ಕೊರೊನಾಗೆ ರೆಮ್‌ಡಿಸಿವಿರ್‌ಗಿಂತ ಸ್ಟೆರಾಯಿಡ್ ಪರಿಣಾಮಕಾರಿ ಔಷಧ: ಸಚಿವ ಡಾ. ಸುಧಾಕರ್ ಅಭಿಮತ
ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಕೋವಿಡ್ ಸೋಂಕಿತರ ಚಿಕಿತ್ಸೆಗೆ ರೆಮ್‌ಡಿಸಿವಿರ್‌ಗಿಂತ ಸ್ಟೆರಾಯಿಡ್ ಪರಿಣಾಮಕಾರಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ನಗರದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಲು ಗುರುವಾರ ಬಂದು ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸಂಜೀವಿನಿ ಎಂದು ಬಿಂಬಿತವಾಗಿರುವ ರೆಮ್‌ಡಿಸಿವಿರ್ ವೈಜ್ಞಾನಿಕವಾಗಿ ಲೈಫ್ ಸೇವಿಂಗ್ ಡ್ರಗ್ (ಜೀವ ಉಳಿಸುವ ಔಷಧ) ಅಲ್ಲ. ಜನಸಾಮಾನ್ಯರಲ್ಲಿ ಈ ರೀತಿಯ ಅಭಿಪ್ರಾಯ ಮೂಡಿದೆ ಅಷ್ಟೇ. ವಿಶ್ಚ ಆರೋಗ್ಯ ಸಂಸ್ಥೆ ಪಟ್ಟಿಯಲ್ಲೂ ರೆಮ್‌ಡಿಸಿವಿರ್ ಇಲ್ಲ. ನಾನು ವೈದ್ಯನಾಗಿ ಹೇಳಬೇಕೆಂದರೆ ಅದರ ಬದಲು ಸ್ಟೆರಾಯಿಡ್ ಪರಿಣಾಮಕಾರಿಯಾಗಿದೆ. ಅದಕ್ಕಿಂತ ಕಡಿಮೆ ದರದ ಪರ್ಯಾಯ ಔಷಧಗಳಿವೆ ಎಂದು ತಿಳಿಸಿದರು.
ದೇಶದಲ್ಲಿ 8 ರಿಂದ 9 ಕಂಪನಿಗಳು ಮಾತ್ರ ರೆಮ್‌ಡಿಸಿವಿರ್ ಉತ್ಪಾದಿಸುತ್ತಿವೆ. ಈ ನಡುವೆ ಕೊರೊನಾ ಕಡಿಮೆಯಾದ ಹಿನ್ನೆಲೆ ರೆಮ್‌ಡಿಸಿವಿರ್ ಉತ್ಪಾದನೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಕೊರೊನಾ ಜಾಸ್ತಿಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಸ್ವಲ್ಪ ದಿನದಲ್ಲಿ ಪೂರೈಕೆ ಸರಿದಾಋಿಗೆಬರಲಿದೆ ಎಂದು ವಿವರಿಸಿದರು.
ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು. ಕೇಂದ್ರ ಸರ್ಕಾರ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ. ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ. ರಾಜಸ್ಥಾನಕ್ಕೆ ಲಸಿಕೆ ಅಮೆರಿಕಾದಿಂದ ತೆಗೆದುಕೊಂಡು ಬಂದರಾ? ಎಲುಬಿಲ್ಲದ ನಾಲಿಗೆ ಅಂತಾ ಏನೇನೋ ಮಾತನಾಡಬಾರದು. ಆಡಳಿತ ಪಕ್ಷದವರಾಗಲಿ, ವಿಪಕ್ಷದವರಾಗಲಿ ಕೊರೊನಾ ಬಗ್ಗೆ ಆರೋಪ ಮಾಡಿದರೆ ಸಣ್ಣವರಾಗುತ್ತಾರೆ ಎಂದು ಕಿಡಿಕಾರಿದರು.
ಯಾವುದೇ ಕಾರಣಕ್ಕೂ ರೋಗಿಗಳು ಭಯಪಡುವುದು ಬೇಡ. ಧೈರ್ಯದಿಂದ ಇದ್ದರೆ ಅರ್ಧ ರೋಗ ವಾಸಿಯಾದಂತೆ. ಅಲ್ಲದೆ ವೈದ್ಯರು ಸೂಚಿಸಿದ ಕ್ರಮಗಳನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಲು
ಕೊರೊನಾ ಸೋಂಕಿತರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಗೌಡ ಧೈರ್ಯ ತುಂಬಿದರು.
ನಂತರ ನಗರದಲ್ಲಿರುವ ಟ್ರಾಮಾ ಸೆಂಟರ್ ಭೇಟಿ ಕೊಟ್ಟ ಕೋವಿಡ್ ಚಿಕಿತ್ಸೆ ಬಗ್ಗೆ ವಿಚಾರಿಸಿದರು. ಜತೆಗೆ ಜಿಲ್ಲಾಸ್ಪತ್ರೆ, ನಾರಾಯಣ ಆಸ್ಪತ್ರೆ ಹಾಗೂ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳಿಗೂ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ, ಕೋವಿಡ್ ಲಸಿಕೆ ವಿತರಣೆ, ಚಿಕಿತ್ಸೆ, ಔಷಧ ವಿತರಣೆ ಸೇರಿದಂತೆ ಸ್ವಚ್ಛತೆ ಇತ್ಯಾದಿ ಸಂಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಾಸಕ ಎಲ್.ನಾಗೇಂದ್ರ, ವೈದ್ಯಾಧಿಕಾರಿಗಳು, ಇಲಾಖಾಧಿಕಾರಿಗಳು ಇದ್ದರು.