Please assign a menu to the primary menu location under menu

CrimeNEWSನಮ್ಮಜಿಲ್ಲೆ

ಪೊಲೀಸರ ದಬ್ಬಾಳಿಕೆ ವಿರೋಧಿಸಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರೈತ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ನಗರದ ಮಚ್ಚೆ-ಹಲಗಾ ಬೈಪಾಸ್‌ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ.

ರೈತರ ವಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಕಾಮಗಾರಿ ಆರಂಭಿಸಲು ಮುಂದಾಗಿದೆ. ಕಾಮಗಾರಿಗೆ ಸರ್ವೆ ಆದ ಜಮೀನು ಬಿಟ್ಟು ಬೇರೆ ಜಮೀನು ತೆಗೆದುಕೊಂಡಿದ್ದಾರೆಂದು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಫಲವತ್ತಾದ ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತರ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪೊಲೀಸರ ವಿರುದ್ಧ ರೈತರು, ರೈತ ಮಹಿಳೆಯರು ಆಕ್ರೋಶ ಹೊರಹಾಕಿದರು. ಕಂಕುಳಲ್ಲಿ ಹಸುಗೂಸನ್ನು ಎತ್ತಿಕೊಂಡು ಬಂದು ರೈತ ಮಹಿಳೆ ಕಣ್ಣೀರು ಹಾಕಿದರು. ಆದರೂ ಪೊಲೀಸರು, ಎರಡು ಪ್ರತ್ಯೇಕ ವಾಹನದಲ್ಲಿ ರೈತರನ್ನು ವಶಕ್ಕೆ ಪಡೆದರು. ಈ ಪೊಲೀಸರ ದಬ್ಬಾಳಿಕೆ ವಿರುದ್ಧ ರೈತರು ಕಿಡಿಕಾರಿದರು.

ಪೊಲೀಸರ ಮುಂದೆಯೇ ಕುಡಗೋಲಿನಿಂದ ಕೊಯ್ದುಕೊಂಡು ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ರೈತನ ಕೈಯಿಂದ ಕುಡಗೋಲು ಕಸಿದುಕೊಳ್ಳಲು ಪೊಲೀಸರು ಹರಸಾಹಸ ಪಟ್ಟರು. ಇತ್ತ ರಸ್ತೆ ಕಾಮಗಾರಿ ವಿರೋಧಿಸಿ ರೈತರ ಪುತ್ರರೊಬ್ಬರು ಮರ ಏರಿ ಕುಳಿತು ಪ್ರತಿಭಟನೆ ನಡೆಸಿದರು.

ಜಮೀನು ಮಾಲೀಕ ಆಕಾಶ್ ಅನಗೋಳಕರ ಅವರು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ರೈತರು ಪೊಲೀಸರ ವಿರುದ್ಧ ತಿರುಗಿ ಬಿದ್ದರು. ಇಷ್ಟಾದರೂ ಪೊಲೀಸರು ಪ್ರತಿಭಟನಾಕಾರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು.

Leave a Reply

error: Content is protected !!
LATEST
4 ವರ್ಷಕ್ಕೊಮ್ಮೆ ಚೌಕಾಸಿ ನಡೆಸುವ ಬದಲು 7ನೇ ವೇತನ ಆಯೋಗ ಜಾರಿಮಾಡಿ: ನೌಕರರ ಸೇನೆ ಆಗ್ರಹ ದೇಶದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇನ್ನಿಲ್ಲ 2024ರ ಜನವರಿಯಿಂದ ಈವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು: ಅಪರ ಜಿಲ್ಲಾಧಿಕಾರಿ ಅಮರೇಶ್ KSRTC: ಡಿ.31ರಿಂದ ಕರೆ ಕೊಟ್ಟಿರುವ ಮುಷ್ಕರ ಬೆಂಬಲಿಸದ ನೌಕರರು- ವಿಲವಿಲ ಒದ್ದಾಡುತ್ತಿರುವ ಜಂಟಿ ಸಮಿತಿ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ.27ರಂದು BMTC & KSRTC ನಿವೃತ್ತ ನೌಕರರ ಪ್ರತಿಭಟನೆ ಮೈಸೂರು: ದೆಹಲಿ ರೈತ ಹೋರಾಟ ಬೆಂಬಲಿಸಿ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ KSRTC: ಯಾರದೋ ಆರ್ಥಿಕ ಲಾಭಕ್ಕಾಗಿ 4 ವರ್ಷಕ್ಕೊಮ್ಮೆ ನಡೆಯೋ ಈ ಚೌಕಾಸಿ ಪದ್ಧತಿ ಬಿಟ್ಟು ಶಾಶ್ವತ ಪರಿಹಾರಕ್ಕೆ ಬದ್ಧರಾಗೋ... KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್​​ ಬಸ್​ಗಳು- ಸಚಿವರಿಂದ ಲೋಕಾರ್ಪಣೆ KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್‌