Please assign a menu to the primary menu location under menu

NEWSನಮ್ಮರಾಜ್ಯ

ಸರ್ಕಾರದ ನಿರ್ಲಕ್ಷ್ಯ- ಜನರ ಗುಳೆ: ದೂರದೂರಿಗೆ ಹೊರಟ ಜನರ ಸುಲಿಗೆಗೆ ಇಳಿದ ಖಾಸಗಿ ಬಸ್‌ಗಳು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು : ಕೊರೊನಾ ಎರಡನೇ ಮಹಾಮಾರಿ ರಾಜ್ಯದ ಜನರನ್ನು ಇನಿಲ್ಲದಂತೆ ಕಾಡುತ್ತಿದೆ. ಇನ್ನೊಂದೆಡೆ ಇದರಿಂದ ರಕ್ಷಿಸಿಕೊಳ್ಳಲು ಬೆಂಗಳೂರನ್ನು ತೊರೆದು ತಮ್ಮೂರಿನತ್ತ ಹೊರಟಿರುವ ಜನರಿಗೆ ಖಾಸಗಿ ಬಸ್‌ಗಳು ಗಾಯದ ಮೇಲೆ ಬರೆ ಎಳೆದಂತೆ 1ಸಾವಿರ ರೂ. ಟಿಕೆಟ್‌ ದರದ ಬಲಲಿಗೆ 5 ಸಾವಿರ ರೂ. ವಸೂಲಿ ಮಾಡುವ ಮೂಲಕ ಇನಷ್ಟು ಸಂಕಷ್ಟಕ್ಕೆ ದೂಡುತ್ತಿವೆ.

ಮಾನವೀಯತೆ ಮರೆತು ಪ್ರಯಾಣಿಕರ ಸುಲಿಗೆಗೆ ಇಳಿದ ಖಾಸಗಿ ಬಸ್‌ಗಳ ವಿರುದ್ಧ ಕಠೀಣ ಕ್ರಮ ಜರುಗಿಸಬೇಕಾದ ಸರ್ಕಾರ ಕಂಡು ಕಾಣದಂತೆ ಕಣ್ಣುಮುಚ್ಚಿ ಕೂಳಿತಿದೆ. ಇಂಥ ಸರ್ಕಾರವನ್ನು ಆಯ್ಕೆ ಮಾಡಿರುವ ನಾವು ಇನ್ನಾರನ್ನು ಶಪಿಸಲು ಸಾಧ್ಯ. ನಾವೇ ರಚಿಸಿದ ಸರ್ಕಾರ ನಮ್ಮ ಬೆನ್ನಿಗೇ ಚೂರಿ ಹಾಕುತ್ತಿದೆ. ನಾವು ಈಗ ಕಾಕಿಸಿಕೊಳ್ಳಲಷ್ಟೇ ಶಕ್ತರು. ಕಾರಣ ನರಸತ್ತ ನಾಮರ್ದರಂತ್ತಾಗಿರುವ ಸರ್ಕಾರ ಲೂಕಿಕೋರರಿಗೆ ಮಣೆಹಾಕಿ ಜನರ ಜೀವನ, ಜೀವದ ಜತೆ ಚಲ್ಲಾಟವಾಡುತ್ತಿದೆ.

ಇನ್ನು ನಿನ್ನೆ ಮಧ್ಯಾಹ್ನ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಮಧ್ಯಾಹ್ನ 2 ಗಂಟೆ ಬಳಿಕ ಬೆಂಗಳೂರಿನ ಬಸ್​ ನಿಲ್ದಾಣಗಳಲ್ಲಿ ಜನ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇಂದು ಕೂಡ ಮೆಜೆಸ್ಟಿಕ್​, ಸ್ಯಾಟ್​ಲೈಟ್​ ಬಸ್​ ನಿಲ್ದಾಣ, ಗೊರಗುಂಟೆ ಪಾಳ್ಯ, ಜಾಲಹಳ್ಳಿ ಕ್ರಾಸ್, 8 ನೇ ಮೈಲಿ ಬಳಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದಾರೆ. ಇಂದು ರಾತ್ರಿ 9ಗಂಟೆಯಿಂದ ಲಾಕ್​ಡೌನ್​ ಜಾರಿಯಾಗುತ್ತಿದ್ದು, ಅಷ್ಟರಲ್ಲಿ ಊರು ಸೇರಿಕೊಳ್ಳುವ ತರಾತುರಿಯಲ್ಲಿ ಹೊರಟ್ಟಿದ್ದಾರೆ.

ಸಿಕ್ಕ ಸಿಕ್ಕ ಬಸ್​ ಹಿಡಿದು ಊರು ತಲುಪುವ ಗಡಿಬಿಡಿಯಲ್ಲಿ ಜನರಿದ್ದು, ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್​ಗಳು ವಸೂಲಿಗೆ ಇಳಿದಿವೆ. ಬಸ್​ ಟಿಕೆಟ್​ ದರವನ್ನು ನಾಲ್ಕರಿಂದ ಐದು ಪಟ್ಟು ಹೆಚ್ಚಳ ಮಾಡಿವೆ. ಊರಿಗೆ ಹೋಗಲು ಬಸ್​ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಟಿಕೆಟ್​ ದರ ಕೇಳಿ ಹೌಹಾರುತ್ತಿದ್ದಾರೆ. ಮನೆಯಿಂದ ಹೊರಟು ಬಂದ ಮೇಲೆ ಮತ್ತೆ ಹಿಂತಿರುಗಲಾರದೆ ಕೇಳಿದಷ್ಟು ಹಣ ಕೊಟ್ಟು ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ.

ಬೆಂಗಳೂರಿಂದ ಶಿರಸಿಗೆ 700 ರೂಪಾಯಿ ಇದ್ದ ಟಿಕೆಟ್​ ದರ 1,900ಕ್ಕೆ ಏರಿಕೆಯಾಗಿದೆ. ಬೆಂಗಳೂರಿಂದ ಶಿವಮೊಗ್ಗಕ್ಕೆ ಸಾಮಾನ್ಯವಾಗಿ ಟಿಕೆಟ್​ ದರ 500 ರೂಪಾಯಿ. ಆದರೆ ಈಗ ಖಾಸಗಿ ಬಸ್​ಗಳಲ್ಲಿ ದರವನ್ನು ನಾಲ್ಕು ಪಟ್ಟು ಏರಿಸಿ 2,000 ರೂ.ಗೆ ಡಿಮ್ಯಾಂಡ್​ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡಕ್ಕೆ 800 ರೂ. ಇದ್ದ ಟಿಕೆಟ್​ ದರ 2,500 ರೂ.ಗೆ ಏರಿಕೆಯಾಗಿದೆ. 1,000 ರೂ. ಕೊಟ್ಟು ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಜನ ಈಗ 2,500 ರೂ. ತೆರಬೇಕಾಗಿದೆ. ಇನ್ನು ಬೆಳಗಾವಿಗೆ ಹೊರಟ್ಟಿದ್ದ ಪ್ರಯಾಣಿಕರಂತು ಟಿಕೆಟ್​ ದರ ಕೇಳಿ ಅಘಾತಕ್ಕೊಳಗಾಗಿದ್ದಾರೆ. ಸಾಮಾನ್ಯವಾಗಿ 1,000 ರೂ. ಇರುತ್ತಿದ್ದ ದರ ಈಗ ಬರೋಬ್ಬರಿ 5,000ಕ್ಕೆ ಏರಿ ಕೂತಿದೆ.

ಬೆಂಗಳೂರಿಂದ ಬೇರೆ ಜಿಲ್ಲೆಗಳಿಗೆ ಹೊರಟಿರುವ ಖಾಸಗಿ ಬಸ್​ಗಳಲ್ಲಿ 4ರಿಂದ 5 ಪಟ್ಟು ಟಿಕೆಟ್​ ದರ ಏರಿಸಲಾಗಿದೆ. ಲಾಕ್​ಡೌನ್​ ಭಯದಲ್ಲಿ ಊರು ಸೇರಬೇಕೆಂದಿದ್ದ ಜನ ದುಬಾರಿ ಟಿಕೆಟ್​ ದರದಿಂದ ಹೈರಾಣಾಗಿದ್ದಾರೆ. ನಿನ್ನೆ ರಾತ್ರಿಯೆ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರು ತೊರೆಯಲಿದ್ದು, ಇಂದು ಕೂಡ ಟಿಕೆಟ್​ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

ಇದನ್ನು ತಿಳಿದ ಮೇಲಾದರೂ ಸರ್ಕಾರ ಖಾಸಗಿ ಬಸ್‌ಗಳ ವಿರುದ್ಧ ಕಠೀಣ ಕ್ರಮ ಜರುಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್