ ಜೀವನ ಸಾಗಿಸುತ್ತಿರುತ್ತಾರೆ. ಇವರು ಮತ್ತೊಮ್ಮೆ ವೃತ್ತಿ ಆರಂಭಿಸಬೇಕಾದರೆ ಸಾಲ ಮಾಡಿಯೇ ಮುಂದುವರಿಯಬೇಕು. ಇಂತಹ ಆರ್ಥಿಕ ದುಸ್ಥಿತಿಯ ಕಾರ್ಮಿಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಕುಲಕಸುಬು ಮಾಡಿಕೊಂಡು ಹಾಗೂ ಅಸಂಘಟಿತ ವಲಯದಲ್ಲಿ ಕೋಟ್ಯಂತರ ಜನತೆ ತತ್ತರಿಸಿದ್ದು, ಇವರ ನೆರವಿಗೆ ಸರ್ಕಾರಗಳು ಶೀಘ್ರ ಧಾವಿಸಬೇಕು. ಕಳೆದ ವರ್ಷದ ಲಾಕ್‌ಡೌನ್‌ನಿಂದ ಸಾಕಷ್ಟ ಉದ್ಯಮಗಳ ಕಾರ್ಮಿಕರ ಜೀವನ ಚೇತರಿಕೆ ಕಂಡಿಲ್ಲ, ಕಷ್ಟದಲ್ಲೇ ಜೀವನ ನಿರ್ವಾಹಣೆ ಮಾಡುತ್ತಿದ್ದಾರೆ.

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ