Please assign a menu to the primary menu location under menu

NEWSದೇಶ-ವಿದೇಶನಮ್ಮರಾಜ್ಯ

ಬೆಂಗಳೂರಿಗರಿಗೆ ಕೊರೊನಾ ಶಾಕ್‌: ಬ್ರಿಟನ್‌ನಿಂದ ಬಂದ 1512 ಜನರಲ್ಲಿ 151ಮಂದಿ ಸುಳಿವು ಸಿಕ್ಕಿಲ್ಲ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ಬೆಂಗಳೂರು: ಬ್ರಿಟನ್‌ನಲ್ಲಿ ಕಾಣಿಕೊಂಡಿರುವ ಹೊಸ ಸ್ವರೂಪದ ಕೊರೊನಾದಿಂದ ಬೆಂಗಳೂರುಇಗೆ ಕಾದಿದೆಯೇ ಗಂಡಾಂತರ ಎಂಬ ಆತಂಕ ಈಗ ಇಲ್ಲಿನ ಸ್ಥಳೀಯ ನಿವಾಸಿಗಳನ್ನು ಕಾಡುತ್ತಿದೆ.

ವಿಜಯಪಥ ಹೊಸ ಆಪ್ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/details?id=manyathy.vijayapatha.app

ಹೌದು ಬ್ರಿಟನ್‌ನಿಂದ ಡಿಸೆಂಬರ್‌ ಮೊದಲನೇ ದಿನದಿಂದ ಈವರೆಗೆ 1512 ಮಂದಿ ಬೆಂಗಳೂರಿಗೆ ಬಂದಿದ್ದು, ಅವರಲ್ಲಿ 500 ಮಂದಿಗೆ ಕೊರೊನಾ ಪರೀಕ್ಷೆ ಮಾಡಿದ್ದು, ಅದರಲ್ಲಿ 11 ಜನಕ್ಕೆ ಸೋಂಕು ತಗಲಿರುವುದು ಪತ್ತೆಯಾಗಿದೆ.

ಇನ್ನು 319 ಮಂದಿಗೆ ನೆಗೆಟಿವ್‌ ವರದಿ ಬಂದಿದ್ದು, 211 ಮಂದಿ ರಿಪೂರ್ಟ್‌ ಬರಬೇಕಿದೆ. ಈ ನಡುವೆ 151 ಮಂದಿ ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯ ಒಟ್ಟು 8 ವಲಯಗಳಿಗೆ ಬ್ರಿಟನ್‌ನಿಂದ ಬಂದಿರುವವರ ವಿವರ ಇಲ್ಲಿದೆ. ಅದರಂತೆ ಬೊಮ್ಮನಹಳ್ಳಿ ವಲಯಕ್ಕೆ 195 ಮಂದಿ ಬದಿದ್ದು ಅವರಲ್ಲಿ 4 ಮಂದಿ ನಾಮತ್ತೆ ಆಗಿದ್ದಾರೆ. ಇನ್ನು 3ಮಂದಿಗೆ ಹೊಸ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ವಿಜಯಪಥ ಹೊಸ ಆಪ್ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/details?id=manyathy.vijayapatha.app

ದಾಸರಹಳ್ಳಿ ವಲಯಕ್ಕೆ 195ಮಂದಿ ಬಂದಿದ್ದು, 5ಜನ ನಾಪತ್ತೆಯಾಗಿದ್ದಾರೆ. ಬೆಂಗಳೂರು ಪೂರ್ವ 388- 44ಜನ ಮಿಸ್ಸಿಂಗ್‌, ಪಶ್ಚಿಮ 142ಜನ ಬಂದಿದ್ದಾರೆ. 3 ಜನಕ್ಕೆ ಕೊರೊನಾ ದೃಢ, 11ಜನ ನಾಪತ್ತೆಯಾಗಿದ್ದಾರೆ.

ದಕ್ಷಿಣವಲಯಕ್ಕೆ 304 ಜನ ಬಂದಿದ್ದಾರೆ. 14ಜನ ಮಿಸ್ಸಿಂಗ್‌ಆಗಿದ್ದಾರೆ. ಇವರಲ್ಲಿ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಮಹದೇವಪುರ 245ಜನ ಬಂದಿದ್ದಾರೆ, ಇವರಲ್ಲಿ 4 ಮಂದಿಗೆ ಸೋಂಕು ಪಾಸಿಟಿವ್‌ ಬಂದಿದೆ. ಇಲ್ಲಿ ಒಟ್ಟು 45 ಮಂದಿ ನಾಪತ್ತೆಯಾಗಿದ್ದಾರೆ.

ಆರ್‌ಆರ್‌ನಗರ ವಲಯಕ್ಕೆ 86ಜನ ಬಂದಿದ್ದು, ಯಾರಿಗೂ ಸೋಂಕು ಪತ್ತೆಯಾಗಿಲ್ಲ ಆದರೆ, 22 ಜನ ಮಿಸ್ಸಿಂಗ್‌ ಆಗಿದ್ದಾರೆ. ಇವರಿಗೆ ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಬೇಕು.

ಇನ್ನು ಕೊನೆಯದಾಗಿ ಯಲಹಂಕ 106ಜನ ಬಂದಿದ್ದಾರೆ. ಇವರಲ್ಲಿ 6ಜನ ನಾಪತ್ತೆಯಾಗಿದ್ದಾರೆ. ಇದು ಅತ್ಯಂತ ಆತಂಕಕಾರಿ ವಿಷಯವಾಗಿದ್ದು, ಒಟ್ಟು ಬೆಂಗಳೂರಿಗೆ ಬಂದಿರುವ 1512 ಮಂದಿಯಲ್ಲಿ 151ಜನರ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅವರ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಹೀಗೆ ಬ್ರಿಟನ್‌ನಿಂದ ನಿಮ್ಮ ಅಕ್ಕಪಕ್ಕದ ಮನೆಗೆ ಯಾರಾದರೂ ಬಂದಿದ್ದರೆ ಅವರ ಮಾಹಿತಿಯನ್ನು ಕೊಡಿ ಎಂದು ಅಧಿಕಾರಿಗಳು ಸ್ಥಳೀಯರಲ್ಲಿ ಮನವಿ ಮಾಡುತ್ತಿದ್ದಾರೆ.

ವಿಜಯಪಥ ಹೊಸ ಆಪ್ಬಿಡುಗಡೆಮಾಡಲಾಗಿದೆ ಎಲ್ಲರೂ ಡೌನ್ಲೋಡ್ಮಾಡಿಕೊಂಡು ನಿಮ್ಮ ಊರಿನ ಮತ್ತು ಇಷ್ಟವಾದ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/details?id=manyathy.vijayapatha.app

Leave a Reply

error: Content is protected !!
LATEST
KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌ KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!? BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್‌ ಸಮಾವೇಶ ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..! ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್