ಬೆಂಗಳೂರು: ಇಂದಿನಿಂದ (ಡಿ.7) ಆರಂಭವಾಗಿರುವ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಆರಂಭವಾದ ಪ್ರಶ್ನೋತ್ತರ ಸಮಯದಲ್ಲಿ ಕೃಷಿಯ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ನಮೂದಿಸುವ ಬೆಳೆಗಳ ಬಗ್ಗೆ ಚರ್ಚೆ ನಡೆಯಿತು.
ಈ ವೇಳೆ ಅಧಿಕಾರಿಗಳು ಎಲ್ಲೋ ಕುಳಿತುಕೊಂಡು ಫಸಲೊಡ್ಡಿರುವ ಬೆಳೆ ಬಿಟ್ಟು ಮತ್ತೊಂದು ಬೆಳೆಯನ್ನು ದಾಖಲಿಸಿ ಜಾರಿಕೊಳ್ಳುತ್ತಿರುವ ಬಗ್ಗೆ ಪ್ರಶ್ನಿಸಿ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ತೋರಿಸಲಾಯಿತು. ಜತೆಗೆ ಕಂದಾಯಿ ಇಲಾಖೆ ವಿಎ ಸೇರಿ ಇತರ ಅಧಿಕಾರಿಗಳು ಎಸಗುತ್ತಿರುವ ಎಡವಟ್ಟಿನಿಂದ ರೈತರು ಅನುಭವಿಸುತ್ತಿರುವುದರ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಅದನ್ನು ಸರಿಪಡಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಒತ್ತಾಯಿಸಲಾಯಿತು.
ಈ ಸಂಬಂಧ ವಿಧಾನಸೌಧದಲ್ಲಿ ಇಂದು ನಡೆದ ಚರ್ಚೆ ಎಲ್ಲರ ಗಮನ ಸೆಳೆಯಿತು.